ಜೀವನ ಪರಿಶುದ್ಧ ವಾಗಬೇಕಾದರೆ ಸತ್ಸಂಗ ಅತ್ಯವಶ್ಯಕ: ಶಿವಾನಂದ ಶಿವಾಚಾರ್ಯರು

ಜೀವನ ಪರಿಶುದ್ಧ ವಾಗಬೇಕಾದರೆ ಸತ್ಸಂಗ ಅತ್ಯವಶ್ಯಕ: ಶಿವಾನಂದ ಶಿವಾಚಾರ್ಯರು
ಕಮಲನಗರ : ಜೀವನದಲ್ಲಿ ಉತ್ತಮ ಬದುಕನ್ನು ಸಾಗಿಸುವುದಾದರೆ ಜೀವನವು ಪಾವನವಾಗಬೇಕು ಪಾವನ ವಾಗಲು ಅಲ್ಲಿ ಮನಸು ಪರಿಶುದ್ಧವಾಗಬೇಕು ಅದಕ್ಕಿರುವ ಒಂದೇ ಒಂದು ಸುಂದರ ಸಾಧನವೆಂದರೆ ಸತ್ಸಂಗವೇ ಕಾರಣ ಎಂದು ತಮಲುರಕರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಎಪ್ರಿಲ್ 20 ರಿಂದ ಜರಗುತ್ತಿರುವ ಆರನೇ ದಿನದ 53ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಮತ್ತು ಜ್ಞಾನೇಶ್ವರಿ ಪಾರಾಯಣ ನಿಮಿತ್ತ ಮಂಡಳಿ ವತಿಯಿಂದ ನಡೆಯುವ ಪ್ರವಚನ ಕಾರ್ಯಕ್ರಮವನ್ನು ಉದ್ದೇಶಿಸಿ ಜಗತು ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕು ಇದಕ್ಕಾಗಿ ಪರಮಾತ್ಮನಲ್ಲಿ ಭಕ್ತಿ ಆಳವಾಗಿ ಇರಬೇಕು. ಎಂಬುವಂತೆ ಶಿವನಾಮ ಸ್ಮರಣೆಯಿಂದ ಭಕ್ತಿಯ ಮಾರ್ಗ ನಡೆದುಕೊಂಡ ಶ್ರವಣಕುಮಾರನ ತಂದೆ ತಾಯಿಯ ಬದುಕಿನ ದೃಷ್ಟಾಂತವನ್ನು ನೀಡಿದರು.
ನಮ್ಮ ನಿಷ್ಠೆ ಜೀವನದ ಯಾವ ಸಂದರ್ಭದಲ್ಲಿ ಕುಗ್ಗದೆ ಅದು ಶಾಶ್ವತವಾಗಿ ಇರಬೇಕು ಆವಾಗ
ಭಕ್ತರ ಮನದಲ್ಲಿ ನಾನು ಇರುತ್ತೇನೆ
ಹೃದಯ ಮಂದಿರದಲ್ಲಿ ನೆಲೆಸಿವೆ ಎನ್ನುವಂತೆ
ಸಂತರು ಕೃಪಾ ಇರುವಲ್ಲಿ ಯಾವುದೇ ಸಂಶಯವಿಲ್ಲ ಅದಕ್ಕಾಗಿ, ತಾವು ಭಕ್ತರಾದವರು ಸಂತ್ಸಂಗದಿಂದ ಕೂಡಿರಬೇಕು
ವಿಶ್ವಾಸ ಕರುಣಾಮಯ ತೋರಿಸುವ ಮೂಲಕ ಬದುಕು ಸಾಗಬೇಕೆಂದು ಪರಮ ಪೂಜ್ಯ 108 ಶ್ರೀ ಶಿವಾನಂದ ಶಿವಾಚಾರ್ಯರು ಮಹಾಸ್ವಾಮಿಗಳು ತಮಲುರಕರ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಭಾಗವಂತ ಹಂಡೆ, ಪ್ರವೀಣ್ ಮಹಾರಾಜ, ಪ್ರಶಾಂತ್ ಬೀರಾದಾರ, ಶಂಕರ್ ವಡಗಾಂವೆ ಶಂಕರ್ ಪೂಜಾರಿ, ಸಂಜು ಪಾಂಡ್ರೆ,ವೈಜಿನಾಥ್ ಕಾರಾಗಿರೆ, ಗೌರಕಮೂಗಳೆ, ದತ್ತ ಕೊಡ್ಲೆ ವಿಲಾಸ್ ರಾವ್ ಜಾಧವ,ನಾರಾಯಣ ಪಾಟೀಲ್ , ಸತೀಶ್ ರಾಮಚಂದ್ರ, ಬಾಲಾಜಿ ಕುಡ್ಲೆ ಜ್ಞಾನೋಭಾ ಶಿಂಧೆ, ಕಿಶನ್ ರಾವ್ ಜಾದವ್, ರಾಮರಾವ್ ವಿಠ್ಠಲ್ ರಾವ್ ಪಾಟೀಲ್, ಬಾಳ ಸಾಹೇಬ್ ಶಂಕರರಾವ್ ಪಾಡೊದೆ, ಮನೋಜ ಬೋರ್ಳೆ, ವೇದಾಂತ ಬಿರಾದಾರ್, ಹರಿನಾಥ ಕದಂ, ಹರಿಪ್ರಸಾದ್, ಡಾಕ್ಟರ್ ಪಾಂಡುರಂಗ ರಘೂಜಿ, ರಾಜಕುಮಾರ ವಡಗೀರೆ ರಾಮರಾವ್ ಬಜಾಜ್ ಪಪ್ಪುವಾಡಿಕರ್ ಹಾಗೂ ಹೊಳೆಸಮುದ್ರ ಗ್ರಾಮದ ಸುತ್ತಮುತ್ತಲಿನ ಭಕ್ತರು ಉಪಸ್ಥಿತರಿದ್ದರು.