ಸ್ಟಾರ್ ಕೇರ್ ಆಸ್ಪತ್ರೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ
ಸ್ಟಾರ್ ಕೇರ್ ಆಸ್ಪತ್ರೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ
ಕಲಬುರಗಿ : ಯೋಧರು ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ, ತ್ಯಾಗವನ್ನು ಯುವಪೀಳಿಗೆ ನೆನೆಯುವಂತಾಗಬೇಕು ಎಂದು ಕಲಬುರಗಿ ದಕ್ಷೀಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದರು.
ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಸ್ಟಾರ್ ಕೇರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸ್ವಾಂತತ್ರ‍್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ ನಿವೃತ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಟಾರ್ ಕೇರ್ ಆಸ್ಪತ್ರೆಯ ತಂಡ ಸ್ವಾಂತತ್ರ‍್ಯ ದಿನಾಚರಣೆ ಅಂಗವಾಗಿ ನಮ್ಮ ಜಿಲ್ಲೆಯ ನಿವೃತ ಯೋಧರಿಗೆ ಸನ್ಮಾನಿಸಿ ಗೌರವಿಸಿರುವ ಕಾರ್ಯ ಶ್ಲಾಘನಿಯವಾಗಿದೆ ಎಂದರು.
ನAತರ ವಿಧಾನ ಪರಿಷತ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ 'ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವದರಿಂದ ನಾವೆಲ್ಲರೂ ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ' ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ, ಬಸವರಾಜ್ ಮಾಲಿ, ಮಹೆಮೂದ ಪಟೇಲ್ ಸಾಂಸರಗಾಂವ, ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ ಮಾಲಿ, ರಾಜಶೇಖರ ಮಾಲಿ, ರವಿ ತಂಬಾಕೆ, ಚಂದ್ರಕಾಂತ ಝಳಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
.