ಕರಾಟೆ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಆಗ್ರಹ

ಕರಾಟೆ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಆಗ್ರಹ

ಕರಾಟೆ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಆಗ್ರಹ  

ಜೇವರ್ಗಿ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರಾಟೆ ಮತ್ತು ಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನಿಯೋಜನೆಗೊಳಿಸಬೇಕೆಂದು ಜೇವರ್ಗಿ ತಾಲೂಕಿನ ಜೆನ್ನ ಶಿಟೂರಿಯೊ ಕರಾಟೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದರು.  

ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ಮಾಹೊರ ಅವರು, “ದೀರ್ಘಕಾಲದಿಂದ ಗೌರವಧನದ ಆಧಾರದ ಮೇಲೆ ಕರಾಟೆ ತರಬೇತಿ ನೀಡುತ್ತಿರುವ ಶಿಕ್ಷಕರನ್ನು ಖಾಯಂ ನೇಮಕ ಮಾಡಬೇಕು. ಕರಾಟೆ ವಿದ್ಯಾರ್ಥಿನಿಯರ ಆತ್ಮರಕ್ಷಣೆಗೆ ಅತ್ಯವಶ್ಯಕವಾದ ಕಲೆಯಾಗಿದೆ” ಎಂದು ತಿಳಿಸಿದ್ದಾರೆ.  

ಈ ಸಂದರ್ಭ ಅಸೋಸಿಯೇಷನ್‌ನ ತಾಲೂಕು ಉಪಾಧ್ಯಕ್ಷ ಅಮರನಾಥ್ ಮದುರಕರ ಅವರು, “ಕರಾಟೆ ಮತ್ತು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಈ ಅಸಡ್ಡೆಯ ಧೋರಣೆಯಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಿನ್ನಡೆಯಾಗಿದೆ” ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  

ಅದೇ ರೀತಿಯಾಗಿ, ರಾಜು ಮದುರಕರ ಮತ್ತು ರಾಹುಲ್ ಪಂಚಬಾಯ ಅವರು, “ರಾಜ್ಯದ ಪ್ರತಿಯೊಂದು ಶಾಲೆ ಮತ್ತು ಕಾಲೇಜುಗಳಲ್ಲಿ ಕರಾಟೆ ಮತ್ತು ಸಂಗೀತ ಶಿಕ್ಷಕರನ್ನು ಖಾಯಂವಾಗಿ ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ಒದಗಿಸಬೇಕು” ಎಂದು ಮಾಧ್ಯಮದ ಮೂಲಕ ಒತ್ತಾಯಿಸಿದರು.  

-ವರದಿ: ಜೆಟ್ಟಪ್ಪ ಎಸ್. ಪೂಜಾರಿ