ಟೆಂಗಳಿಯಲ್ಲಿ ಭಕ್ತಿಭಾವದಿಂದ ಜಂಗಮರ 101 ಪಾದಪೂಜೆ

ಟೆಂಗಳಿಯಲ್ಲಿ ಭಕ್ತಿಭಾವದಿಂದ ಜಂಗಮರ 101 ಪಾದಪೂಜೆ

ಟೆಂಗಳಿಯಲ್ಲಿ ಭಕ್ತಿಭಾವದಿಂದ ಜಂಗಮರ 101 ಪಾದಪೂಜೆ 

ಡಾ. ಶಾಂತ ಸೋಮನಾಥ ಶಿವಾಚಾರ್ಯರಿಂದ ಅಷ್ಟಾವರ್ಣಗಳ ತಾತ್ವಿಕ ವಿವರಣೆ

ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ಸಿದ್ರಾಮಪ್ಪ ಅಂಡಗಿ ಟೆಂಗಳಿ ಅಂಡಗಿ ಪ್ರತಿಷ್ಠಾನದ ವತಿಯಿಂದ ದಿನಾಂಕ 20.04.2025 ರಂದು ಬೆಳಿಗ್ಗೆ 11 ಗಂಟೆಗೆ ಜಂಗಮರ 101 ಪಾದಪೂಜೆ ಮತ್ತು ಪ್ರಸಾದ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಟೆಂಗಳಿ ಹಾಗೂ ಮಂಗಲಗಿ ಶಾಂತೇಶ್ವರ ಮಠದ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅವರು ತಮ್ಮ ಆಶೀರ್ವಚನದಲ್ಲಿ, ವಿರಶೈವ ಧರ್ಮದ ತತ್ವವಾದ ಅಷ್ಟಾವರ್ಣಗಳ ಮಹತ್ವವನ್ನು ವಿವರಿಸಿದರು. ಗುರು, ಲಿಂಗ ಮತ್ತು ಜಂಗಮರನ್ನು ಪೂಜಿಸಬೇಕಾದ ಮಾನವರಾಗಿ ಗುರುತಿಸಿದರು. ಗುರು ಎಂದರೆ ಧಾರ್ಮಿಕ ಗುರುಗಳು ಮಾತ್ರವಲ್ಲ, ಬುದ್ಧಿಜಾಗೃತಿಯ ಹಂತದಲ್ಲಿ ವ್ಯಕ್ತಿಯ ಅಂತರಾತ್ಮವೂ ಗುರುವಾಗಬಹುದು. ಜಂಗಮರು ಧರ್ಮದ ಬೋಧನೆ ಮತ್ತು ಪ್ರಚಾರ ಮಾಡುವ ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಭಕ್ತರು ಧರಿಸುವ ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಇವುಗಳ ಅರ್ಥವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪೂಜ್ಯ ವೀರಭದ್ರಯ್ಯ ಸಾಲಿಮಠ ಅವರು ಮಾತನಾಡಿ, “ಪ್ರಸಾದ ಸೇವನೆಯು ದೇಹಕ್ಕೆ ಪೋಷಕವಾಗುವುದು ಮಾತ್ರವಲ್ಲ, ಮನಸ್ಸು ಮತ್ತು ಆತ್ಮವನ್ನೂ ಚೈತನ್ಯಗೊಳಿಸುತ್ತದೆ. ಇದು ನಮ್ಮ ಆಧ್ಯಾತ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿಯವರು ಪ್ರಾಸ್ತಾವಿಕ ಭಾಷಣದಲ್ಲಿ, “ಗುರು-ಹಿರಿಯರ ಹಾಗೂ ತಂದೆ-ತಾಯಿಯರ ಪಾದಪೂಜೆ ಮಾಡುವ ಸಂಸ್ಕೃತಿ ನಮ್ಮ ಭಾರತೀಯ ಪರಂಪರೆಯ ಮಹತ್ವದ ಭಾಗ. ಇದನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದು ನಮ್ಮ ಪಾಲಕರ ಜವಾಬ್ದಾರಿ” ಎಂದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಹೂವಮ್ಮ ಅಂಡಗಿ, ಕಾರ್ಯಾಧ್ಯಕ್ಷ ಸಿದ್ರಾಮಪ್ಪ ಅಂಡಗಿ, ಕಾರ್ಯದರ್ಶಿ ನಾಗರತ್ನ @ ರೇಖಾ ಅಂಡಗಿ, ರಾಜೇಶ್ವರಿ ಅಂಡಗಿ, ಶಾರದಾಬಾಯಿ ನಿರಂಜಿ, ಶಾಂತಮ್ಮ ನೀಲಳ್ಳಿ, ಹೇಮಾವತಿ ಆಂದೇವಿ, ಅವಿನಾಶ ಅಂಡಗಿ, ಭೀಮಾಶಂಕರ ಅಂಕಲಗಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

---