ಸಾಹಿತ್ಯ ಅಕಾಡೆಮಿ- ಚಕೋರ ವೇದಿಕೆ ಉಪನ್ಯಾಸ

ಸಾಹಿತ್ಯ ಅಕಾಡೆಮಿ- ಚಕೋರ ವೇದಿಕೆ ಉಪನ್ಯಾಸ

ಸಾಹಿತ್ಯ ಅಕಾಡೆಮಿ- ಚಕೋರ ವೇದಿಕೆ ಉಪನ್ಯಾಸ

ವೈಚಾರಿಜ ಚಿಂತನೆ ಬಿತ್ತಿದ ಕವಿ ಜಿಎಸ್ಎಸ್,- ರೋಳೇಕರ

ಕಲಬುರಗಿ:ಕವಿ ಪ್ರೀತಿ,ಪ್ರೇಮದ ಜೊತೆಗೆ ವೈಚಾರಿಕ ಚಿಂತನೆಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತವಾಗುವ ಅವರ ಸಾಹಿತ್ಯ ಸರ್ವಕಾಲಿಕ ಸತ್ಯವಾಗಿವೆ.ಕನ್ನಡ ನಾಡು, ನುಡಿ ಭಾಷೆ,ಸಂಸ್ಕೃತಿಯ ಮೂಲಕ ವೈಚಾರಿಕ ಚಿಂತನೆ ಬಿತ್ತಿದವರು ಜಿ.ಎಸ್.ಶಿವರುದ್ರಪ್ಪ ಎಂದು ಸಾಹಿತಿ- ವಿಶ್ರಾಂತ ಪ್ರಾಧ್ಯಾಪಕ ಡಾ.ನಾರಾಯಣ ರೋಳೇಕರ ಅಭಿಮತ ಪಟ್ಟರು.

    ಶ್ರೀ ವಿಠ್ಠಲರಾವ ತುಕಾರಾಮ ಸುತ್ರಾವೆ ಕನ್ನಡ ಶಾಲೆ ಕಲಬುರಗಿ ಯ.ರೋಟರಿ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಜಿಲ್ಲಾ ಘಟಕ ಏರ್ಪಡಿಸಿದ್ದ ಹಣತೆಯ ಕವಿ ಜಿ.ಎಸ್.ಶಿವರುದ್ರಪ್ಪ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ ಅವರ ಹಾಡಿನ ರೂಪದಲ್ಲಿ ಅನೇಕ ಕವನಗಳು ಇವೆ, ವಿದ್ಯಾರ್ಥಿಗಳು ಅವರಂತೆ ಬರೆಯಲು ತೊಡಗಿಸಿಕೊಳ್ಳಲು ಕರೆ ನೀಡಿದರು.

    ಶಿವರುದ್ರಪ್ಪ ಅವರು ಕಾವ್ಯದ ಮೂಲಕ ಪ್ರಸಿದ್ದರಾಗಿ ಕತ್ತಲೆಯ ಕಳಚಿ ಬೆಳಕು ಕೊಟ್ಟ ಹಣತೆಯ ಕವಿ.ಅವರೊಬ್ಬ ಗುರು- ಶಿಷ್ಯ ಪರಂಪರೆ ಬೆಳೆಸಿದವರು.ವಿಮರ್ಶೆ,ಅನುವಾದ,ಪ್ರವಾಸ,ಮೀಮಾಂಸೆ ಅನೇಕ ಕಾರ್ಯ ಮಾಡಿದ ಅದ್ಭುತವಾದ್ದದ್ದು .ಅವರು ಸಮನ್ವಯ ಕವಿಯಾಗಿ ಕನ್ನಡ ನಾಡಿನ ಮೇರು ಕವಿ.ಜಾತಿ, ಮತ,ಪಂಥ ಮೀರಿದ ವಿಶ್ವಮಾನವತ್ವದ ಕವಿಯಾಗಿ ನಿಂತವರು ಎಂದು ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಸಂಗನಗೌಡ ಹಿರೇಗೌಡರು ಉಪನ್ಯಾಸದಲ್ಲಿ ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ ಶ್ರೀ ಚನ್ನಬಸಪ್ಪ ಸಮ್ಮಾನೆ ಎಸ್.ವಿಟಿ ರೋಟರಿ ಕ್ಲಬ್ ಶಾಲೆಯ ಕಾರ್ಯದರ್ಶಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಅಧ್ಯಯನ ಮಕ್ಕಳಿಗೆ ಹುಟ್ಟಿಸುವ ಕಾರ್ಯಕ್ರಮ ಇಂತಹ ಉಪನ್ಯಾಸ ಹೆಚ್ಚು ಅವಶ್ಯವೆಂದರು. ಮುಖ್ಯ ಅತಿಥಿಗಳಾದ ಮುಖ್ಯ ಗುರುಗಳಾದ ಪಾಂಡುರಂಗ ಕಟಕೆ ಮಾತನಾಡಿ ಶಿವರುದ್ರಪ್ಪ ಬಹು ಮುಖ ಪ್ರತಿಭೆಯ ಕವಿ.ಶತಮಾನ ಕಂಡ ಅವರ ಬದುಕು- ಬರಹ ನಮಗೆ ಸ್ಪೂರ್ತಿ ಎಂದರು.

ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಅಕಾಡೆಮಿ ಹಾಕಿಕೊಂಡ ಯೋಜನೆ, ಚಕೋರ ವೇದಿಕೆ ವಿದ್ಯಾರ್ಥಿ ಯುವಕರಿಗಾಗಿಯೇ ಇರುವ ವೇದಿಕೆ ಸಾಹಿತ್ಯ ಸಂಸ್ಕೃತಿ, ಕಲಿಯಬೇಕಾದ ಮಾರ್ಗ ಸೂಚಿ ಕಾರ್ಯಕ್ರಮವಾಗಿವೆ ಎಂದು ಪ್ರಾಸ್ತಾವಿಕ ನುಡಿಯಾಡಿದರು. 

ಪೆಬ್ರವರಿ ೨೮ ವಿಜ್ಞಾನ ದಿನಾಚರಣೆ ಪ್ರಯುಕ್ತ ಶಾಲೆಯ ವಿಜ್ಞಾನ ಸಹ ಶಿಕ್ಷಕಿ ಶ್ರೀಮತಿ ಫ್ರಫುಲಕುಮಾರಿ ಭೂಸಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ನಾಗಮ್ಮ ದೊರೆ,ಶರಣಮ್ಮ ಬಾಂಡೆದ್, ಜಗದೀಶ್ ಬಿರಾದಾರ, ಬಸವರಾಜ ಮಿಣಜಗಿ, ಮಲ್ಲಿಕಾರ್ಜುನ ಬಿರಾದಾರ,ರೋ.ಬಾಬುರಾವ್ ತಳವಾರ ಮತ್ತು ವಿದ್ಯಾರ್ಥಿಗಳು

ಢಾಕಪ್ಪ ಎಂ.ಕೆ.ನಿರೂಪಿಸಿದರು. ಡಾ.ಸಿದ್ದಪ್ಪ ಹೊಸಮನಿ ವಂದಿಸಿದರು.