ಚಿಂಚೋಳಿ ವೀರಶೈವ ಲಿಂಗಾಯತ ಸಭೆಯಿಂದ ಶತಾಯುಷಿ ಡಾ. ಭೀಮಣ್ಣ ಖಂಡ್ರೆಗೆ ಶ್ರದ್ದಾಂಜಲಿ

ಚಿಂಚೋಳಿ ವೀರಶೈವ ಲಿಂಗಾಯತ ಸಭೆಯಿಂದ ಶತಾಯುಷಿ ಡಾ. ಭೀಮಣ್ಣ ಖಂಡ್ರೆಗೆ ಶ್ರದ್ದಾಂಜಲಿ

ಚಿಂಚೋಳಿ ವೀರಶೈವ ಲಿಂಗಾಯತ ಸಭಾ ವತಿಯಿಂದ ಶತಾಯುಷಿ ಡಾ. ಭೀಮಣ್ಣ ಖಂಡ್ರೆಗೆ ಶ್ರದ್ದಾಂಜಲಿ ಸಲ್ಲಿಕ್ಕೆ

ಸಮಾಜದ ಮೂರು ರತ್ನಗಳು ಎನ್. ತಿಪ್ಪಣ್ಣ, ಶಾಮನೂರ ಶಿವಶಂಕ್ರಪ್ಪ, ಲೋಕನಾಯಕ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರನ ಅಗಲಿಕೆಯಿಂದ ಸಮಾಜಕ್ಕೆ ದೊಡ್ಡ ನಷ್ಟ : ಅಧ್ಯಕ್ಷ ಶರಣುಪಾಟೀಲ್ ಮೋತಕಪಳ್ಳಿ

ಚಿಂಚೋಳಿ : ರಾಷ್ಟ್ರೀಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಚಿವ, ಶತಾಯುಷಿ ಲೋಕನಾಯಕ ಡಾ ಭೀಮಣ್ಣ ಖಂಡ್ರೆ ಅವರು ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚಿಂಚೋಳಿ ತಾಲೂಕ ಘಟಕ ಅಧ್ಯಕ್ಷ ವಕೀಲ ಶರಣು ಪಾಟೀಲ್ ಮೋತಕಪಳ್ಳಿ ಮುಂದಾಳತ್ವದಲ್ಲಿ ಸಮಾಜದ ಬಂದುಗಳು ಮತ್ತು ಖಂಡ್ರೆ ಅವರ ಅಭಿಮಾನಿಗಳು ಮೌನಾಚರಣೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿ, ಶತಾಯುಷಿ ಖಂಡ್ರೆ ಆತ್ಮಕ್ಕೆ ಚಿರಶಾಂತಿಗೆ ಪ್ರಾರ್ಥಿಸಿದರು.

ಬಳಿಕ ಮಾತನಾಡಿ, ರಾಷ್ಟ್ರೀಯ ವೀರಶೈ ಲಿಂಗಾಯತ ಧರ್ಮ ಸಮಾಜಕ್ಕೆ ತಮದೇ ಆದ ಆಯಾಮದಲ್ಲಿ ಸಮಾಜ ಒಗ್ಗೂಡಿಸಲು ಶ್ರಮವಹಿಸಿರುವ ಸಮಾಜದ ಮೂರು ರತ್ನಗಳಾಗಿರುವ ಎನ್. ತಿಪ್ಪಣ್ಣ, ಶಾಮನೂರ ಶಿವಶಂಕ್ರಪ್ಪ ಮತ್ತು ಲೋಕನಾಯಕ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರನ್ನು ಕಳೆದುಕೊಂಡು ವೀರಶೈವ ಲಿಂಗಾಯತ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಪ್ರೊ. ಮಲ್ಲಿಕಾರ್ಜುನ್ ಪಾಲಾಮೂರ್, ಯುವ ಅಧ್ಯಕ್ಷ ವೀರೇಶ ಯಂಪಳ್ಳಿ, ಶಂಭುಲಿಂಗ್ ಶಿವಪೂರಿ, ಮುಖಂಡ ಗೋಪಾಲರಾವ್ ಕಟ್ಟಿಮನಿ, ವಕೀಲ ಶ್ರೀನಿವಾಸ್ ಬಂಡಿ ಆರ್ ಗಣಪತರಾವ್, ರಾಜಶೇಖರ್ ಹಿತ್ತಲ್, ಶ್ರೀನಿವಾಸ ತಾಜಾಲಾಪೂರ್, ಜಗನ್ನಾಥ ರೆಡ್ಡಿ, ಹಣಮಂತ ಪೂಜಾರಿ, ನಾರಾಯಣ ನಾಟಿಕಾರ್, ಮಲ್ಲಿಕಾರ್ಜುನ್ ಭೂಶೆಟ್ಟಿ ಅಣವಾರ, ಸಂಗಯ್ಯ ಸ್ವಾಮಿ, ಶಾಮರಾವ ಮೋಘ, ಚಂದ್ರಕಾಂತ ಕೆರೋಳ್ಳಿ, ನರಸಪ್ಪ ಅವರು ಉಪಸ್ಥಿತರಿದ್ದರು.