ಕಾಗಿಣಾ ತಟದ ಮಿನಿ ಕುಂಭಮೇಳದ ಸಾಂಸ್ಕೃತಿಕ ದಿಬ್ಬಣಕ್ಕೆ ಸಹಸ್ರ ಸಂಖ್ಯೆಯ ಜನಸ್ತೋಮ:

ಕಾಗಿಣಾ ತಟದ ಮಿನಿ ಕುಂಭಮೇಳದ ಸಾಂಸ್ಕೃತಿಕ ದಿಬ್ಬಣಕ್ಕೆ ಸಹಸ್ರ ಸಂಖ್ಯೆಯ ಜನಸ್ತೋಮ:

ಕಾಗಿಣಾ ತಟದ ಮಿನಿ ಕುಂಭಮೇಳದ ಸಾಂಸ್ಕೃತಿಕ ದಿಬ್ಬಣಕ್ಕೆ ಸಹಸ್ರ ಸಂಖ್ಯೆಯ ಜನಸ್ತೋಮ:

ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಮುನ್ನುಡಿಯಾಗಿ ಭವ್ಯ ಶೋಭಾಯತ್ರೆ

ಕಲಬುರಗಿ: ರಾಷ್ಟ್ರಕೂಟ ನೆಲ ಸೇಡಂ ತಾಲೂಕಿನ ನೀಲಹಳ್ಳಿ- ಬೀರನಹಳ್ಳಿ ಕ್ರಾಸ್ ಬಳಿಯ ಕಾಗಿಣಾ ನದಿ ತಟದ ಪ್ರಕೃತಿ ನಗರದಲ್ಲಿ ಜನವರಿ 29ರಿಂದ ಫೆ.6ರ ತನಕ ನಡೆಯಲಿರುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಮುನ್ನುಡಿಯಾಗಿ ಕಲಬುರಗಿ ಮತ್ತು ಸೇಡಂನಲ್ಲಿ ಏಕಕಾಲಕ್ಕೆ ಭವ್ಯ ಶೋಭಾ ಯಾತ್ರೆ ಆರಂಭಗೊಂಡಿತು.

ಸಹಸ್ರ ಸಂಖ್ಯೆಯ ಸಾಂಸ್ಕೃತಿಕ ದಿಬ್ಬಣ

   ಕಲಬುರಗಿಯ ನಗರೇಶ್ವರ ಶಾಲಾ ಆವರಣದಿಂದ ಜ. 28ರಂದು ಆರಂಭಗೊಂಡ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವದ ಸಾಂಸ್ಕೃತಿಕ ವೈಭವದ ಶೋಭಾ ಯಾತ್ರೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಮತ್ತು ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ್, ಶಾಸಕರಾದ ಬಸವರಾಜ ಮತ್ತಿಮೂಡು, ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ, ಹರ್ಷಾನಂದ ಗುತ್ತೇದಾರ್, ಚಂದು ಪಾಟೀಲ್ ಅವರು ತಾಯಿ ಭರತ ಮಾತೆಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮಾರ್ತಾಂಡ ಶಾಸ್ತ್ರಿ, ಶೇಷಾದ್ರಿ, ಉಮೇಶ್ ಶೆಟ್ಟಿ ಅಶೋಕ್ ಜೀವಣಗಿ ವಿ.ಶಾಂತರೆಡ್ಡಿ ವಿಶ್ವನಾಥ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 ಕಾಗಿಣಾ ನದಿ ತೀರದ 240 ಎಕರೆ ಪ್ರದೇಶದಲ್ಲಿ ನಡೆಯುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವ ಮಿನಿ ಕುಂಭಮೇಳದ ಸಂಭ್ರಮದಿಂದ ನಡೆಯಲಿದ್ದು ವಿದ್ಯುಕ್ತ ಉದ್ಘಾಟನೆಯು ನಾಳೆ ಜ .29 ರಂದು ಬುಧವಾರ ಬೆಳಗ್ಗೆ 10.30 ಕ್ಕೆ ಮಾಜಿ ರಾಷ್ಟ್ರಪತಿಗಳಾದ( ರಾಮನಾಥ ಕೋವಿಂದ್ ಉದ್ಘಾಟನೆಯಲ್ಲಿರುವ ಪೂರ್ವಭಾವಿಯಾಗಿ ಶರಣ ನಾಡಿನ ಹೆಬ್ಬಾಗಿಲು ಭಾವೈಕ್ಯತೆಯ ತೊಟ್ಟಿಲು ಕಲಬುರಗಿ ನಗರದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡ ಸಾಂಸ್ಕೃತಿಕ ದಿಬ್ಬಣದ ಶೋಭಾ ಯಾತ್ರೆ ಇಡೀ ನಗರದಲ್ಲಿ ಜಾತ್ರೆಯ ಸಡಗರವನ್ನು ಸೃಷ್ಟಿಸಿತು. ಜಾನಪದ ಕಲಾವಿದರು, ಸಾಹಿತಿಗಳು ವಿದ್ಯಾರ್ಥಿಗಳು, ಶಿಕ್ಷಕರು ,ಸಾಂಸ್ಕೃತಿಕ ನಾಯಕರು, ರಾಜಕೀಯ ನಾಯಕರು ಹಾಗೂ ಸಂಸ್ಕೃತಿ ಪ್ರಿಯರು

ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಶೋಭಾ ಯಾತ್ರೆಯ ರಂಗು ಹೆಚ್ಚಿಸಿದರು. 

7 ಸಾವಿರ ವಿದ್ಯಾರ್ಥಿಗಳ ಸಮಾಗಮದ ಮೆರವಣಿಗೆ

ಭವ್ಯ ಶೋಭ ಯಾತ್ರೆಯಲ್ಲಿ ಕಲಬುರಗಿ ನಗರದ ಸುಮಾರು ಏಳು ಸಾವಿರ ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಸಾಗಿ ಬಂದ ದೃಶ್ಯ ಕಣ್ಮನ ಸೆಳೆಯಿತು. ಎಲ್ಲ ದಾರಿಗಳು ನಗರೇಶ್ವರ ಶಾಲೆಯ ಕಡೆಗೆ ಎಂಬಂತೆ ಪ್ರವಾಹೋಪಾದಿಯಲ್ಲಿ ಬಂದ ಜನರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರೇಶ್ವರ ಶಾಲೆಯಿಂದ ಪ್ರಾರಂಭಗೊಂಡ ಮೆರವಣಿಗೆ ಜಗತ್ತು ವಿರುದ್ಧಕ್ಕೆ ಮುಟ್ಟಿದಾಗಲೂ ಅದರ ಇನ್ನೊಂದು ತುದಿ ನಗರೇಶ್ವರ ಶಾಲೆಯಲ್ಲಿದ್ದು ಅಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಸ್ತಬ್ಧ ಚಿತ್ರ ಸಾಂಸ್ಕೃತಿಕ ತಂಡಗಳ ಆಕರ್ಷಣೆ

ಮೆರವಣಿಗೆಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಹಾಗೂ ಜನಪದ ಸಂಸ್ಕೃತಿ ಸಾರ್ವ ಅನೇಕ ತಂಡಗಳು ವಿಶೇಷ ಆಕರ್ಷಣೆಯಾಗಿದ್ದು ವು. ಹಳೆಯ ಸ್ಮಾರಕಗಳನ್ನು ನೆನಪಿಸುವ, ಚರಿತ್ರೆಯನ್ನು ಸಾರುವ ಸ್ತಬ್ಧ ಚಿತ್ರಗಳು, ತಿರುಪತಿ ವೆಂಕಟರಮಣನ ತದ್ದ ಚಿತ್ರ, ಸಾಧುಗಳು ಶರಣರು ಸಂತರ ವೇಷಭೂಷಣಗಳ ನ್ನು ಹೊಂದಿದ ಶಬ್ದ ಚಿತ್ರಗಳು ಮೆರವಣಿಗೆಯಲ್ಲಿ ಎಲ್ಲರ ಗಮನಸೆಳೆಯಿತು.

ಭರತಮಾತೆಯ ರಥದ ಮುಂಭಾಗದಲ್ಲಿ ಡೊಳ್ಳು ಮೇಳ, ಲಂಬಾಣಿ ನೃತ್ಯತಂಡ,ಎರಡು ಪುರವಂತಿಕೆ ತಂಡಗಳು, ಎರಡು ಹಲಿಗೆ ಮೇಳದ ತಂಡಗಳು, 20ಕ್ಕೂ ಹೆಚ್ಚು ಲೇಜಿಮ್ ತಂಡಗಳು, 8 ಘೋಷ್ ತಂಡಗಳು ರಿಂಗ್ ನೃತ್ಯ, ಕಲಾವಿದರು

ಗೊಂದೋಳು ತಂಡ , ಮೂರು ಡಿಜೆ ತಂಡ ಮೆರವಣಿಗೆ ಯುದ್ದಕ್ಕೂ ಸಾಗಿ ಬಂದಾಗ ಜನ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ನಗರದ ಪ್ರಮುಖ ವಿದ್ಯಾಸಂಸ್ಥೆಗಳು ಭಾಗಿ

