ಸಗರ ಹೈ ಮಾಸ್ಟ್ ದೀಪ ಉದ್ಘಾಟನೆ

ಸಗರ ಹೈ ಮಾಸ್ಟ್ ದೀಪ ಉದ್ಘಾಟನೆ

ಸಗರ ಹೈ ಮಾಸ್ಟ್ ದೀಪ ಉದ್ಘಾಟನೆ 

ಶಹಾಪುರ : ತಾಲೂಕಿನ ಸಗರ ಗ್ರಾಮದ ವಾರ್ಡ್ ನಂಬರ್ 1 ರ ವ್ಯಾಪ್ತಿಗೆ ಒಳಪಡುವ,ಒಕ್ಕಲಿಗರ ಹಿರೇಮಠ ಆವರಣದ ಪಕ್ಕದಲ್ಲಿ ಸುಮಾರು 3 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ,ಹೈ ಮಾಸ್ಟ್ ದೀಪವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಶಿದ್ರಾ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಇಂಥಹ ದೀಪಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ಆಲೋಚನೆಯಲ್ಲಿದ್ದು,ಸದ್ಯಕ್ಕೆ ಜಾತ್ರಾ ಮಹೋತ್ಸವ ಇರುವುದರಿಂದ ಬರುವ ಭಕ್ತಾದಿಗಳಿಗೆ,ಸಾರ್ವಜನಿಕರಿಗೆ ಚಿಕ್ಕ ಮಕ್ಕಳಿಗೆ,ವೃದ್ಧರಿಗೆ ಅನುಕೂಲವಾಗಲಿದೆ ಎಂದು ಹೇಳಿದರು

ಗ್ರಾಮದ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು,ಹುಳು ಉಪ್ಪಡಿಗಳ ಹಾವಳಿ ತಪ್ಪಿಸಬಹುದಾಗಿದೆ,ಅಲ್ಲದೆ ಜಗಮಗಿಸುವ ಹೈ ಮಾಸ್ಟ ದೀಪದಿಂದ ಕರಿಬಸವೇಶ್ವರ ದೇವಸ್ಥಾನ ಕಂಗೊಳಿಸುವಂತಾಗಿದೆ. ಎಂದು ಶ್ರೀ ಮಠದ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರ ಸ್ವಾಮಿಗಳು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡ್ಡಪ್ಪ ನಂದಿಕೋಲ,ಗ್ರಾಮದ ಹಿರಿಯರಾದ ನಿಂಗಣ್ಣ ಮುದ್ದಾ,ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಜಾಯಿ, ಸಂಗಮೇಶ್ ಕನಗೊಂಡ,ಜಗನ್ನಾಥ ಪತ್ತಾರ,ಶಿವಣ್ಣಗೌಡ ಗೌಡರ,ಅರವಿಂದ ಜಾಯಿ,ಸಿದ್ದಣ್ಣ ಸೇರಿ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.