ಬಾಣಂತಿ ಜ್ಯೋತಿ ಕಟ್ಟಿಮನಿ ಸಾವು: ನ್ಯಾಯ ಕೊಡಿಸಲು ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ

ಬಾಣಂತಿ ಜ್ಯೋತಿ ಕಟ್ಟಿಮನಿ ಸಾವು: ನ್ಯಾಯ ಕೊಡಿಸಲು ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ
ಕಮಲಾಪೂರ: ಮಾ.೩ರಂದು ಹೆರಿಗೆಗಾಗಿ' ನಗರದ ಕುಸನೂರ ರಸ್ತೆಯಲ್ಲಿರುವ ಸುರಕ್ಷಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಮಾ.೪ರಂದು ಸಿಜೇರಿಯನ್ ಹೆರಿಗೆಯಾಗಿದೆ, ಆದರೆ ಮಾ.೫ರ ಬೆಳಿಗ್ಗೆಯಿಂದ -ಬಾಣಂತಿ ಜ್ಯೋತಿ ಪರಶುರಾಮ ಕಟ್ಟಿಮನಿ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿರುವ ಬಗ್ಗೆ ವೈದ್ಯರ ಗಮನಕ್ಕೆ ತಂದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿರುವುದರಿಂದ ಬಾಣಂತಿ ಸಾವಾಗಿದೆ, ಇದನ್ನು ಪ್ರಶ್ನಿಸಿದ ಕುಟುಂಬಸ್ಥರು ಮತ್ತು ಮಾದಿಗ ಸಮುದಾಯದ ಮುಖಂಡರಗಳ ಮೇಲೆ ಪ್ರಕರಣ ದಾಖಲಿಸಿರುವುದನ್ನು ಮತ್ತು ಬಾಣಂತಿಗೆ -ನ್ಯಾಯ ನೀಡಬೇಕೆಂದು ಒತ್ತಾಯಿಸಿ ಕಮಲಾಪೂರ ತಾಲೂಕಾ ಮಾದಿಗ ಸಮಾಜದ ಮುಖಂಡರು ನೇತೃತ್ವದಲ್ಲಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ತಹಶೀದೀಲ್ದಾರ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಮುಖಂಡರು, ಸಮುದಾಯದ ಮಹಿಳೆ ಸಾವನ್ನಪ್ಪಿರುವುದರಿಂದ ಆಕ್ರೋಶದಿಂದ ವರ್ತಿಸಿದ್ದು ನಿಜ, ಆದರೆ ಸಾವಿಗೆ ನ್ಯಾಯ ಕೇಳುವುದು ಇಲ್ಲಿ ಅಫರಾಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇದನ್ನೆಲ್ಲ ನಮ್ಮ ಮಾದಿಗ ಸಮಾಜ ತಾಲೂಕು ಘಟಕ ವತಿಯಿಂದ ಖಂಡಿಸುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ನಗರ ಪೊಲೀಸ್ ಕಮಿಷನರ್ ಅವರು ಮಹಿಳೆಯ ಸಾವಿನಿಂದ ಆಕ್ರೋಶಗೊಂಡಿರುವ ಪ್ರಯುಕ್ತ ಮಾದಿಗ ಸಮುದಾಯದವರನ್ನು ಸಮಾಧಾನ ಪಡಿಸಿ ಸೂಕ್ತ ನ್ಯಾಯ ಕೊಡಿಸುವುದಾಗಿ ಭರವಸೆಯ ಮಾತು ಹೇಳಿದ್ದರು. ಆದರೆ, ಬಾಣಂತಿ ಸಾವಿಗೆ ಕಾರಣರಾಗಿ ಅನ್ಯಾಯವೆಸಗಿರುವ ಆಸ್ಪತ್ರೆಯ ಮೇಲೆ ಪ್ರಕರಣ ದಾಖಲಿಸದೆ ನ್ಯಾಯ ಕೇಳಲು ಹೋದ ಸಮುದಾಯದ ಮುಖಂಡರ ಮೇಲೆ ಪ್ರಕರಣಾ ದಾಖಲಿಸಿದ್ದಾರೆಂದು ಆ ಆರೋಪಿಸಿದರು. ಸುರಕ್ಷಾ ಆಸ್ಪತ್ರೆಯ ಡಾ. ಚಂದ್ರಿಕಾ ಅವರು ಶಹಬಾದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಆದರೆ ಅವರು ಹೆಚ್ಚಿನ ಸಮಯ ಕಳೆಯುವುದು ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸಂಕಷ್ಟದ ಸಮಯದಲ್ಲಿ ಬಾಣಂತಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಜ್ಯೋತಿ ಎಂಬ ಬಾಣಂತಿಯ ಜೀವ ಉಳಿಸಬಹುದಾಗಿತ್ತು, ಅವರ ಸಾವಿಗೆ ಕಾರಣರಾಗಿರುವ ಡಾ. ಚಂದ್ರಿಕಾ ಅವರನ್ನು ಸರಕಾರಿ ಸೇವೆಯಿಂದ ಅಮಾತ್ತುಗೊಳಿಸಬೇಕು ಹಾಗೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಮತ್ತು ಸಮುದಾಯವರಿಗೆ ಅವಾಚ್ಯವಾಗಿ ನಿಂದಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಒಂದು ವೇಳೆ ಏಪ್ರಿಲ್ 1ನೇ ತಾರೀಖಿನೊಳಗೆ ಮೇಲೆ ತಿಳಿಸಿದ ಪ್ರತಿಯೊಬ್ಬರ ಮೇಲೆ ಕೇಸ ದಾಖಲಿಸಿ ಅವರನ್ನು ಬಂಧಿಸಬೇಕು ಇಲ್ಲವಾದಲ್ಲಿ ಕಲಬುರಗಿ ಜಿಲ್ಲೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಯುವ ಮುಖಂಡರಾದ ಅನೀಲಕುಮಾರ ಪಿ.ಡೊಂಗರಗಾಂವ, ಅಮೃತ ಸಾಗರ,ಮಂಜುನಾಥ ಲೇಗಂಟಿ,ಹಣಮಂತ ಅಂಕಲಗಿ,ರಾಜು ಬೂಂಯ್ಯಾರ,ಮಹಾದೇವ ಲೇಗಂಟಿ, ಅರುಣ ದಮ್ಮೂರ,ಹಣಮಂತ ಮಹಾಗಾಂವ,ನಿಜಪ್ಪಾ ಮಡಕಿ,ಅರ್ಜುನ ವಾಲಿ,ಮನೊಕಹರ ಚಕ್ರಕರ್,ಶರಣಪ್ಪ ಹುಲಿಮನಿ,ನಾಗೇಂದ್ರ ವಚ್ಚಾ,ಸೂರ್ಯಕಾಂತ ಕಿಣಗಿ, ಶ್ರೀನಾಥ ಇಸ್ಲಾಮಪೂರ,ದಿಲೀಪ ಗೋಗಿ,ದಶರಥ ವಾಲಿಕಾರ,ಪ್ರಕಾಶ ಸಾಗರ,ಶೃತಿ ಬಿರಾದಾರ,ವಿಠಲ ಹೊಡಲ ಸೇರಿದಂತೆ ಸಮಾಜದ ಇನ್ನಿತರರು ಇದ್ದರು.