ಜನಜಾಗೃತಿ ಸೇವಾ ರಥಯಾತ್ರೆ

ಜನಜಾಗೃತಿ ಸೇವಾ ರಥಯಾತ್ರೆ
ಕಲಬುರಗಿ: ಗೋರಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಘಟಕದಿಂದ ಗೋರ ಬಂಜಾರ ಜನಾಂಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಜನಜಾಗೃತಿ ಮತ್ತು ಜನಾಂದೋಲನ ರಥಯಾತ್ರೆಯನ್ನು ಮಾ.4ರಿಂದ 10ರವರೆಗೆ ಬೀದರ್ ನಗರದಿಂದ ಕಲಬುರಗಿ ನಗರದಕ್ಕೆ ಆಗಮಿಸಿದ್ದಾಗ ಗೋರಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾಧ್ಯಕ್ಷ ಮಾನಸಿಂಗ್ ಆರ್.ಚವ್ಹಾಣ ನೇತೃತ್ವದಲ್ಲಿ ಸ್ವಾಗತ ಕೋರಿ ನಂತರ ಬೆಂಗಳೂರಿನ ವರೆಗೆ ತೆರಳಿತು.
ಮಾನಸಿಂಗ್ ಆರ್.ಚವ್ಹಾಣ ಮಾತನಾಡಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ತಾಂಡಾಗಳಿದ್ದು, ಇಲ್ಲಿವರೆಗೆ ಈ ತಾಂಡಾಗಳ ಜನಸಂಖ್ಯೆ ಕುರಿತು ಯಾವುದೇ ವೈಜ್ಞಾನಿಕ ಅಧ್ಯಯನ ಆಗಿರುವುದಿಲ್ಲ. ಸಮಾಜದ ಜನ ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಗೆ ಗುಳೆ ಹೋಗುತ್ತಿದ್ದು, ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮೂಢನಂಬಿಕೆಯಿAದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಂಜಾರರಲ್ಲಿ ವಧುದಕ್ಷಿಣೆ ಕೊಟ್ಟು ಹೆಣ್ಣು ತಂದುಕೊಳ್ಳುವುದು ಇತ್ತು. ಈಗ ಅನಿಷ್ಟ ಪದ್ಧತಿಯಾದ ವರದಕ್ಷಿಣೆ ಬಲೆಗಿ ಸಿಲುಕಿದ್ದಾರೆ. ಬಡತನ, ಅಜ್ಞಾನ, ಅನಕ್ಷರತೆಯ ಲಾಭ ಪಡೆಯಲು ಅನೇಕ ಕುತಂತ್ರಿಗಳು ಹವಣಿಸುತ್ತಿದ್ದು, ಸಮಾಜವನ್ನು ಮತಾಂತರಕ್ಕೆ ತಳ್ಳುತ್ತಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಗೋರಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಅಧ್ಯಕ್ಷ ಬಾಳಾಸಾಬೇಬ ರಾಠೋಡ, ಮಾಜಿ ಸಂಸದ ಡಾ.ಉಮೇಶ ಜಾಧವ, ರಾಜ್ಯ ಉಪಾಧ್ಯಕ್ಷ ರವಿಕಾರಬಾರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ ಚವ್ಹಾಣ, ಮಾಧ್ಯಮ ವಕ್ತಾರ ನೇಹರು ಜಾಟೋದ್, ನಗರದ ಅಧ್ಯಕ್ಷ ವಿನೋದ ರಾಠೋಡ, ನಗರ ಉಪಾಧ್ಯಕ್ಷ ರಾಹುಲ್ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ರಾಠೋಡ ಸೇರಿದಂತೆ ರಾಜ್ಯ ಹಾಗೂ ತಾಲೂಕು ಪದಾಧಿಖಾರಿಗಳು ಇದ್ದರು.