ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ತಂಡ ಕಾಲೇಜಿಗೆ ಭೇಟಿ ಕಾರ್ಯಕ್ರಮ.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ತಂಡ ಕಾಲೇಜಿಗೆ ಭೇಟಿ ಕಾರ್ಯಕ್ರಮ.
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜು ಮಾದರಿ ಕಾಲೇಜು ಆಗಿದ್ದರಿಂದ ಇಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ತಂಡದ ಸದಸ್ಯರಾದ ಫೂಕ್ ಯೆನ್ ಚೊಂಗ್ ಪ್ರಧಾನ ಸಾಮಾಜಿಕ ವಲಯ ತಜ್ಞರು SG-HSD, ನಹ್ಯುಮ್ ಕಿಮ್ ಉನ್ನತ ಶಿಕ್ಷಣ ತಜ್ಞರು ADB ಯೋಜನೆಗೆ ಸಹ-ಮಿಷನ್ ನಾಯಕ , ಶಾನ್ ಎಂ ವೆಲ್ಬೋರ್ನ್-ವುಡ್ ಉನ್ನತ ಶಿಕ್ಷಣ ತಜ್ಞರು ADB , ಯಶ್ಪಾಲ್ ಮಲಿಕ್ ಖರೀದಿ ಮತ್ತು ಯೋಜನಾ ಅನುಷ್ಠಾನ ತಜ್ಞ ADB, ಸ್ಯಾಮ್ಯುಯೆಲ್ ಕೆ. ಡಬ್ಲ್ಯೂ. ಆಂಗ್ ಉನ್ನತ ಶಿಕ್ಷಣ ನಾವೀನ್ಯತೆ ತಜ್ಞ ADB ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಡಾ.ಎ.ಎಚ್.ಎಂ.ವಿಜಯಲಕ್ಷ್ಮಿ ಹೆಚ್ಚುವರಿ ನಿರ್ದೇಶಕಿ ಡಿಸಿಇ, ಡಾ.ರಮೇಶ್ ರೆಡ್ಡಿ ವಿಶೇಷ ಅಧಿಕಾರಿ ಡಿಸಿಇ, ಡಾ.ಕಿರಣ್ ಕುಮಾರ್ ವಿಶೇಷ ಅಧಿಕಾರಿ ಡಿಸಿಇ
ಪ್ರೊ. ಶಿವಶರಣಪ್ಪ ಗೊಳ್ಳೆ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಇವರೆಲ್ಲರೂ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ADB ಯ ಎಲ್ಲಾ ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೊಂದಿಗೆ ಉದ್ಯಮಿದಾರರೊಂದಿಗೆ ಹಾಗೂ ಅಲೂಮಿನಿ ಸದಸ್ಯರೊಂದಿಗೆ, ಪಾಲಕರೊಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಸಂವಾದ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಮಾಕಾಂತ ನಿಗ್ಗುಡಗಿ, ಡಾ. ಶಂಕ್ರಪ್ಪ ಹತ್ತಿ, ಶಿವರಾಜ ಇಂಗನಶೆಟ್ಟಿ ಮತ್ತು ಹಿರಿಯ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಹಿಸಿದ್ದರು. ಕಾಲೇಜಿನ ಡೀನರಾದ ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಬಿ.ಹೆಚ್, ಪರೀಕ್ಷಾ ನಿಯಂತ್ರಕರಾದ ಡಾ. ಅಡಿವೇಶ, ಸಿಬ್ಬಂದಿ ಕಾರ್ಯದರ್ಶಿಯಾದ ಡಾ. ಅರುಣಕುಮಾರ ಸಲಗರ , ಐಕ್ಯೂಏಸಿ ಸಂಯೋಜಕರಾದ ಡಾ ರಾಜಶೇಖರ ಮಡಿವಾಳ , ಡಾ. ನಾಗಪ್ಪ ಟಿ ಗೋಗಿ, ಡಾ. ಬಲಭೀಮ ಸಾಂಗ್ಲಿ, ಸಿಬ್ಬಂದಿಯೇತರ ವರ್ಗದವರಾದ ವಿಜಯಲಕ್ಷ್ಮಿ, ಅಜಯ್ ಸಿಂಗ್, ಶಿವಾನಂದ ಸ್ವಾಮಿ ಭಾಗವಹಿಸಿದ್ದರು .
ಡಾ. ರಾಜಶೇಖರ ಮಡಿವಾಳರವರು ಸ್ವಾಗತಿಸಿದರು ಡಾ. ಮಲ್ಲೇಶಪ್ಪ ಕುಂಬಾರ ಅವರು ಕಾಲೇಜಿನ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಡಾ ರಾಜಕುಮಾರ ಸಲಗರವರು ವಂದಿಸಿದರು, ಡಾ. ಬಲಭೀಮ ಸಾಂಗ್ಲಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಸಮಿತಿಯ ಸಂಯೋಜಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ಹಾಗೂ ಸಿಬ್ಬಂದಿಯೇತರ ವರ್ಗದವರು ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.