ಶುಭ ಶುಕ್ರವಾರ: ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಆರಾಧನೆ

ಶುಭ ಶುಕ್ರವಾರ: ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಆರಾಧನೆ

ಶುಭ ಶುಕ್ರವಾರ: ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಆರಾಧನೆ

ಕಲಬುರಗಿ: ನಗರದ ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಪವಿತ್ರವಾರದ ಅಂಗವಾಗಿ ಶುಭ ಶುಕ್ರವಾರದ ವಿಶೇಷ ಆರಾಧನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿದವು. ಕ್ರೈಸ್ತ ಧರ್ಮದಲ್ಲಿ ವಿಶೇಷ ಮಹತ್ವವಿರುವ ಈ ದಿನದ ಪ್ರಯುಕ್ತ, ನೂರಾರು ಭಕ್ತರು ಚರ್ಚ್‌ಗೆ ಆಗಮಿಸಿ ಆರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಫೋಲ್ ಮಧುಕರ್, ಡಿಸೋಜಾ ಥಾಮಸ್, ಅನೀತಾಕುಮಾರಿ ಡಿಸೋಜಾ, ಸಲೋಮನ್ ದಿವಾಕರ್, ಸುಮಂತ ಡಿ ಸರಡಗಿ, ಐ ವಿಜಯಕುಮಾರ, ಜ್ಞಾನಮಿತ್ರ ಸಾಮ್ಯುವೆಲ್, ಸಂಧ್ಯಾರಾಜ್ ಸಾಮ್ಯುವೆಲ್, ಸೂರ್ಯಕುಮಾರ, ಸತೋಷಿ ಸುಧಿರ, ಶ್ರೀಕಾಂತ ಮಾಳಗಿ ಅವರು ಉಪಸ್ಥಿತರಿದ್ದು, ಭಕ್ತರಿಗೆ ಧಾರ್ಮಿಕ ಬೋಧನೆಗಳನ್ನು ನೀಡಿದರು.

ಪವಿತ್ರತೆಯ ಭಾವನೆಗಳಿಂದ ಕೂಡಿದ ಈ ದಿನದಲ್ಲಿ, ಎಲ್ಲರಿಗೂ ಶ್ರದ್ಧಾ ಹಾಗೂ ಶಾಂತಿಯ ಸಂದೇಶ ಹರಡಲಾಯಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ ಎಲ್ಲಾ ಧರ್ಮಗುರುಗಳಿಗೆ ಹಾಗೂ ಸಮುದಾಯದ ಸದಸ್ಯರಿಗೆ ಚರ್ಚ್ ಆಡಳಿತ ಸಮಿತಿ ಕೃತಜ್ಞತೆ ಸಲ್ಲಿಸಿದೆ.