ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ; ಸಿಎಂಗೆ ಮನವಿ
ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ; ಸಿಎಂಗೆ ಮನವಿ
ಕಮಲನಗರ: ಈಚೆಗೆ ಬೀದರ್‍ನಲ್ಲಿ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಅಮಾನವಿಯವಾಗಿಹಲ್ಲೆ ಮಾಡಿರುವ ನಾಲ್ಕು ಜನ ಅರಣ್ಯ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತುಸಿಬ್ಬಂದಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದರ ಜೊತೆಗೆ ಅವರನ್ನು ಸೇವೆಯಿಂದವಜಾ ಮಾಡುವಂತೆ ಒತ್ತಾಯಿಸಿ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಕಮಲನಗರ ತಾಲ್ಲೂಕು ಘಟಕಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ್ ಗೋಪಾಲಕೃಷ್ಣ ಅವರಿಗೆ ಗುರುವಾರಮನವಿ ಪತ್ರ ಸಲ್ಲಿಸಲಾಯಿತು.
ಹಿರಿಯ ಪತ್ರಕೃತ ಡಾ.ಎಸ್.ಎಸ್. ಮೈನಾಳೆ ಮಾತನಾಡಿ, ಏಪ್ರಿಲ್ 15ರಂದು ರಾತ್ರಿ 9 ಗಂಟೆಸುಮಾರಿಗೆ ಪತ್ರಕರ್ತ ರವಿ ತಂದೆ ಬಸವರಾಜ ಭೂಸಂಡೆ ಅವರು ಮನ್ನಾಯಿಖೆಳ್ಳಿಯಿಂದ ಅವರವಾಸಸ್ಥಳವಾದ ಚಿದ್ರಿಗೆ ಆಗಮಿಸುವ ಸಂದರ್ಭದಲ್ಲಿ ಅಲ್ಲಿಯ ಜನರ ಹಾಗೂ ಅರಣ್ಯಅಧಿಕಾರಿಗಳ ಮಧ್ಯ ವಾಗ್ವಾದ ನಡೆಯುತ್ತಿತ್ತು. ಇಲ್ಲಿ ಜನ ಏಕೆ ಸೇರಿದ್ದಾರೆ ಎಂದು ನೋಡಲು ಹೋದ ರವಿ ಮೇಲೆ ಏಕಾಯಕಿ ನಾಲ್ಕು ಜನ ಅರಣ್ಯ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತುಸಿಬ್ಬಂದಿಗಳಾದ ದಸ್ತಗಿರ್, ಶಾಂತಕುಮಾರ, ಗಜಾನಂದ ಹಾಗೂ ಸಂಗಮೇಶ ಎಂಬುವವರುಮುಗಿಬಿದ್ದು ಹಲ್ಲೆ ಮಾಡಿದಲ್ಲದೇ ಬೀದರ್‍ನ ಎಲ್ಲೆಡೆ ಸುತ್ತಾಡಿಸಿರುವುದು ನಿಜಕ್ಕೂಅಮಾನವಿಯ ಘಟನೆ ಬೆಳವಣಿಗೆ ನಡೆದಿದ್ದು ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮನೋಜಕುಮಾರ ಹಿರೇಮಠ ಮಾತನಾಡಿ, ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗಎಂದು ಹೇಳುವಾಗ ಪತ್ರಕರ್ತರಿಗೆ ಈ ರೀತಿ ಹಲ್ಲೆಯಾದರೆ ಸಾಮಾನ್ಯರ ಗತಿ ಏನು?. ಎಂಬಪ್ರಶ್ನೆ ಕಾಡತೊಡಗಿದೆ. ಸಮಾಜದ ಅಂಕು ಡೊಂಕುಗಳು ತಿದ್ದುವ ನಮಗೆ ರಕ್ಷಣೆ ಇಲ್ಲವಾದರೆ,ನಾವು ನಿರ್ಭಿತಕರಾಗಿ ಹಾಗೂ ನಿಸ್ಪಕ್ಷಪಾತವಾಗಿ ಕೆಲಸ ಮಾಡಲು ಹೇಗೆ..! ಸಾಧ್ಯ?ಅಸಾಧ್ಯವಾಗಿದೆ. ಹೀಗಾಗಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಘಟನೆಗೆ ಸಂಬಂಧಪಟ್ಟವರಮೇಲೆ ಹಲ್ಲೆ ಮಾಡಿದವರ ವಿರುದ್ಧ ನಾಲ್ವರ ವಿರುದ್ಧ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ,ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ಬಿ.ಹೆಡೆ, ರಾಜಶೇಖರ ಅಜ್ಜ, ಬಾಲಾಜಿ ಫಿರಂಗೆ, ಮಹಾದು ಬರ್ಗೆ,ರವಿ ವಲ್ಲೇಪುರೆ, ಮೊಯಿನ್ ಅತನೂರೆ, ಪರಮೇಶ್ವರ ರಾಂಪುರೆ, ಲಕ್ಷ್ಮಣ ರಾಠೋಡ್, ನಿತೀನಶಿವಣಕರ್, ಲಕ್ಷ್ಮಣ ರಾಠೋಡ್ ಮುರ್ಕಿ, ಸಂಗಮೇಶ್ವರ ಮುರ್ಕೆ, ಸಂತೋಷ ದಿಂಡೆ ಹಾಗೂಸದಸ್ಯರು ಇದ್ದರು.