ಕಲ್ಬುರ್ಗಿ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಅವರ ಜೊತೆ ಬಾನುಲಿ ನೇರ ಫೋನ್ ಕಾರ್ಯಕ್ರಮ
ಕಲ್ಬುರ್ಗಿ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಅವರ ಜೊತೆ ಬಾನುಲಿ ನೇರ ಫೋನ್ ಕಾರ್ಯಕ್ರಮ
ಕಲಬುರಗಿ: ಆಕಾಶವಾಣಿ ಕೇಂದ್ರವು ಅಕ್ಟೋಬರ್ 23ರಂದು ಬುಧವಾರ ಬೆಳಿಗ್ಗೆ 10.30 ರಿಂದ 11.30ರ ವರೆಗೆ ಕಲ್ಬುರ್ಗಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್. ಡಿ ಅವರೊಂದಿಗೆ ನೇರ ಫೋನ್- ಇನ್ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಕಲ್ಬುರ್ಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಗಾಗಿ ಕೈಗೊಂಡ ಕ್ರಮಗಳು ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಇಲಾಖೆಯು ಇಟ್ಟ ಹೆಜ್ಜೆಯ ಬಗ್ಗೆ
" ಸಂಚಾರ ಮತ್ತು ಕಾನೂನು ವ್ಯವಸ್ಥೆ"ಎಂಬ ವಿಷಯದ ಕುರಿತಾಗಿ ಪೊಲೀಸ್ ಆಯುಕ್ತರು ಕೇಳುಗರೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಳುಗರು ಸಂಚಾರ ಹಾಗೂ ಕಾನೂನು ವ್ಯವಸ್ಥೆಯ ಕುರಿತಾಗಿ ಸಮಸ್ಯೆ, ಸಲಹೆ ಸೂಚನೆಗಳಿದ್ದಲ್ಲಿ ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿ ಪರಿಹಾರ ತಿಳಿದುಕೊಳ್ಳಬಹುದು. ಆಸಕ್ತ ಕೇಳುಗರು ಕಲ್ಬುರ್ಗಿ ಆಕಾಶವಾಣಿಯ ದೂರವಾಣಿ ಸಂಖ್ಯೆ 2 9 5 9 8 6 ಅಥವಾ 2 9 5 9 8 7 (ಎಸ್ ಟಿ ಡಿ ಸಂಖ್ಯೆ 08472)ಇವುಗಳಿಗೆ ಕರೆ ಮಾಡಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು ಕಲ್ಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ್ ಎಸ್ ರುಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.