ಮಲ್ಲಿಕಾರ್ಜುನ ಪಾಲಾಮೂರ್ ಅವರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ

ಮಲ್ಲಿಕಾರ್ಜುನ ಪಾಲಾಮೂರ್ ಅವರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ

ಮಲ್ಲಿಕಾರ್ಜುನ ಪಾಲಾಮೂರ್ ಅವರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ

ಚಿಂಚೋಳಿ: ಸಮಗ್ರ ಕರ್ನಾಟಕ ವಚನ ಉಪಧ್ಯಾಯರ ಸಂಘ ರಾಜ್ಯಘಟಕದ ವತಿಯಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ ಅವರಿಗೆ ಆದರ್ಶ 'ಬಸವಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದವೀರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರೆ, ಸಂಘಟನೆಯ ಪ್ರಮುಖರು ಭೀಮಣ್ಣ ಸಾಲಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ, ರಾಜಯೋಗಿನಿ ಬಿ.ಕೆ. ಗಿರಿಜಾ ಅಕ್ಕ, ಸಂಘಟನೆಯ ರಾಜ್ಯಾಧ್ಯಕ್ಷ ಗುರುಪಾದ ಕೊಗನೂರು ಹಾಗೂ ತಾಲೂಕಾ ಅಧ್ಯಕ್ಷ ಜಯಶೀಲಾ ಬಿರಾದಾರ ಉಪಸ್ಥಿತರಿದ್ದರು.

ಪ್ರಶಸ್ತಿಗೆ ಭಾಜನರಾದ ಪಾಲಾಮೂರ್ ಅವರನ್ನು ಚಿಂಚೋಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ಮಹಾದೇವಪ್ಪ ಪಾಟೀಲ, ರಾಜಶೇಖರ ಮುಸ್ತರಿ, ಸುರೇಶ ದೇಶಪಾಂಡೆ, ಮಲ್ಲಿಕಾರ್ಜುನ ಬುಶೆಟ್ಟಿ ಹಾಗೂ ನೀಲಕಂಠ ಸೀಳಿನ ಅಭಿನಂದಿಸಿ ಶುಭಹಾರೈಸಿದರು.