ಸ್ನೇಹಜೀವಿ ಪೋಲಿಸ್ ಅಧಿಕಾರಿ ಕಪಿಲದೇವ ಗಡದವರಿಗೆ ಮುಖ್ಯಮಂತ್ರಿ ಪದಕ
ಕಲಬುರಗಿ : ಮುಖ್ಯ ಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾದ ಕಪಿಲದೇವ ಗಡದ ರವರು ದಕ್ಷ ಪೊಲೀಸ್ ಅಧಿಕಾರಿ, ಬಡವರ ರಕ್ಷಕ, ರೌಡಿಗಳಿಗೆ ಸಿಂಹ ಸ್ವಪ್ನ ವಾಗಿದ್ದಾರೆ.
ಕಪಿಲದೇವ ಗಡದ ಅವರು ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕೂಹಿನುರ ದವರು, ಅವರ ತಂದೆ ಅಂಬಾರಾವ ತಾಯಿ ಮಹಾದೇವಿ ಇವರ ಕೊನೆಯ ಮಗನಾಗಿ 30-7-1978 ರಲ್ಲಿ ಕಲಬುರಗಿಯಲ್ಲಿ ಜನಿಸಿದರು. (ಬಿ.ಇ. ಮೆಕೇನಿಕಲ್) ಪದವಿ ಹೊಂದಿದಾರೆ, 1-9- 2005 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಹುದ್ದೆಗೆ ಸೇರಿದರು.,ಬಸವಕಲ್ಯಾಣ ,ಮಹಾಗಾಂವ, ಬೀದರ ನ್ಯುಟೌನ, ನೆಲೊಗಿ, ಶಹಬಾದ, ಕಲಬುರಗಿಯ ಬ್ರಹ್ಮಪುರ,ಬೀದರ ನ್ಯುಟೌನ ನಂತರ ಬೀದರನಲ್ಲಿ ಟ್ರಾಫಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ, ದಕ್ಷ ಆಡಳಿತಗಾರರಾಗಿ ಪ್ರಾಮಾಣಿಕ ಸೇವೆಸಲ್ಲಿಸಿದ್ದಾರೆ, ಪ್ರಸ್ತುತ ಇವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಅಮೂಲ್ಯ ಸೇವೆ ಪರಿಗಣಿಸಿ ಕರ್ನಾಟಕ ಸರಕಾರ ಇವರಿಗೆ ಮುಖ್ಯ ಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.