ಅಕ್ಷರಾಂಜಲಿ( ಡಾ.ಎಂ ಆರ್ ದೊರೆಸ್ವಾಮಿ ನಾಯ್ಡು)

ಅಕ್ಷರಾಂಜಲಿ
ಶಿಕ್ಷಣ ಕ್ಷೇತ್ರದ ಉಜ್ವಲ ನಕ್ಷತ್ರ ಡಾ ಎಂ ಆರ್ ದೊರೆಸ್ವಾಮಿ ನಾಯ್ಡು
ರಾಜ್ಯದ ಪ್ರತಿಷ್ಠಿತ PES ವಿವಿ ಸಂಸ್ಥಾಪಕರು,ಶಿಕ್ಷಣ ತಜ್ಞರು,ವಿಧಾನ ಪರಿಷತ್ತಿನ ಮಾಜಿ ಸದಸ್ಯರು,ನನ್ನ ಬಗ್ಗೆ ಅಪಾರ ಪ್ರೀತಿ ಉಳ್ಳವರೂ ಆಗಿದ್ದ ಶ್ಡಾ. ದೊರೆಸ್ವಾಮಿ ನಾಯ್ಡು ಅವರು ವಿಧಿವಶರಾಗಿದ್ದಾರೆ.ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ.
ದಿ. ದೊರೆಸ್ವಾಮಿ ಅವರ ಕುರಿತು ಒಂದೆರಡು ಮಾತು.
ಬೆಂಗಳೂರಿನ ಹನುಮಂತನಗರದ ಬಡಾವಣೆಯೊಂದರಲ್ಲಿ ಪುಟ್ಟ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಇಡೀ ಭಾರತದ ಶೈಕ್ಷಣಿಕ ನಕಾಶೆಯಲ್ಲಿ ಕರ್ನಾಟಕದ ಹೆಸರು ಅಚ್ಚೊತ್ತುವಂತೆ ಮಾಡಿದ ಕೀರ್ತಿಶೇಷರು ಅವರು.
ಒಂದು ಬೃಹತ್ ಖಾಸಗಿ ಸಂಸ್ಥೆ ಕಟ್ಟಿದ ನಂತರವೂ ಸರಕಾರಿ ಶಾಲೆಗಳ ಸುಧಾರಣೆಗೆ ಅವರ ಕಾಳಜಿ,ತುಡಿತ ಅಮಿತ.ಆ ವಿಷಯದಲ್ಲಿ ಇತರರಿಗೂ ದೊರೆಸ್ವಾಮಿ ಪ್ರೇರಕರಾಗಿದ್ದರು. ಹಾಗೆಯೇ ನನ್ನಂಥವರು ಮಾಡಿದ ಫೋನ್ ಕರೆಯನ್ನು ಮನ್ನಿಸಿ ಅದೆಷ್ಟು ಬಡ ಮಧ್ಯಮ ವರ್ಗದ ಪ್ರತಿಭಾವಂತರು ಸುಲಭದಲ್ಲಿ ಉನ್ನತ ವ್ಯಾಸಂಗ ಮಾಡಲು ಅನುವು ಮಾಡಿಕೊಟ್ಟಿದ್ದರೋ.ನಿಮ್ಮ ಮಾದರಿ ನಮ್ಮ ಮನದಲ್ಲಿ ಚಿರಸ್ಥಾಯಿ.ಹೋಗಿ ಬನ್ನಿ…
ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ದೊರೆಸ್ವಾಮಿ ಅವರು ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರು. ಮಾಜಿ ವಿಧಾನ ಪರಿಷತ್ತು ಸದಸ್ಯರು. ಮಾಜಿ ಶಿಕ್ಷಣ ಇಲಾಖೆಯ ಸಲಹೆಗಾರು.ಕನ್ನಡ ಪ್ರೇಮಿಗಳು ನಾಡು ನುಡಿಯ ಪೋಷಕರು.
