ಕಾಳಗಿ ತಾಲೂಕಿನ ಬಾಬು ಜಗಜೀವನರಾಮ ಜಯಂತಿ ಸಮಿತಿಗೆ ಅಧ್ಯಕ್ಷರಾಗಿ ಗೊಟೂರ ಆಯ್ಕೆ

ಕಾಳಗಿ ತಾಲೂಕಿನ ಬಾಬು ಜಗಜೀವನರಾಮ ಜಯಂತಿ ಸಮಿತಿಗೆ ಅಧ್ಯಕ್ಷರಾಗಿ ಗೊಟೂರ ಆಯ್ಕೆ

ಕಾಳಗಿ ತಾಲೂಕಿನ ಬಾಬು ಜಗಜೀವನರಾಮ ಜಯಂತಿ ಸಮಿತಿಗೆ ಅಧ್ಯಕ್ಷರಾಗಿ ಗೊಟೂರ ಆಯ್ಕೆ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಹಸಿರು ಕ್ರಾಂತಿಯ ಹರಿಕಾರ,ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ ರಾಮ್‌ ರವರ ೧೧೮ನೇ ಜಯಂತ್ಯೋತ್ಸವ ಸಮಿತಿಯ ಕಾಳಗಿ ತಾಲೂಕು ಘಟಕ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎಸ್ ಸಿಂಗೆ ಗೊಟೂರ ಅವರನ್ನು ನೇಮಕ ಮಾಡಲಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ರವಿ ಸಿಂಗೆ ಅರಣಕಲ್ ಅವರು ತಿಳಿಸಿದ್ದಾರೆ.

     ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಘೊಷಿಸಲಾಯಿತು.ಮಾದಿಗ ಸಮಾಜದ ಮುಖಂಡರ ಸಮಕ್ಷಮದಲ್ಲಿ ಸಭೆ ನಡೆಸಲಾಯಿತು.ಈ ಸಭೆಯಲ್ಲಿ ಸರ್ವಾನುಮತದಿಂದ ಮಲ್ಲಿಕಾರ್ಜುನ ಎಸ್ ಗೊಟೂರ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

    ಗೌರವಾಧ್ಯಕ್ಷರಾಗಿ ಮಾಣಿಕರಾವ ಶಿಂಧೆ ಮತ್ತಿಮೂಡ, ಕಾರ್ಯಧ್ಯಕ್ಷರಾಗಿ ಶಶಿಕಾಂತ ಕಟ್ಟಿಮನಿ ಅರಣಕಲ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಿರಣ ಎಸ್.ಹಾದಿಮನಿ, ಉಪಾಧ್ಯಕ್ಷರಾಗಿ ಜಿಡಗಿ,ಮೋಘಾ ಸೂರ್ಯಕಾಂತ ಕೋಡ್ಲಿ, ಖಜಾಂಚಿಯಾಗಿ ಸುಭಾಶ ಮುಕರಂಭಾ ಅವರನ್ನು ನೇಮಕ ಮಾಡಲಾಗಿದೆ ಎಂದರು.

       ಈ ಸಂದರ್ಭದಲ್ಲಿ ಮಾದಿಗ ಸಮಾಜದ ಪ್ರಮುಖರಾದ ರೇವಣಸಿದ್ದಪ್ಪ ಎಸ್. ಕಟ್ಟಿಮನಿ,ಸುಂದರ.ಡಿ.ಸಾಗರ, ಹರೀಶ್ ಸಿಂಗೆ, ಭಗವಂತ ಸಿಂಗೆ, ಮಹೇಶ ಭರತನೂರ, ಶರಣು ರಾಜಾಪೂರ,ಕೃಷ್ಣಾ ಕಟ್ಟಿಮನಿ,ಕರಣ ರಾಜಾಪೂರ,

ರೇವಣಸಿದ್ದಪ್ಪ ಕೋಡ್ಲಿ. ಮಹೇಶ ತಾಡಪಳ್ಳಿ, ಸತೀಶ ಸಕ್ರಿ, ಹಣಮಂತ ಮಂಗಲಗಿ,ಗಿರೀಶ ಸಿಂಗೆ,ಅನೀಲ ಅಶೋಕ ನಗರ,ಸುನೀಲ ಸಲಗರ,ಅಶೋಕ ಗೊಟೂರ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.