ಬಿಜೆಪಿ ಗ್ರಾಮೀಣ ಮಂಡಲದ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಕೃಷ್ಣ ಕುಶಳಕರ್ ಅವರ ಜನ್ಮದಿನ ಆಚರಣೆ

ಬಿಜೆಪಿ ಗ್ರಾಮೀಣ ಮಂಡಲದ ಎಸ್ಸಿ ಮೋರ್ಚಾದ ಕಾರ್ಯದರ್ಶಿ  ಕೃಷ್ಣ ಕುಶಳಕರ್ ಅವರ ಜನ್ಮದಿನ ಆಚರಣೆ

ಬಿಜೆಪಿ ಗ್ರಾಮೀಣ ಮಂಡಲದ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಕೃಷ್ಣ ಕುಶಳಕರ್ ಅವರ ಜನ್ಮದಿನ ಆಚರಣೆ

ಕಲಬುರಗಿ : ನಗರದ ಹೈಕೋರ್ಟ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕುಮಸಿ ಗ್ರಾಂ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೆಲೂರ ಜೆ ಗ್ರಾಮದ ಸದಸ್ಯರು ಹಾಗೂ ಬಿಜೆಪಿ ಗ್ರಾಮೀಣ ಮಂಡಲದ ಎಸ್ಸಿ ಮೋರ್ಚಾದ ಕಾರ್ಯದರ್ಶಿಗಳಾದ ಕೃಷ್ಣ ಕುಶಳಕರ್ ಅವರು ಜನ್ಮದಿನದ ನಿಮಿತ್ತ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ ಹಾಗೂ ಕೆಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಂತರ ಅವರನ್ನು ಅವರ ಗೇಳೆಯರ ಬಳಗದಿಂದ ಸನ್ಮಾನಿಸಲಾಯಿತು. 

ಬಳಿಕ ಮಾತನಾಡಿದ ಡಾ. ಮಲ್ಲಿಕಾರ್ಜುನ್ ಅವರು ಕೃಷ್ಣಾ ಕುಶಳಕರ್ ಅಂದ್ರೆ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು ಹಾಗೂ ಕಲಬುರಗಿ ಗ್ರಾಮಿಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ್ ಅವರ ಅಪ್ಪಟ ಅಭಿಮಾನಿಯಾದ ಕೃಷ್ಣ ಕುಶಳಕರ್ ಅವರಾಗಿದ್ದಾರೆ ಹೀಗಾಗಿ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಯಾವಾಗಲೂ ಜನಪರ ಕೆಲಸವನ್ನು ಮಾಡಲು ಆ ಭಗವಂತ ಅವರಿಗೆ ಆಯುಷ್ ಆರೋಗ್ಯ ಸಮೃದ್ಧಿ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿ ಶಿವಶಂಕರ, ಶ್ರೀಕಾಂತ್ ರೆಡ್ಡಿ, ಶರಣು ಕರಗಾರ, ಗುಂಡು ಪಾಟಿಲ್, ಯಲ್ಲಪ್ಪ ಸಿರನೂರ, ನಾಗೇಶ ಕುಶಾಳಕರ, ಮಲ್ಲಿಕಾರ್ಜುನ ಚೌದ್ರಿ ಹಾಗರಗಿ, ಪರಶುರಾಮ ಮಾಡ್ಯಾಳಕರ, ಹಣಮಂತ ಭಜಂತ್ರಿ, ಅವಿನಾಶ್ ಮೂಲಗೆ, ಅನುಪ ಪಾಟೀಲ್ ಜಿವಣಗಿ, ಬಸ್ಸು ಬೇಲೂರ, ಅರ್ಜುನ ಬೇಲೂರ, ಮೌನೇಶ ಸಾತಖೇಡ, ಹುಸೆನ ಕೌವಬಲಗಿ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.