ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿ: ಮಾಲಾ ಕಣ್ಣಿ

ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿ: ಮಾಲಾ ಕಣ್ಣಿ
ಕಲಬುರ್ಗಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಪ್ರಾಣತೆತ್ತ ಅಮಾಯಕ ನಾಗರಿಕರ ಆತ್ಮಕ್ಕೆ ಶಾಂತಿಯ ಕೋರಿ, ಜಗತ್ ಸರ್ಕಲ್‌ನಿಂದ ಸರ್ದಾರ್ ವಲ್ಲಭಭಾಯಿ ವೃತ್ತದವರೆಗೆ "ಕ್ಯಾಂಡಲ್ ಮಾರ್ಚ್" ಹಾಗೂ ಮೌನ ಮೆರವಣಿಗೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಮಹಿಳಾಪರ ಚಿಂತಕಿ ಹಾಗೂ ನಾಲ್ಕುಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ. ಅವರು ಆಕ್ರೋಶ ವ್ಯಕ್ತಪಡಿಸಿ, “ಭಾರತೀಯ ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ಪಾಕಿಸ್ತಾನದ ಉಗ್ರಗಾಮಿಗಳು ಅನೇಕ ನಿರಪರಾಧಿಗಳನ್ನು ಹತ್ಯೆಗೊಳಿಸುತ್ತಿರುವುದು ತೀವ್ರ ಖಂಡನೀಯ. ಇಂತಹ ಉಗ್ರರ ವಿರುದ್ಧ ತಕ್ಷಣ ನಿರ್ಧಾರಾತ್ಮಕ ಕ್ರಮ ತೆಗೆದು, ಅವರಿಗೆ ತಕ್ಕ ಪಾಠ ಕಲಿಸಬೇಕಾಗಿದ್ದು, ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೆ ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಬೇಕು," ಎಂದು ಹೇಳಿದರು.
ಅವರು ಮುಂದುವರೆದು, “ಪಾಕಿಸ್ತಾನದ ಉಗ್ರಗಾಮಿಗಳು ಪದೇ ಪದೇ ಭಾರತೀಯ ಹಿಂದೂಗಳನ್ನು ನಿಗ್ರಹಿಸುವ ಅಪಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ಜೀವಂತವಾಗಿ ಸೆರೆ ಹಿಡಿದು ಭಾರತಕ್ಕೆ ತಂದು, ಕಠಿಣ ಶಿಕ್ಷೆ ನೀಡಬೇಕು,” ಎಂದು ಒತ್ತಾಯಿಸಿದರು.
ಮಹಿಳಾ ಮುಖಂಡೆ ಜ್ಯೋತಿ ಮರಗೋಳ ಅವರು, "ಭಾರತೀಯ ಹಿಂದೂಗಳಿಗೆ ರಕ್ಷಣೆ ನೀಡುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ಪಾಕಿಸ್ತಾನದ ಉಗ್ರರ ಸರ್ವನಾಶಕ್ಕೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದಮ್ಮ ಅವಂಟಿ, ವಿಜಯಲಕ್ಷ್ಮಿ ಪಾಟೀಲ್, ಭಾಗೀರಥಿ ಗುನ್ನಾಪೂರ್, ವಾಣಿಶ್ರೀ ಸಗರಕರ್, ಮಾಲತಿ ರೇಷ್ಮಿ, ಸುಮಂಗಲಾ ಚಕ್ರವರ್ತಿ, ವಿಜಯಲಕ್ಷ್ಮಿ ಹಿರೇಮಠ್, ಶೀಲಾ ಕಲಬುರಗಿ, ಬನಶಂಕರಿ ಪಾಟೀಲ್, ಸ್ವಾತಿ ಮಡಿವಾಳ್, ಪುಷ್ಪ ಖಜೂರಿ, ವಿಶಾಲ ಅಭಿಷೇಕ್, ಸ್ನೇಹಾ, ರೋಮಾ ಅಗರವಾಲ್, ಜ್ಯೋತಿ ಶೇರಿಕಾರ್, ರಾಜೇಶ್ವರಿ ಪ್ರಭು, ಡಾ. ಅನಿತಾ ಗೌರಾ ಕೋಣಿನ್, ಅಂಬಿಕಾ ಪ್ರಭು, ನಿರಂಜನಾ ಭೋವಿ, ಜಯಶ್ರೀ ಜಮಾದಾರ, ಶ್ರೇಯಾಂಕ್ ಕಣ್ಣಿ, ರಾಜು ನಾಗನಹಳ್ಳಿ, ಉದಯಕುಮಾರ್, ಸುರೇಶ್ ಬಡಿಗೇರ್, ನರಸಿಂಹ ಮೆಂಡನ್, ಸುಭಾಷ್ ಮೇತ್ರೆ, ಅನಿಲ್ ಬಿದನೂರ** ಮತ್ತು ಇತರರು ಉಪಸ್ಥಿತರಿದ್ದರು.
-