ಅಂಬೇಡ್ಕರ ಕುರಿತು ಕವಿತೆಗಳ ಆಹ್ವಾನ

ಅಂಬೇಡ್ಕರ ಕುರಿತು ಕವಿತೆಗಳ ಆಹ್ವಾನ

ಅಂಬೇಡ್ಕರ ಕುರಿತು ಕವಿತೆಗಳ ಆಹ್ವಾನ

ಕಲಬುರಗಿ: ಏಪ್ರಿಲ್ 14ರಂದು ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೇಯ ಜಯಂತಿಯ ಪ್ರಯುಕ್ತ ಪುಸ್ತಕವೊಂದನ್ನು ಪ್ರಕಟಿಸುವ ಹಿನ್ನೆಲೆಯಲ್ಲಿ ಕವನಗಳನ್ನು ಆಹ್ವಾನಿಸಲಾಗಿದೆ. ಕಲಬುರ್ಗಿಯ ಕನಸೇ ಪ್ರಕಾಶನದ ಪ್ರಕಾಶಕ ಮಂಜುನಾಥ ನಾಲವಾರಕರ್ ಅವರು ಈ ಹಿಂದೆ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ ಕುರಿತು ಕನಸೇ ಪ್ರಕಾಶನ ಅಡಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿದ್ದಾರೆ. ಇದೀಗ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ ರವರ 134ನೇಯ ಜಯಂತಿಯ ಸಂದರ್ಭದಲ್ಲಿ ಬಾಬಾ ಸಾಹೇಬರ ಕುರಿತು ಕವನ ಸಂಕಲನ ಬಿಡುಗಡೆಗೊಳಿಸಲು ಮುಂದಾಗಿದ್ದು , ಅದರ ಪ್ರಯುಕ್ತವಾಗಿ ಕವಿಗಳು, ಸಾಹಿತಿಗಳು, ಬರಹಗಾರರು ಮಾರ್ಚ 15 ರ ಒಳಗಾಗಿ krvgulbarga@gmail.com ಹಾಗೂ 3-911 ಡಾ.ಬಿ.ಆರ್. ಅಂಬೇಡ್ಕರ ನಗರ ಗಾಜೀಪೂರ ಕಲಬುರಗಿ 585101 ಈ ವಿಳಾಸಕ್ಕೆ ಕವಿತೆಗಳನ್ನು ಕಳುಹಿಸುವಂತೆ ಕೋರಿದ್ದಾರೆ.ಕವನ ಮತ್ತು ತಮ್ಮ ಸಂಕ್ಷಿಪ್ತ ಪರಿಚಯ ಹಾಗೂ ಭಾವಚಿತ್ರದೊಂದಿಗೆ ವಿಳಾಸಕ್ಕೆ ಕಳುಹಿಸಬೇಕೆ ಎಂದು ಅವರು ತಿಳಿಸಿದ್ದಾರೆ‌. ಹೆಚ್ಚಿನ ಮಾಹಿತಿಗಾಗಿ 7204591314 ಈ ನಂಬರಗೆ ಸಂಪರ್ಕಿಸಬೇಕು ಎಂದು ಕನಸೇ ಪ್ರಕಾಶನ ಪ್ರಕಾಶಕ ಮಂಜುನಾಥ ನಾಲವಾರಕರ್ ಅವರು ಪ್ರತಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.