ತೆಲಂಗಾಣ ಸಚಿವ ಶ್ರೀನಿವಾಸ್ ಗೌಡ ಜೊತೆ ಬಾಲರಾಜ್ ಭೇಟಿ

ತೆಲಂಗಾಣ ಸಚಿವ ಶ್ರೀನಿವಾಸ್ ಗೌಡ ಜೊತೆ ಬಾಲರಾಜ್ ಭೇಟಿ

ತೆಲಂಗಾಣ ಸಚಿವ ಶ್ರೀನಿವಾಸ್ ಗೌಡ ಜೊತೆ ಬಾಲರಾಜ್ ಭೇಟಿ

ಕಲಬುರಗಿ: ಕಲ್ಬುರ್ಗಿ ಜಿಲ್ಲಾ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಮತ್ತು ತೆಲಂಗಾಣದ ಮಾಜಿ ಸಚಿವರಾದ ಶ್ರೀನಿವಾಸಗೌಡ ಹೈದರಾಬಾದಿನಲ್ಲಿ ಇತ್ತೀಚೆಗೆ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.

    ಹೈದರಾಬಾದ್ ನಲ್ಲಿರುವ ಬಂಜಾರ ಹಿಲ್ಸ್ ನಲ್ಲಿ ಸಚಿವ ಶ್ರೀನಿವಾಸ್ ಗೌಡ ಅವರ ಸ್ವಗೃಹದಲ್ಲಿ ರಾಜಕೀಯ ಕುರಿತು ವಿಸ್ತೃತ ಚರ್ಚೆ ನಡೆಸಿದರು. ದೇಶದಲ್ಲಿ ಹಿಂದುಳಿದ ವರ್ಗಗಳ ಸಮಾನ ವೇದಿಕೆಯನ್ನು ರೂಪಿಸುವ ಅಗತ್ಯತೆಯ ಬಗ್ಗೆ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದರಲ್ಲದೆ ದಕ್ಷಿಣ ಭಾರತದಲ್ಲಿ ಇಂತಹ ಒಂದು ಪ್ರಯತ್ನಕ್ಕೆ ಮುಂದಾಗುವಂತೆ ಕರೆ ನೀಡಿದರು. ತೆಲಂಗಾಣದಲ್ಲಿ ಈ ಹಿಂದೆ ಗೌಡ ಸಮುದಾಯಕ್ಕೆ ನೀಡಿದ ಸವಲತ್ತುಗಳು ಮತ್ತು ಅದರಿಂದ ಹಿಂದುಳಿದ ಜನಾಂಗ ಅಭಿವೃದ್ಧಿಯತ್ತ ಹೆಜ್ಜೆ ಹಾಕಿರುವ ಬಗ್ಗೆ ಕೂಲಂಕಶವಾಗಿ ಚರ್ಚೆ ನಡೆಸಲಾಯಿತು 

    ಈ ಸಂದರ್ಭದಲ್ಲಿ ಚಿತ್ತಾಪುರ ತಾಲ್ಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಡಾ. ಪ್ರಣವಾನಂದ ಶ್ರೀಗಳು ಉಪಸ್ಥಿತರಿದ್ದು ಏಪ್ರಿಲ್ 28ಕ್ಕೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆ ಮಲ್ಲಾಪುರ ಶ್ರೀ ಶರಣಬಸವೇಶ್ವರ ಮಠದಲ್ಲಿ ಏಕಕಾಲಕ್ಕೆ 40 ಶರಣಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ತೆಲಂಗಾಣದ ಸಮಾಜ ಬಾಂಧವರಿಗೆ ವಿತರಿಸಲು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರಾಮನಗೌಡ ಮತ್ತು ಲಿಂಗೇಶ್ ಗೌಡ ಉಪಸ್ಥಿತರಿದ್ದರು.