ಇಂದಿನ ಪ್ರಾಥಮಿಕ ಶಿಕ್ಷಣದಿಂದಲೆ ಮೌಲ್ಯಾಧಾರಿತ ಶಿಕ್ಷಣ ಪಠ್ಯಕ್ರಮದ ಅವಶ್ಯಕತೆ ಇದೆ ಉಮೇಶ್ ಜಾಧವ್

ಇಂದಿನ ಪ್ರಾಥಮಿಕ ಶಿಕ್ಷಣದಿಂದಲೆ ಮೌಲ್ಯಾಧಾರಿತ ಶಿಕ್ಷಣ ಪಠ್ಯಕ್ರಮದ ಅವಶ್ಯಕತೆ ಇದೆ ಉಮೇಶ್ ಜಾಧವ್
ಕಲಬುರ್ಗಿ: ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದಲೆ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ವಿಷಯದ ಅಗತ್ಯವಿದೆ ಎಂದು ಭೂತಾನ್ ರಾಯಲ್ ಯುನಿವರ್ಸಿಟಿಯ ಮಾಜಿ ಪ್ರಾಧ್ಯಾಪಕ ಪ್ರೊ ಉಮೇಶ್ ಜಾಧವ್ ಹೇಳಿದರು
ಅವರು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ವತಿಯಿಂದ ನಡೆದ ಸಾರ್ವತ್ರಿಕ ಮಾನವ ಮೌಲ್ಯಗಳ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಎರಡನೆ ದಿನದಂದು ನಡೆದ ಕುಟುಂಬದಲ್ಲಿ ಸಾಮರಸ್ಯ ನಂಬಿಕೆ ಗೌರವ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು
ಇಂದಿನ ವಿದ್ಯಾರ್ಥಿಗಳಿಗೆ ಕುಟುಂಬ,ಪರಸ್ಪರ ಸಂಬಂಧಗಳು, ಸಾಮರಸ್ಯ ಮತ್ತು ಗೌರವ ಎಂಬುದನ್ನು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ತಿಳಿಸಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ
ಕುಟುಂಬದಲ್ಲಿ ಸಾಮರಸ್ಯ ಎಂದರೆ ಎಲ್ಲರೂ ಚೆನ್ನಾಗಿ ಹೊಂದಿಕೊಳ್ಳುವುದು, ಪರಸ್ಪರ ಬೆಂಬಲಿಸುವುದು ಮತ್ತು ಒಬ್ಬರನೊಬ್ಬರು ನಂಬಿಕೆಯಿಂದ ಧನಾತ್ಮಕವಾದ ಯೋಚನೆಗಳಿಂದ ಕೂಡಿದ ಚರ್ಚೆಗಳಿಂದ ಮನೆಯಲ್ಲಿ ಸಂತೋಷ, ಶಾಂತಿಯುತ ವಾತಾವರಣವಿರುತ್ತದೆ
ಭಾವನೆಗಳು ನಿರ್ದಿಷ್ಟವಾಗಿರುತ್ತವೆ ಮತ್ತು ಸಂಬಂಧದಲ್ಲಿ 'ಮೌಲ್ಯ'ಗಳನ್ನು ಹೊಂದಿರುತ್ತವೆ. ಒಬ್ಬರೊಂದಿಗಿನ ಇನ್ನೊಬ್ಬರ ಭಾವನೆಗಳು ನಿರ್ದಿಷ್ಟವಾಗಿರುತ್ತವೆ, ಅವುಗಳನ್ನು ಗುರುತಿಸಬಹುದು, ಅರ್ಥಮಾಡಿಕೊಳ್ಳಬಹುದು ಮತ್ತು ಸಂತೋಷಪಡಿಸಬಹುದು. ನಾವು ಅವುಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ನಮಗೆ ಸಮಸ್ಯೆಗಳಿವೆ, ನಾವು ಎಂದಿಗೂ ಇನ್ನೊಬ್ಬರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ನಮಗೆ ಅನಿಸುತ್ತದೆ ಮತ್ತು ಇದು ನಮ್ಮ ಹತ್ತಿರದ ಸಂಬಂಧಗಳಲ್ಲಿಯೂ ಸಹ ನಮ್ಮನ್ನು ದ್ವೇಷದಿಂದ ಕಾಣುವಂತೆ ಮಾಡುತ್ತದೆ.ಎಂದು ಹೇಳಿದರು
ಪರಿಣಾಮಕಾರಿ ಸಂವಹನವು ಕುಟುಂಬದೊಳಗಿನ ಸಾಮರಸ್ಯದ ಮೂಲಾಧಾರವಾಗಿದೆ. ಮುಕ್ತ ಮತ್ತು ಪ್ರಾಮಾಣಿಕ ಸಂವಹನವು ವಿಶ್ವಾಸವನ್ನು ಬೆಳೆಸುತ್ತದೆ, ತಿಳುವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಸಂಘರ್ಷಗಳನ್ನು ಸೌಹಾರ್ದಯುತವಾಗಿ ಪರಿಹರಿಸುತ್ತದೆ
ಕುಟುಂಬದೊಳಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪರಸ್ಪರ ಗೌರವವು ಅತ್ಯಗತ್ಯ. ಪ್ರತಿಯೊಬ್ಬ ಕುಟುಂಬದ ಸದಸ್ಯರನ್ನು ಅವರ ಪ್ರತ್ಯೇಕತೆ, ಅಭಿಪ್ರಾಯಗಳು ಮತ್ತು ಕೊಡುಗೆಗಳಿಗಾಗಿ ಗೌರವಿಸಬೇಕು. ಪರಸ್ಪರರ ಗಡಿಗಳು, ಆಯ್ಕೆಗಳು ಮತ್ತು ವೈಯಕ್ತಿಕ ಸ್ಥಳವನ್ನು ಗೌರವಿಸುವುದು ಭದ್ರತೆ ಮತ್ತು ಸ್ವೀಕಾರದ ಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದರು ಒಟ್ಟಾರೆಯಾಗಿ ಇಂದಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಿಂದಲೆ ಮೌಲ್ಯ ಶಿಕ್ಷಣ ಆವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ,ಎಐಸಿಟಿಇ ಹ್ಯೂಮನ್ ವ್ಯಾಲ್ಯೂ ವಿಭಾಗದ ವೈಸ್ ಚೇರ್ಮನ್ ರಾಜು ಅಸ್ಥಾನಾ ,ಸಹ ಸಂಯೋಜಕರಾದ ಡಾ ಅನಿತಾ ಮಾನೆ, ಸೌಮ್ಯ ಪರಿವೀಕ್ಷಕರಾದ ಡಾ ಶಶಿಕಾಂತ ಕುರೋಡಿ ಕಾರ್ಯಕ್ರಮದ ಸಂಘಟಕರಾದ ಸಂಘಟಕರಾದ ಡಾ ಅಮರೇಶ ಪಾಟೀಲ್ , ಶ್ರೀಶೈಲ್ ಪತಾಟೆ ಉಪಸ್ಥಿತರಿದ್ದರು