ಮೆರವಣಿಗೆಯಲ್ಲಿ ಅಪ್ಪ ಪಬ್ಲಿಕ್ ಶಾಲೆ, ಮಹರ್ಷಿ ವಿದ್ಯಾ ಮಂದಿರ ಸಂಗಮ ಶಾಲೆ ಆರ್ಟ್ ಇಂಟಿಗ್ರೇಷನ್ ದೃಶ್ಯ ಕಲಾ ಮಹಾವಿದ್ಯಾಲಯ ನಾಗಾಂಬಿಕಾ ವಿದ್ಯಾಲಯ ಮುಕ್ತಾಂಬಿಕ ವಸತಿ ಪದವಿ ಪೂರ್ವ ಕಾಲೇಜು, ಶರಣಬಸವೇಶ್ವರ ವಸತಿ ಶಾಲೆ ಎಸ್ ಎಸ್ ಜಗಳೂರು ಪದವಿಪೂರ್ವ ಶಾಲೆ, ಚಾಣಕ್ಯ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪ್ಪ ಮಾದಮ ಶೆಟ್ಟಿ ಶಾಲೆ, ದೊಡ್ಡಪ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜು, ರೋಟರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಿಜಿ ಮಹಿಳಾ ಕಾನ್ವೆಂಟ್ ಶಾಲೆ ಭಾರತೀಯ ವಿದ್ಯಾರ್ಥಿಯರ ಶಾಲೆ ಹೀಗೆ ನಗರದ ಪ್ರಮುಖ ಶಾಲೆಗಳು ಪಾಲ್ಗೊಂಡು ಶೋಭಾ ಯಾತ್ರೆಯ ಮೆರುಗು ಹೆಚ್ಚಿಸಿದರು. 

ಕಲಬುರಗಿ ನಗರದಲ್ಲಿ ಜನಸಾಗರ

ನಗರೇಶ್ವರ ಶಾಲೆಯಿಂದ ಒಂಬತ್ತು ಗಂಟೆ 20 ನಿಮಿಷಕ್ಕೆ ಪ್ರಾರಂಭಗೊಂಡ ಮೆರವಣಿಗೆಯು ನೆಹರು ಗಂಜ್, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಅಪ್ಪನಕೆರೆ ಗೋವಾ ಹೋಟೆಲ್ ದಾರಿ ಯಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ಸಂಪನ್ನಗೊಂಡಿತು. ರಸ್ತೆ ಇದ್ದಕ್ಕೂ ಮೆರವಣಿಗೆ ಕಾರ್ಯದ ಮೇಲೆ ಪುಷ್ಪ ದೃಷ್ಟಿಯನ್ನು ಸುರಿಸಿ ಜನ ಕುಣಿದು ಕುಪ್ಪಳಿಸಿದರು ಕಲ್ಬುರ್ಗಿ ನಗರದ ಎಲ್ಲ ರಸ್ತೆಗಳಲ್ಲಿ ಜನಸಾಗರ ಹರಿದು ಬಂದ ವಿಶೇಷ ಅನುಭವ ಉಂಟಾಯಿತು. ನಗರೇಶ್ವರ ಶಾಲೆಯಿಂದ ಜಗತ್ತು ವೃತ್ತದ ವರೆಗೆ ಸುಮಾರು ಒಂದುವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನಗಳಿಗೆ ಬೇರೆ ಮಾರ್ಗವಾಗಿ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟರು. ಮೆರವಣಿಗೆ ಯುದ್ಧಕ್ಕೂ ಇಕ್ಕೆಲಗಳಲ್ಲಿ ಜನ ಕೈ ಬೀಸಿ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಶುಭ ಹಾರೈಸಿದ ದೃಶ್ಯ ಕಂಡುಬರುತ್ತಿತ್ತು.

ಮೆರವಣಿಗೆ ಕಾರರಿಗೆ ಬಾಳೆಹಣ್ಣು, ಪಾನೀಯ ವ್ಯವಸ್ಥೆ

ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ವಿತರಿಸಲಾಯಿತು ಹಾಗೂ ಕುಡಿಯುವ ನೀರು, ಮಜ್ಜಿಗೆಯ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಐತಿಹಾಸಿಕ ದಾಖಲೆಯಾಗಿ ಮಾರ್ಪಾಡುಗೊಂಡ ಭಾರತೀಯ ಸಂಸ್ಕೃತಿ ಉತ್ಸವದ ಮುನ್ನಾ ದಿನದ ಶೋಭಾ ಯಾತ್ರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.