ಶಾಂತಿ ಸಭೆ
                                ಶಾಂತಿ ಸಭೆ
ಕಮಲನಗರ: ತಾಲೂಕಿನ ಡೋಣಗಾಂವ (ಎಂ )ಗ್ರಾಮದಲ್ಲಿ ದಿನಾಂಕ ನವೆಂಬರ್ 05 ರಂದು ನಡೆಯಲಿರುವ ಮಹಾಳಪಯ್ಯ ಜಾತ್ರಾ ಮಹೋತ್ಸವ ನಿಮಿತ್ಯ ಶಾಂತಿ ಸಭೆ ನಡೆಸಲಾಗಿತು.
ಸಿಪಿಐ ಶ್ರೀಕಾಂತ್ ಅಲ್ಲಾಪುರೆ ಮಾತನಾಡಿ ಜಾತ್ರೆಗೆ ಭಕ್ತಜನ ಹೆಚ್ಚು ಬರುವುದರಿಂದ ಜನದಟ್ಟಣೆ ನಿಯಂತ್ರಿಸಲು ತಮ್ಮ ಇಲಾಖೆ ಕಠಿಣ ಸಂಚಾರಿ ಕ್ರಮ ಕೈಗೊಳ್ಳಲಾಗುತ್ತದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಈ ಸಭೆಯ ಅಧ್ಯಕ್ಷತೆ ವಹಿಸಿರುವ ಹಾವಾಗಿ ಸ್ವಾಮಿ ಮಠದ ಶಂಭು ಲಿಂಗ ಶಿವಾಚಾರ್ಯರು ಮಾತನಾಡಿ ಗಡಿಭಾಗದಲ್ಲಿ ತನ್ನದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದೆ ಈ ಜಾತ್ರೆಗೆ ಕರ್ನಾಟಕ ಅಲ್ಲದೆ ಮಹಾರಾಷ್ಟ್ರ,ಆಂದ್ರ ಪ್ರದೇಶ ಮತ್ತು ತೆಲಂಗಾಣ ಪ್ರದೇಶದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಅದಕ್ಕೆ ಶಾಂತಿಯಿಂದ ಜಾತ್ರೆ ನಡೆಯುತ್ತದೆ, ಅದಕ್ಕೆ ಪೋಲಿಸ್ ಇಲಾಖೆಯ ವರೊಂದಿಗೆ ತಾವು ಸಹಕರಿಸಬೇಕೆಂದು ಎಂದರು.
ಈ ಸಭೆಯಲ್ಲಿ ಪಿಎಸ್ಐ ಆಶಾ ರಾಠೋಡ ಗ್ರಾಮದ ವಿಜಯಕುಮಾರ ದೇಶಮುಖ ಗಣೇಶ ಕಾರೆಗೀರೆ ಮಾಣಿಕ ಹೊಂಡಾಳೆ, ಹಾಗೂ ಹಾವಾಗಿ ಸ್ವಾಮಿ ಭಜನೆ ಮಂಡಳಿಯವರು ಇದ್ದರು.
