ಧಾರ್ಮಿಕ ಆಚರಣೆಗೆ ಸೇವಾ ಸ್ಪರ್ಶ: 2000 ಭಗವದ್ಗೀತೆಗಳು, ರಕ್ತದಾನ ಶಿಬಿರ

ಧಾರ್ಮಿಕ ಆಚರಣೆಗೆ ಸೇವಾ ಸ್ಪರ್ಶ: 2000 ಭಗವದ್ಗೀತೆಗಳು, ರಕ್ತದಾನ ಶಿಬಿರ

ನಾಗರಿಕ ಸೇವಾ ಸಮಿತಿಯಿಂದ ವಿಶಿಷ್ಟವಾಗಿ ರಾಮನವಮಿ ಆಚರಣೆ 

35 ಯೂನಿಟ್ ರಕ್ತಸಂಗ್ರಹ - 2 ಸಾವಿರ ಭಗವದ್ಗೀತೆ ಕೃತಿ ಹಂಚಿಕೆ

ಕಲಬುರಗಿ : ಆರಾಧ್ಯ ದೇವರು ಮರೆಯಾದ ಪುರುಷೋತ್ತಮನಾದ ಶ್ರೀರಾಮನ ಜಯಂತಿ ಉತ್ಸವವನ್ನು ಇಲ್ಲಿನ ನಾಗರಿಕ ಸೇವಾ ಸಮಿತಿಯು ವಿಶಿಷ್ಟವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದೆ. ಭಗವದ್ಗೀತೆ ಕೃತಿ ಹಂಚಿಕೆ ಹಾಗೂ ರಕ್ತದಾನ ಮಾಡುವುದರ ಮೂಲಕ ವೈವಿಧ್ಯಮಯವಾಗಿ ರಾಮನವಮಿಯವನ್ನು ಆಚರಿಸಿ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. 

   ಕಲಬುರಗಿಯ ಜಗತ್ತು ವೃತದಲ್ಲಿ ಮಾರ್ಚ್ ಆರರಂದು ಭಾನುವಾರ ನಾಗರಿಕ ಸೇವಾ ಸಮಿತಿಯ ವತಿಯಿಂದ ರಾಮನವಮಿ ಆಚರಣೆ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮಲಲ್ಲಾ ಭಾವಚಿತ್ರವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಯುವಕರು ರಾಮನವಮಿಯನ್ನು ಡಿಜೆ ಹಾಕಿ ಕುಣಿದು ಕುಪ್ಪಳಿಸಿ ಆಚರಿಸುವುದನ್ನು ಕೈ ಬಿಟ್ಟು ಸೇವಾ ಮನೋಭಾವದೊಂದಿಗೆ ಸಮಾಜಮುಖಿಯಾಗಿ ರಾಮನವಮಿ ಆಚರಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಮಿತಿಯು ನಿರ್ಧರಿಸಿದಂತೆ ರಕ್ತ ದಾನ ಮಾಡುವುದರ ಮೂಲಕ ಹಾಗೂ ಭಗವದ್ಗೀತೆಯ ಸಂದೇಶ ಮನೆ ಮನೆಗೆ ತಲುಪಿಸಿ ಆದರ್ಶ ಸಮಾಜವನ್ನು ಕಟ್ಟುವ ಉದಾತ ಚಿಂತನೆಯ ಉತ್ಸವ ವನ್ನಾಗಿ ಆಚರಿಸಲಾಯಿತು.

