ಮಾರ್ಚ್ 9 ರಂದು ಯಾದಗಿರಿಯಲ್ಲಿ ಜನನಿ ಉತ್ಸವ

ಮಾರ್ಚ್ 9 ರಂದು ಯಾದಗಿರಿಯಲ್ಲಿ ಜನನಿ ಉತ್ಸವ

ಮಾರ್ಚ್ 9 ರಂದು ಯಾದಗಿರಿಯಲ್ಲಿ ಜನನಿ ಉತ್ಸವ 

ಯಾದಗಿರಿ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಬಾಲಾಜಿ ದೇವಸ್ಥಾನದ ಹತ್ತಿರವಿರುವ ವನಕೇರಿ ಲೇಔಟ್ ನಲ್ಲಿ ಮಾರ್ಚ್ 9 ರಂದು ಸಾಯಂಕಾಲ 6 ಗಂಟೆಗೆ *ಜನನಿ ಉತ್ಸವ-2025* ಹಮ್ಮಿಕೊಳ್ಳಲಾಗಿದೆ ಎಂದು ಮಾತೋಶ್ರೀ ಬಸಮ್ಮ ಶರಬಣ್ಣ ಮಹಾಮನಿ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು, ಮುಖ್ಯಅತಿಥಿಗಳಾಗಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ,ಗುರುಮಿಟ್ಕಲ್ ಕ್ಷೇತ್ರದ ಶಾಸಕರಾದ ಶರಣಗೌಡ ಕಂದುಕೂರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪೃಥ್ವಿಕ್ ಶಂಕರ್.ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ,

ಅಂತರರಾಷ್ಟ್ರೀಯ ಪ್ರಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ,ಹಿರಿಯ ಚಲನಚಿತ್ರ ಹಾಸ್ಯ ನಟ ಮುಖ್ಯಮಂತ್ರಿ ಚಂದ್ರು, ಮಿಮಿಕ್ರಿ ಕಲಾವಿದ ನರಸಿಂಹ ಜೋಶಿ,ಅಲ್ಪ ಸಮಯದಲ್ಲಿ ಅತಿ ವೇಗವಾಗಿ ಚಿತ್ರ ಬಿಡಿಸುವ ಜಗತ್ ಪ್ರಖ್ಯಾತಿ ವಿಲಾಸ್ ನಾಯಕ,ಕಲಬುರಗಿಯ ಗುಂಡಣ್ಣ ಡಿಗ್ಗಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. 

ಈ ಭಾರಿಯ 2025 ನೇ ಸಾಲಿನ *ಜನನಿ* ಪ್ರಶಸ್ತಿಗೆ ವಿಜಯಪುರದ ಖ್ಯಾತ ವೈದ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಭಾಜನರಾಗಿದ್ದು,ಅವರಿಗೆ ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದೆವೆ ಎಂದು ಹೇಳಿದರು.ಆದ್ದರಿಂದ ಈ ಉತ್ಸವದಲ್ಲಿ ಹೆಚ್ಚಿನ ಜನಸಂಖ್ಯೆ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟಿನ ಕಾರ್ಯದರ್ಶಿ ಸಿದ್ಧಲಿಂಗಪ್ಪ ಮಹಾಮನಿ ತಿಳಿಸಿದ್ದಾರೆ.