ನಾಳೆ ರೇಣುಕಾಚಾರ್ಯ ಜಯಂತಿ : ತಹಸೀಲ್ದಾರರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕಡ್ಡಾಯವಾಗಿ ಜಯಂತಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ

ನಾಳೆ ರೇಣುಕಾಚಾರ್ಯ ಜಯಂತಿ : ತಹಸೀಲ್ದಾರರ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಕಡ್ಡಾಯವಾಗಿ ಜಯಂತಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ
ಚಿಂಚೋಳಿ: ಆಡಳಿತ ವತಿಯಿಂದ ಮಾರ್ಚ 12 ರಂದು ಶ್ರೀ ರೇಣುಕಾಚಾರ್ಯ ಜಯಂತಿ, 14 ರಂದು ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜರುಗಲಿರುವ ಜಯಂತಿಯ ಪೂರ್ವ ಭಾವಿ ಸಭೆ ತಹಸೀಲ್ದಾರರ ನೇತೃತ್ವದಲ್ಲಿ ತಹಸೀಲ್ ಕಛೇರಿಯ ಸಭಾಂಗಣದಲ್ಲಿ ಡೆಯಿತು.
ಸರಕಾರದ ಆದೇಶದಂತೆ ಕ್ಷೇತ್ರದ ಎಲ್ಲಾ ಸರಕಾರಿ ಇಲಾಖೆ ಮತ್ತು ಸರಕಾರದ ಅಧೀನದೊಳಗೆ ಬರುವ ಖಾಸಗಿ, ಅನುದಾನಿತ ಶಾಲೆ ಕಾಲೇಜು, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ವಸತಿ ನಿಲಯ ಮತ್ತು 27 ಗ್ರಾಮ ಪಂಚಾಯತ ಕಾರ್ಯಾಲಯಗಳು ಸೇರಿದಂತೆ ಸರಕಾರದ ವ್ಯಾಪ್ತಿಗೆ ಬರುವ ಕಛೇರಿಗಳಲ್ಲಿ ಜಯಂತಿ ಆಚರಣೆ ಕಡ್ಡಾಯವಾಗಿ ನೆರವೇರಿಸಬೇಕೆಂದು ಆದೇಶವಿದೆ. ಆದರೂ ಕೆಲವು ಶಾಲೆ ಮತ್ತು ಅಂಗನವಾಡಿ ಕೇಂದ್ರ ಹಾಗೂ ವಸತಿ ನಿಲಯಗಳಲ್ಲಿ ಜಯಂತಿ ಆಚರಣೆ ಆಗದೇ ಇರುವುದರ ಬಗ್ಗೆ ದೂರುಗಳು ಬರುತ್ತಿವೆ. ಅಧಿಕಾರಿಗಳು ಜಯಂತಿಗಳ ಆಚರಣೆ ಮಾಡುವುದು ಸರಕಾರದ ಕೆಲಸವೆಂದು ಗೌರವಪೂರ್ವಕ ಮಾಡದೆ ಹಿಂದೆಟ್ಟು ಹಾಕಲಾಗುತ್ತಿರುವುದನ್ನು ಆರೋಪದ ದೂರಗಳು ಬರುತ್ತಿವೆ. ಜಯಂತಿಗಳು ಕಡ್ಡಯವಾಗಿ ಆಚರಣೆ ಮಾಡುವಲ್ಲಿ ಭಾಗವಹಿಸಬೇಕೆಂದು ತಹಸೀಲ್ದಾರರು ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ ಧನ್ನಿ, ವೈದ್ಯಾಧಿಕಾರಿ ಡಾ. ಗಫಾರ್, ರಾಜಕುಮಾರ ಬೋವಿನ್ , ಸಂಗಯ್ಯ ಸ್ವಾಮಿ ಅಣವಾರ, ಚಂದ್ರಕಾಂತ ಕೆರೋಳ್ಳಿ, ಆರೀಫ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ರೇಣುಕಾ ಚಾರ್ಯ ಜಯಂತ್ಯೋತ್ಸವದ ಅಧ್ಯಕ್ಷ ಶಿವುಸ್ವಾಮಿ, ನೀಲಕಂಠ ಸಿಳ್ಳಿನ್, ಮಲ್ಲಿಕಾರ್ಜುನ್ ಉಡುಪಿ, ಮಲ್ಲಿಕಾರ್ಜುನ ಸ್ವಾಮಿ ಯಲ್ಮಡಗಿ, ಮಲ್ಲಿಕಾರ್ಜುನ ಭೂಶೆಟ್ಟಿ, ಹಣಮಂತ ಪೂಜಾರಿ, ಮಂಜುನಾಥ ಸುಣಗಮಠ, ಶಂಕರ ಶಿವಪೂರಿ, ಅವರು ಇದ್ದರು.