35 ಯೂನಿಟ್ ರಕ್ತಸಂಗ್ರಹ 2 ಸಾವಿರ ಭಗವದ್ಗೀತೆ ಕೃತಿ ಹಂಚಿಕೆ

ರಾಮನವಮಿಯ ಪ್ರಯುಕ್ತ ನಾಗರಿಕ ಸೇವಾ ಸಮಿತಿಯು ಜಗತ್ತು ವೃತದಲ್ಲಿ ಜೀವನ್ಧಾರ ಸೆಂಟರ್ನ ಮೂಲಕ ಸುಮಾರು 35ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ರಾಮನವಮಿಯನ್ನು ಸೇವಾ ಮನೋಭಾವದಿಂದ ಅರ್ಥಪೂರ್ಣವಾಗಿಸಿದರು. ಕಲಬುರಗಿಯ ಚಿರಾಯು ಆಸ್ಪತ್ರೆಯ ರಕ್ತ ನಿದ್ದಿ ಕೇಂದ್ರದ ಸಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಬೆಳಗ್ಗಿನಿಂದಲೇ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಭಗವದ್ಗೀತೆಯ ಕಿರು ಹೊತ್ತಿಗೆಗಳನ್ನು ವಿತರಿಸಲಾಯಿತು ಕೃತಿಗಳನ್ನು ಈ ಸಂದರ್ಭದಲ್ಲಿ ಹಂಚಲಾಗಿದೆ ಎಂದು ಸಂಜೀವ ಗುಪ್ತ ಹೇಳಿದರು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೊಂಡು ಒಂದು ವರ್ಷ ಶುಭ ಸಂದರ್ಭದಲ್ಲಿ ಇಂತಹ ಸಮಾಜಮುಖಿ ಹಾಗೂ ಸಂಸ್ಕಾರ ಬಿತ್ತುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು ಎಂದು ಸಿದ್ದರಾಜು ಬಿರಾದಾರ್ ಹಾಗು ಸಂಜೆ ಕುಮಾರ್ ರೇವಣಕರ್ ಹೇಳಿದರು. 

    ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪ, ಮಾರ್ಥಂಡ ಶಾಸ್ತ್ರಿ, ಬಸವರಾಜ ನಾಸಿ, ಮಾಜಿ ಮೇಯರ್ ವಿಶಾಲ ದರ್ಗಿ, ಮನಿಷ್ ಪಾಂಡೆ, ಡಾ. ಸದಾನಂದ ಪೆರ್ಲ, ಅನಿಲ್ ತಂಬಾಕೆ, ಜಗದೀಶ್ ಕೋರಿ ಪ್ರಶಾಂತ್ ಗುಡ್ಡ, ಅಪ್ಪಾ ಸಾಹೇಬ್, ಶಿವಕುಮಾರ ಧನ್ನೂರ, ವಿಜಯ ಕೋಡ್ಲಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು

ಯುವಕರ ಆದರ್ಶ ಕೆಲಸಕ್ಕೆ ಮೆಚ್ಚುಗೆ

ರಾಮನವಮಿಯನ್ನು ರಕ್ತದಾನ ಮಾಡುವ ಹಾಗೂ ಭಗವದ್ಗೀತೆ ಕೃತಿಗಳನ್ನು ಹಂಚುವ ಮೂಲಕ ವಿನೂತನವಾಗಿ ನಾಗರಿಕ ಸೇವಾ ಸಮಿತಿ ಯುವಕರನ್ನು ಸೇರಿಸಿ ಆಚರಿಸಿರುವುದು ಈ ಸಮಾಜಕ್ಕೆ ಮಾದರಿ ಹಾಗೂ ಆದರ್ಶದ ಕೆಲಸ ಎಂದು ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಶ್ಲಾಘಿಸಿದರು.

     ಜೀವ ಉಳಿಸಲು ರಕ್ತ ಅತ್ಯಂತ ಅಗತ್ಯವಾಗಿದ್ದು ಶ್ರೀರಾಮಚಂದ್ರನ ಉದಾತ ಪರಂಪರೆಯನ್ನು ಎತ್ತಿ ಹಿಡಿಯಲು ಯುವಕರು ರಕ್ತದಾನ ಮಾಡಿ ಆದರ್ಶ ಮೆರೆದಿದ್ದಾರೆ ರಕ್ತ ಪ್ರಾಣಿಗಳಿಗೆ ಹಾಗೂ ಭಗವದ್ಗೀತೆ ಕೃತಿ ಪಡೆದವರಿಗೆ ಅಭಿನಂದನೆಗಳು. ಶ್ರೀರಾಮಚಂದ್ರನ ಆದರ್ಶ ಹಾಗೂ ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿ ಉತ್ತಮ ಜೀವನ ನಡೆಸಿದರೆ ಅದುವೇ ಶ್ರೀರಾಮನಿಗೆ ನಿಜವಾದ ಭಕ್ತಿಯ ಅರ್ಪಣೆಯಾಗಿದೆ. ಇಂಥ ಕೆಲಸ ಕಾರ್ಯ ಮುಂದಿನ ದಿನಗಳಲ್ಲಿ ಎಲ್ಲೆಡೆ ನಡೆಯಲಿ ಎಂದು ಶುಭ ಕೋರಿದರು.