ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆ – ಶಹಾಬಾದದಲ್ಲಿ ಸರಕಾರಿ ಅಧಿಕಾರಿಗಳಿಂದ ಗೌರವ ನಮನ

ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆ – ಶಹಾಬಾದದಲ್ಲಿ ಸರಕಾರಿ ಅಧಿಕಾರಿಗಳಿಂದ ಗೌರವ ನಮನ
ಶಹಾಬಾದ : ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರ 134ನೇ ಜಯಂತಿಯ ಪ್ರಯುಕ್ತ ತಾಲ್ಲೂಕ ಆಡಳಿತದ ವತಿಯಿಂದ ಶಹಾಬಾದನಲ್ಲಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ ಅವರು ಡಾ. ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಡಾ. ಕೆ. ಗುರುಲಿಂಗಪ್ಪ, ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ತಾಲ್ಲೂಕ ಪಂಚಾಯತ್ ಇಒ ಮಲ್ಲಿನಾಥ ರಾವೂರ, ಸಿಡಿಪಿಒ ಡಾ. ವಿಜಯಲಕ್ಷ್ಮಿ ಹೇರೂರ, ಜೆಸ್ಕಾಂ ಎಇಇ ಯೂನುಷ ಉಪಸ್ಥಿತರಿದ್ದರು.
ಶಹಾಬಾದ ವರದಿ: ನಾಗರಾಜ್ ದಂಡಾವತಿ