ಕೋರವಾರದಲ್ಲಿ ಕಾರ ಹುಣ್ಣಿಮೆ ಹಬ್ಬ ಅದ್ದೂರಿ ಆಚರಣೆ

ಕೋರವಾರದಲ್ಲಿ ಕಾರ ಹುಣ್ಣಿಮೆ ಹಬ್ಬ ಅದ್ದೂರಿ ಆಚರಣೆ
ಕೋರವಾರ:ಇಂದು ಕೋರವಾರ ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಹಬ್ಬದ ಸಂದರ್ಭದಲ್ಲಿ ಗ್ರಾಮದ ಜನತೆ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಎತ್ತುಗಳಿಗೆ ಬಣ್ಣಗಳಿಂದ ಅಲಂಕರಿಸಿ ಮೆರವಣಿಗೆಯ ಮೂಲಕ ಅತಿ ಸಂತೋಷದಿಂದ ರೈತರು ಸಂಭ್ರಮದಲ್ಲಿ ಭಾಗಿಯಾದರು.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಊರಿನ ಹಿರಿಯರಾದ ಶ್ರೀ ಅನಿಲ್ ಕುಮಾರ್ ಮಹಾರಾಜ್, ಶ್ರೀ ಸಂಗಯ್ಯ ಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ್ ಗೌಡ, ಬಸವರಾಜ್ ಕಂಠಿ, ಶರಣು ಮೆಲ್ಕೇರಿ ಹಾಗೂ ಜನಪ್ರತಿನಿಧಿಗಳಾದ ಪ್ರಕಾಶ್ ಗುತ್ತೇದಾರ, ಗುಂಡಪ್ಪ ಸಾಲಿಮಠ, ಅಣ್ಣಪ್ಪ ಸುಬೇದಾರ್, ರಾಚಯ್ಯ ಸ್ವಾಮಿ ಹಿರೇಮಠ ಇವರುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಕೃತ್ಯಗಳು, ಪೂಜೆ-ಹವನ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.