ಬಿಎಸ್‌ಎನ್‌ಎಲ್ 25 ನೇ ಸಂಸ್ಥಾಪನಾ ದಿನಾಚರಣೆ ಆಚರಣೆ

ಬಿಎಸ್‌ಎನ್‌ಎಲ್ 25 ನೇ  ಸಂಸ್ಥಾಪನಾ ದಿನಾಚರಣೆ ಆಚರಣೆ

ಬಿಎಸ್‌ಎನ್‌ಎಲ್ 25 ನೇ ಸಂಸ್ಥಾಪನಾ ದಿನಾಚರಣೆ ಆಚರಣೆ

ಕಲಬುರಗಿ: ನಗರದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಬಿಎಸ್‌ಎನ್‌ಎಲ್ 25 ನೇ ಸಂಸ್ಥಾಪನಾ ದಿನಾಚರಣೆಯನ್ನು ಮಕ್ಕಳೊಂದಿಗೆ ಕೆಕ್ ತಿನಿಸುವ ಮೂಲಕ ಸಂಭ್ರಮದಿAದ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ನಗರದ ಫೋರ್ಟ್ ರೋಡ್‌ನಲ್ಲಿರುವ ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್ ಕಛೇರಿಯಿಂದ ಬೈಕ್ ರ‍್ಯಾಲಿಯು ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕ್ ವರೆಗೆ ತಲುಪಿ ಹಿಂತಿರುಗಿತು. ರ್ಯಾಲಿಯ ಸಮಯದಲ್ಲಿ ಬಿಎಸ್‌ಎನ್‌ಎಲ್ ಸಿಬ್ಬಂದಿ ಮತ್ತು ಫ್ರಾಂಚೈಸಿಗಳು ಉತ್ಸಾಹದಿಂದ ಬಿಎಸ್‌ಎನ್‌ಎಲ್ ಜಿಂದಾಬಾದ್ ಸ್ವದೇಶಿ ತಂತ್ರಜ್ಞಾನ ಬಿಎಸ್‌ಎನ್‌ಎಲ್ 4ಜಿ ಮತ್ತು ಹರ್ ಘರ್ ಬಿಎಸ್‌ಎನ್‌ಎಲ್ ಫೈಬರ್ ಘೋಷವಾಕ್ಯವನ್ನು ಕರೆದರು.

ಕಳೆದ ವಾರ ಬಿಎಸ್‌ಎನ್‌ಎಲ್ ಕಲಬುರಗಿಯ ವಿವಿಧ ಶಾಲೆಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಿತ್ತು. ಚಿತ್ರಕಲಾ ಸ್ಪರ್ಧೆಯ ವಿಷಯವು ‘ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಳಸಿ ಸ್ಮಾರ್ಟ್ ಕಲಿಕೆ’ ಆಗಿತ್ತು. ಬಿಎಸ್‌ಎನ್‌ಎಲ್ ಕಲಬುರಗಿಯ ಪ್ರಧಾನ ವ್ಯವಸ್ಥಾಪಕರಾದ ಪಿ.ಪಾಣ ಪ್ರಸಾದ್ ಅವರು ಎಲ್ಲಾ ವಿಜೇತರನ್ನು ಅಭಿನಂದಿಸಿ ಬಹುಮಾನಗಳನ್ನು ವಿತರಿಸಿದರು. 

ವಿಜೇತ ಮಕ್ಕಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಿದ ಬಿಎಸ್‌ಎನ್‌ಎಲ್ ಮತ್ತು ಅವರ ಶಾಲೆಗಳಿಗೆ ಕೃತಜ್ಞತೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಎಂ ಬಿಎಸ್‌ಎನ್‌ಎಲ್, ಬಿಎಸ್‌ಎನ್‌ಎಲ್ ಸಾರ್ವಜನಿಕ ಕಂಪನಿ ಮತ್ತು ಬಿಎಸ್‌ಎನ್‌ಎಲ್ ಭಾರತದ ಸಾರ್ವಜನಿಕರಿಗೆ ಸೇರಿದೆ. ಬಿಎಸ್‌ಎನ್‌ಎಲ್‌ನ ಸರ್ಕಾರ, ನಿರ್ವಹಣೆ ಮತ್ತು ಸಿಬ್ಬಂದಿ ಭಾರತದ ಬಿಎಸ್‌ಎನ್‌ಎಲ್‌ಟಾಪ್ ಟೆಲಿಕಾಂ ಕಂಪನಿ ಮತ್ತು ವಿಶ್ವದ ಅಗ್ರ ಟೆಲಿಕಾಂ ಕಂಪನಿಯನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.