ವಡಗೇರಾದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅದ್ಧೂರಿಯಾಗಿ ಆಚರಣೆ

ವಡಗೇರಾದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅದ್ಧೂರಿಯಾಗಿ ಆಚರಣೆ

(ವಡಗೇರಾ ತಾಲೂಕ ವರದಿಗಾರರು :ಮಹಾದೇವಪ್ಪ ಗಂಗಣ್ಣೋರ್)

 ವಡಗೇರಾದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅದ್ಧೂರಿಯಾಗಿ ಆಚರಣೆ

 ಯಾದಗಿರ/ವಡಗೇರಾ:* ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಡಗೇರಾ ತಾಲೂಕಿನ ಯಾದಗಿರ ಭೀಮಾ ನದಿ ಸೇತುವೆಯಿಂದ ಕದ್ರಪೂರ್ ಕೃಷ್ಣ ನದಿ ಸೇತುವೆವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಕೈಗೊಳ್ಳಲಾಯಿತು. ವಿಶ್ವದಲ್ಲಿ ಭಾರತ ದೇಶವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದೆ. ರಾಷ್ಟ್ರ, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶ ತಿಳಿಸುವುದೇ ಮಾನವ ಸರಪಳಿಯ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಶಹಾಪುರ ಮತ್ತು ವಡಗೇರಾ ತಾಲೂಕಿನ ತಹಶೀಲ್ದಾರರು , ತಾಲೂಕು ಪಂಚಾಯಿತಿ ಇಓ. ಆರೋಗ್ಯ ಇಲಾಖೆಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಶಿಕ್ಷಕ ವೃಂದ ಅಧಿಕಾರಿ ವರ್ಗ, ಶಾಲಾ ಮಕ್ಕಳು, ತಾಲೂಕಿನ ಸಂಘ ಸಂಸ್ಥೆ ಗಳು,ರಾಜಿಕಿಯ ಮುಖಂಡರು ಇನ್ನಿತರರೂ ಭಾಗವಹಿಸಿದ್ದರು.