ಶ್ರೀಯುತರು ರಾಜ್ಯದ ಹಲವಾರು ಭಾಗಗಳಲ್ಲಿ ತಾಂತ್ರಿಕ,ವೈದ್ಯಕೀಯ ಹಾಗುಪದವಿ ಕಾಲೇಜು ಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ಪ್ರಚಾರದ ಅಬ್ಬರವಿಲ್ಲದೆ,ಎಲೆಮರೆಯ ಕಾಯಿಯಂತೆ ವಿದ್ಯಾತಪಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಳಿವಯಸ್ಸಿನಲ್ಲೂ ಶಿಕ್ಷಣಕ್ಷೇತ್ರದ ಉತ್ತಮ ಸುಧಾರಣೆಗಾಗಿ ಅವಿರತ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಶ್ರೀಯುತರು ಸ್ಥಾಪಿಸಿದ ಪಿ.ಇ. ಎಸ್.ಶಿಕ್ಷಣ ಸಂಸ್ಥೆಗಳು ಜನಪ್ರಿಯವಾಗಿವೆ.
ನಾಡೋಜ ಡಾ.ಎಂ.ಆರ್ ದೊರೆಸ್ವಾಮಿ ಅವರು ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದ ದಾರ್ಶನಿಕ ,ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ನಾಡಿಗೆ ಶಿಕ್ಷಣ ಕ್ಷೇತ್ರದ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಒಂದು ಸಾಮಾನ್ಯ ಕಟ್ಟಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ಪಿಯುಸಿ ಶಿಕ್ಷಣದ ಮೂಲಕ ಎಲ್ಲ ಕ್ಷೇತ್ರದ ಪದವಿ ತರಗತಿಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಪಿಇಎಸ್ ವಿಶ್ವವಿದ್ಯಾಲಯ ಸ್ಥಾಪಿಸಿ, ಇತ್ತೀಚೆಗೆ ತಮ್ಮ ವೈದ್ಯಕೀಯ ಕಾಲೇಜಿಗೆ 100 ಸೀಟುಗಳ ಪರವಾನಿಗೆಯನ್ನು ಕೇಂದ್ರ ಸರ್ಕಾರದಿಂದ ಪಡೆದು ಹಿರಿಯ ಸಾಧನೆ ಮಾಡಿದ ರೂವಾರಿ ಡಾ. ದೊರೆಸ್ವಾಮಿ ಅವರು.ಆಂಧ್ರಪ್ರದೇಶದ ಕುಪ್ಪಂನಲ್ಲಿ ಸಹ ವೈದ್ಯಕೀಯ ಕಾಲೇಜು ಪ್ರಾರಂಭಿಸಿ ಅಶಕ್ತರಿಗೆ ಅವಕಾಶ ವಂಚಿತರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸಿದ್ದು ಬಡವರ ಬಗ್ಗೆ ಅವರಿಗೆ ಇದ್ದ ಅಂತಃಕರಣಕ್ಕೆ ಸಾಕ್ಷಿಯಾಗಿದೆ. ಶಾಸಕರಾಗಿ ಮತ್ತು ಸರ್ಕಾರದ ಶಿಕ್ಷಣ ನೀತಿಗೆ ಸಲಹೆಗಾರರಾಗಿ ತಮ್ಮ ಅನುಭವವನ್ನು ನಾಡಿಗೆ ಧಾರೆ ಎರೆದಿದ್ದಾರೆ
ಅಪಾರ ಜನಸಮುದಾಯಕ್ಕೆ, ವಿದ್ಯಾರ್ಥಿ ಯುವಜನರಿಗೆ ಅಧ್ಯಾಪಕ ವೃಂದಕ್ಕೆ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೇ.
ಪ್ರೋ ಕೆ ವಿ. ರಾಮ ರಾವ್
ಹಿರಿಯ ವಾಣಿಜ್ಯ ಶಾಸ್ತ್ರ ಪ್ರಾಧ್ಯಪಕರು