ಮಕ್ಕಳಲ್ಲಿ ದೇವರನ್ನು ಕಂಡು ಜ್ಞಾನದ ಹಸಿವು ನೀಗಿಸುವ ಕಾರ್ಯ ಮಾಡುವವನೇ ಶಿಕ್ಷಕ: ಮೋಹನ್ ರೆಡ್ಡಿ

ಮಕ್ಕಳಲ್ಲಿ ದೇವರನ್ನು ಕಂಡು ಜ್ಞಾನದ ಹಸಿವು ನೀಗಿಸುವ ಕಾರ್ಯ ಮಾಡುವವನೇ ಶಿಕ್ಷಕ: ಮೋಹನ್ ರೆಡ್ಡಿ
ಕಮಲನಗರ:ತಾಲೂಕಿನ ಖೇಡ ಸಂಗಮ ಗ್ರಾಮದ ಡಾ! ಚನ್ನಬಸವ ಪಟ್ಟದ್ದೇವರ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಪಾಲಕರ ಸಭೆಯಲ್ಲಿ ಪಾಲಕ ಮತ್ತು ಶಿಕ್ಷಕರು ಮಕ್ಕಳ ಎರಡು ಕಣ್ಣುಗಳಿದ್ದಂತೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನ ರೆಡ್ಡಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಬೇಕು ಮಕ್ಕಳೇ ದೇವರನ್ನು ಕಂಡು ಜ್ಞಾನದ ಹಸಿವು ನೀಗಿಸುವ ಕಾರ್ಯ ಶಿಕ್ಷಕರು ಮಾಡಬೇಕು ಗುಣಾತ್ಮಕ ಮತ್ತು ಸಂಸ್ಕಾರಯುತ ಶಿಕ್ಷಣಕ್ಕೆ ಬದುಕನ್ನೇ ಧಾರೆಯೆರೆದ ಲಿಂ.ಡಾ.ಚನ್ನಬಸವ ಪಟ್ಟದ್ದೇವರು ಮತ್ತು ನಾಡೋಜ ಡಾ ಬಸವಲಿಂಗಪಟ್ಟದ್ದೇವರ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆ ಶ್ಲಾಘನೀಯವಾಗಿದೆ ಎಂದರು .
ಡಾಕ್ಟರ್ ಎಸ್. ಎಸ್.ಮೈನಾಳೆ ಮಾತನಾಡಿ ಶಿಕ್ಷಕರು ಪ್ರತಿ ತಿಂಗಳಲ್ಲಿ ತಮ್ಮ ಶಾಲೆಗಳಲ್ಲಿ ಅಂತರ ಸಮಾಲೋಚನೆ ಸಭೆ ನಡೆಸಿ, ನಿರ್ವಹಿಸಿದ ಕರ್ತವ್ಯ, ಪಾಠ ಪ್ರವಚನ ಮತ್ತು ಮಕ್ಕಳ ಫಲಿತಾಂಶ ಹಾಗೂ ನ್ಯೂನ್ಯತೆ ಗಳ ಬಗ್ಗೆ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಮಗುವಿನ ಚಟುವಟಿಕೆ ಮತ್ತು ಇರುವ ಅಭಿರುಚಿಗಳ ಆಧರಿತ ಕಲಿಕೆಗೆ ಒತ್ತು ನೀಡಬೇಕು. ಮಕ್ಕಳ ಬೆಳವಣಿಗೆ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿ ಮಗುವಿಗೆ ಸಂಸ್ಕಾರ ಮತ್ತು ಗುಣಮಟ್ಟದ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸ್ಥಳೀಯ ಅಧ್ಯಕ್ಷ ನೀಲಕಂಠರಾವ ಬಿರಾದಾರ ಮಾತನಾಡಿದರು.ನೀಲಾಂಬಿಕೆ ಅಶ್ರಮದ ಡಾಕ್ಟರ್ ಮಹಾದೇವಮ್ಮಾತಾಯಿ ಸಾನ್ನಿಧ್ಯ ವಹಿಸಿದ್ದರು.
ಪಾಲಕರ ಪ್ರತಿನಿಧಿಗಳಾದ ಡಾ. ಬಸವರಾಜ್ ಲಕ್ಷ್ಮಣ್ ಮೋರೆ, ಚಂದ್ರಕಾಂತ್ ಅಳಂದಿ ಸಂಜೀವಕುಮಾರ್ ಪಾರಾ, ರವಿಕುಮಾರ್ ಬಬಿತಾ,ಜ್ಞಾನೋಬಾ ಪಾಂಚಾಳ, ರೇಣುಕಾ ಹಾಗೂ ಇನ್ನಿತರರು ಮಾತನಾಡಿದರು.
ವೇದಿಕೆಯಲ್ಲಿ ಸ್ಥಳೀಯ ಉಪಾಧ್ಯಕ್ಷ ಅನಿಲ್ ಹೊಳಸಂಬ್ರೆ, ಶರಣೆ ನೀಲಾಂಬಿಕೆ ತಾಯಿ, ಮುಖ್ಯಗುರು ಸಂಜೀವ ಕುಮಾರ ಮೆಂಗಾ ಹಾಗೂ ಪಾಲಕರು ಮತ್ತು ಮಕ್ಕಳು ಇದ್ದರು.
ಶಿಕ್ಷಕಿ ಪ್ರತಿಭಾ ವಚನ ಗಾಯನ ಮಾಡಿದರು. ಸಂಜೀವಕುಮಾರ ಮೆಂಗಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಸಂಗೀತಾ ಮೇತ್ರೆ ನಿರೂಪಿಸಿದರು, ಬಸವರಾಜ ತಿಂದೆ ವಂದಿಸಿದರು.