ಆಚರಣೆಗಳ ನೈಜತೆ ಅರಿಯಿರಿ-ಇಓ ಶಂಕರ ರಾಠೋಡ
ಆಚರಣೆಗಳ ನೈಜತೆ ಅರಿಯಿರಿ-ಇಓ ಶಂಕರ ರಾಠೋಡ
ಚಿಂಚೋಳಿ: ಈ ನಾಡಿನಲ್ಲಿ ಅನೇಕ ಆಚರಣೆಗಳಿವೆ. ಕೆಲವು ಆಚರಣೆಗಳ ಹಿನ್ನೆಲೆ ಮರೆಮಾಚಿ, ಅಂಧಚಾರಣೆಗಳು ಮುನ್ನೆಲೆಗೆ ಬಂದಿವೆ. ಆಚರಣೆಗಳ ನೈಜತೆಯನ್ನು ಅರಿತು ಅವುಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಆಚರಿಸಬೇಕು. ಬಸವಾದಿ ಶರಣರ ವಚನಗಳು ಬಾಳಿಗೆ ದಾರಿ ದೀಪವಾಗಿವೆ. ಅವುಗಳ ಅಧ್ಯಯನವಾಗಬೇಕು ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ಹೇಳಿದರು.
ಶರಣೆ ನೀಲಾಂಬಿಕ ಬಸವ ಸೇವಾ ಟ್ರಸ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿಂಚೋಳಿ, ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಚಂದಾಪೂರದ ಸರಕಾರಿ ಆಸ್ಪತ್ರೆಯಲ್ಲಿ "ಬಸವ ಪಂಚಮಿ" ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿರಸ್.ಐ ಗಂಗಮ್ಮ ಮಾತನಾಡಿ 'ಇಂದಿಗೂ ಜನರು ಮೌಡಾಚರಣೆಯಲ್ಲಿದ್ದಾರೆ ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಮೂಢನಂಬಿಕೆ ಪಾಲಿಸುತ್ತಾರೆ. ಶಿಕ್ಷಣ ಪಡೆಯುವ ಮೂಲಕ ಅಂಧಾಚರಣೆಗಳು ತೊಡೆದು ಹಾಕಬೇಕು ಎಂದರು.
ಡಾ.ಎಂಡಿ ಗಫಾರ, ಡಾ.ಸಂತೋಷ ಪಾಟೀಲ, ಶಕುಂತಲಾವಹುಲಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅಜಿತ ಪಾಟೀಲ, ಜಗನ್ನಾಥ ಇದಲಾಯಿ ಮುಂತಾದವರು ಉಪಸ್ಥಿತರಿದ್ದರು. ರೇವಣಸಿದ್ದಯ್ಯಾ ಹಿರೇಮಠ, ನಂದಿಕುಮಾರ ಪಾಟೀಲ ಪ್ರಾರ್ಥಿಸಿದರು. ಸೂರ್ಯಕಾಂತ ಹುಲಿ ಸ್ವಾಗತಿಸಿದರು. ಶಾಂತವೀರ ಹೀರಾಪೂರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ನಿರೂಪಿಸಿದರು, ಕಾಶಿನಾಥ ಹುಣಜೆ ವಂದಿಸಿದರು.