ಶ್ರೀಶೈಲ ಪಾದಯಾತ್ರೆ ಬಿತ್ತಿ ಪತ್ರ ಬಿಡುಗಡೆ.

ಶ್ರೀಶೈಲ ಪಾದಯಾತ್ರೆ ಬಿತ್ತಿ ಪತ್ರ ಬಿಡುಗಡೆ.
ಶಹಪುರ (ಗ್ರಾ): ತಾಲೂಕಿನ ಸಗರ ಗ್ರಾಮದ ವಕ್ಕಲಿಗರ ಹಿರೇಮಠದ ಶ್ರೀ ಕರಿಬಸವೇಶ್ವರ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯು ಮಾರ್ಚ್ 17 ರಿಂದ 25 ರ ವರೆಗೆ 9 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಾದಯಾತ್ರೆ ಕಮಿಟಿ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.
ಪಾದಯಾತ್ರೆಗೆ ಶಹಪುರದ ಖ್ಯಾತ ಮಕ್ಕಳ ತಜ್ಞರಾದ ಡಾ.ಸುದತ್ ದರ್ಶನಾಪುರ ಚಾಲನೆ ನೀಡಲಿದ್ದು ಒಕ್ಕಲಗೇರಿ ಹಿರೇಮಠದ ಪರಮಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು,ಗ್ರಾಮದ ಸಾವಿರಾರು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಏಕದಂಡಗಿ ಮಠದ ಕಾಳಹಸ್ತಿಂದ್ರ ಮಹಾಸ್ವಾಮಿಗಳು ಹೇಳಿದರು.ನಿನ್ನೆ ಸಂಜೆ ನಡೆದ ಧರ್ಮ ಸಭೆಯಲ್ಲಿ ಪಾದಯಾತ್ರೆ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರಾದ ಮಲ್ಲಿಕಾರ್ಜುನ್ ಕೊಬ್ರಿ, ಶಿವಣ್ಣ ಚಡಗುಂಡ, ಅಡಿವಪ್ಪ ಬಸ್ಸಾ,ಹಿರಿಯರಾದ ಮಲ್ಲಣ್ಣವಮ್ಮ,ಅಮೀನ್ ರೆಡ್ಡಿ ಮಲ್ಲೇದ,ಬಸುಗೌಡ ಪೊಲೀಸ್ ಪಾಟೀಲ,ನಿಂಗಣ್ಣ ಮುದ್ದಾ,ಪಿಡ್ಡಪ್ಪ ನಂದಿಕೋಲ,ಮಲ್ಲಿಕಾರ್ಜುನ್ ವಿರುಪಾಪುರ ಮಾತೃಶ್ರೀ ಶರಣಮ್ಮ ತಾಯಿ ಸೇರಿದಂತೆ ಇತರರು ಉಪಸಿತರಿದ್ದರು.