ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡಿ - ಶ್ರೀ ಗುರು ಶಾಂತವೀರ ಶಿವಾಚಾರ್ಯರು.

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡಿ - ಶ್ರೀ ಗುರು ಶಾಂತವೀರ ಶಿವಾಚಾರ್ಯರು.

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡಿ - ಶ್ರೀ ಗುರು ಶಾಂತವೀರ ಶಿವಾಚಾರ್ಯರು.

ಶಹಾಪುರ : ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಹಾಗೂ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ,ಸಂಸ್ಕೃತಿ ಕಲಿಸಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಶ್ರೀಗುರು ಶಾಂತವೀರ ಶಿವಾಚಾರ್ಯ ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದ ಯುನಿಟೆಡ್ ಪಬ್ಲೀಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನ ಹಿನ್ನಲೇ ಧ್ವಜಾರೋಹಣ ನೇರವೆರಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ್ ಮಕ್ತಾಪುರ ಮಾತನಾಡಿ, 1950 ಜ.26 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಲಾಗಿದ್ದು, ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವು ಅಸ್ಥಿತ್ವಕ್ಕೆ ಬಂದ ದಿನವಾಗಿದೆ.ಸಂವಿಧಾನ ಹಕ್ಕುಗಳನ್ನು ಪಾಲನೆ ಮಾಡುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶರಣಬಸವ ಬಿರೆದಾರ ಮಾತನಾಡಿ, ಸಾಧು ಸಂತರ,ಸ್ವಾತಂತ್ರ್ಯ ಯೋಧರ,ದೇಶ ಪ್ರೇಮಿಗಳ, ಹಿರಿಯ ಹೋರಾಟ ಹಾಗೂ ಪರಿಶ್ರಮದಿಂದ ಕಟ್ಟಿ ಬೆಳೆಸಿರುವ ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳ ನಮ್ಮ ಮುಂದಿದ್ದು,ಈ ಕಾರ್ಯದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಈ ಸಮಾರಂಭದ ವೇದಿಕೆ ಮೇಲೆ ಯುವ ಉದ್ಯಮಿಗಳಾದ ಬಸ್ಸಣ್ಣಗೌಡ ಕಂಚಲಕವಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮೌರ್ಯ,ಪತ್ರಕರ್ತ ಪುರುಷೋತ್ತಮ ಸುರಪುರ,ನಾಗಪ್ಪ ಗೌಡ ಶಕಾಪುರ,ಮಲ್ಲಪ್ಪ ಮೇಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.