ರಾಮನವಮಿ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ

ರಾಮನವಮಿ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ

ರಾಮನವಮಿ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ

ಕಲಬುರಗಿ: ನಗರದ ಖಾದ್ರಿ ಚೌಕ್‌ನಲ್ಲಿ ರಾಮನವಮಿ ಜಯಂತಿಯನ್ನು ಅಂಗವಾಗಿ ಅಲ್ಲಂಪ್ರಭು ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಜರುಗಿಸಲಾಯಿತು. ಈ ಕಾರ್ಯಕ್ರಮವು ಓಂಕಾರ ವಠಾರ ಅವರ ನೇತೃತ್ವದಲ್ಲಿ ನಡೆಯಿತು.

ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡರಾದ ಅಭಿಷೇಕ್ ಪಾಟೀಲ, ಭೀಮರಾಯ ಕುಣಕಿ, ನಿಂಗಣ್ಣಾ ಪೂಜಾರಿ, ನೀತೀಶ್ ನಾಯ್ಕೊಡಿ, ರಮೇಶ ವಠಾರ, ಶಶಿಕುಮಾರ್ ವಠಾರ ಹಾಗೂ ಅನೀಲ ಪಟ್ಟಣಕರ್ ಅವರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಭಕ್ತಜನರ ಉಪಸ್ಥಿತಿಯಿಂದ ಸ್ಥಳದಲ್ಲಿ ಧಾರ್ಮಿಕ ಉತ್ಸಾಹ ಹೆಚ್ಚಿದರೂ, ಸುವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

-.