ಪರೀಕ್ಷಾ ವೇಳಾಪಟ್ಟಿಯನ್ನೇ ಬದಲಾಯಿಸಿದ ಪ್ರಾಂಶುಪಾಲ.

ಪರೀಕ್ಷಾ ವೇಳಾಪಟ್ಟಿಯನ್ನೇ ಬದಲಾಯಿಸಿದ ಪ್ರಾಂಶುಪಾಲ.
ಶಹಾಪುರ : ವಿದ್ಯಾರ್ಥಿಗಳ ಪರೀಕ್ಷೆಯ ವೇಳಾಪಟ್ಟಿಯನ್ನೇ ಬದಲಿಸಿ ಸರಕಾರದ ಆದೇಶವನ್ನು ಧಿಕ್ಕರಿಸಿ ತಮ್ಮಅನುಕೂಲಕ್ಕೆ ತಕ್ಕಂತೆ ಬೇಕಾ ಬಿಟ್ಟಿಯಾಗಿ ಪರೀಕ್ಷೆ ನಡೆಸಿ ಕೈ ತೊಳೆದುಕೊಂಡಿರುವ ಘಟನೆ ತಾಲೂಕಿನ ಬೇವಿನಹಳ್ಳಿ ಕ್ರಾಸ್ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದೆ. ಸಂಬಂಧಪಟ್ಟ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ,ರಾಜಶೇಖರ ಮಾಲಿ ಪಾಟೀಲ್ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೇವಿನಹಳ್ಳಿ ಕ್ರಾಸ್ ನಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಂಕಲನಾತ್ಮಕ ಪರೀಕ್ಷೆಯನ್ನು ಸೆಪ್ಟೆಂಬರ್ 12ರಿಂದ 19 ರವರೆಗೆ ನಡೆಸುವಂತೆ ವೇಳಾಪಟ್ಟಿಯ ಆದೇಶ ಹೊರಡಿಸಿದೆ,ಆದರೆ ಈ ಆದೇಶವನ್ನು ಧಿಕ್ಕರಿಸಿ,ಸೆಪ್ಟಂಬರ್ 19 ರಂದು ನಡೆಯಬೇಕಿದ್ದ,ದೈಹಿಕ ಶಿಕ್ಷಣ ಮತ್ತು ಗಣಕಯಂತ್ರ, ಚಿತ್ರಕಲೆ,ಸಂಗೀತ, ಪರೀಕ್ಷೆಗಳನ್ನು,ಒಂದು ದಿನ ಮುಂಚಿತವಾಗಿ ನಡೆಸಿ ವಿದ್ಯಾರ್ಥಿಗಳಿಗೆ ಮನೆಗೆ ಕಳಿಸಿಕೊಟ್ಟಿದ್ದಾರೆ,ಈ ರೀತಿ ನಡೆದುಕೊಂಡರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹುದೊಡ್ಡ ಪೆಟ್ಟು ಬಿದ್ದು,ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲರು ಹಾಗೂ ವಾರ್ಡನ್ ಸೇರಿಕೊಂಡು ವ್ಯವಸ್ಥಿತವಾಗಿ ಅವ್ಯವಹಾರ ಮಾಡುವುದಕ್ಕೆ ಸಿಕ್ಕ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ,ಆದ್ದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾನತುಗೊಳಿಸಬೇಕು, ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.