ಬೀದರನಲ್ಲಿ ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ
ಬೀದರನಲ್ಲಿ ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ
ಬೀದರ್: ಇಂದು ಬೌದ್ದರ ಹಕ್ಕಿಗಾಗಿ ಹಾಗೂ ಬಿ.ಟಿ ಕಾಯ್ದೆ-1949 ರದ್ದುಗೊಳಿಸಿ ಬುದ್ದಗಯಾದ ಮಹಾಬೋಧಿ ಮಹಾವಿಹಾರದ ಅಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡಲು ದೇಶಾದ್ಯಂತ ಆಲ್ ಇಂಡಿಯಾ ಬುದ್ದಿಷ್ಟ್ ಫೋರಮ್ ಮುಖಾಂತರ ಪ್ರತಿಭಟನೆ ಹಮ್ಮಿಕೊಂಡ ನಿಮಿತ್ತ ನಾಡಿನ ಗಡಿ ಜಿಲ್ಲೆ ಬೀದರ್‌ನಲ್ಲೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು
ಬೀದರ್ ಬುದ್ದಿಷ್ಟ್ ವಿಹಾರದ ಸಂಸ್ಥಾಪಕರಾದ ಪೂಜ್ಯ ಭಂತೆ ಧಮ್ಮಾನಂದ ಮಹಾಥೆರೊ ಅಧ್ಯಕ್ಷ ಪೂಜ್ಯ ಭಂತೆ ಜ್ಞಾನ ಸಾಗರ ಕಾರ್ಯದರ್ಶಿ ಪೂಜ್ಯ ಭಂತೆ ಸಂಘರಖ್ಖೀತ, ಭಂತೆ ಧರ್ಮಪಾಲ ರೆಕುಳಗಿ ಮೌಂಟ್, ಭಂತೆ ನೌಪಾಲ ಭಾಲ್ಕಿ, ಹಾಗೂ ಭೀಕ್ಕು ಸಂಘ ಹಾಗೂ ವಿವಿಧ ಬೌದ್ಧ ಸಂಘಟನೆಗಳು, ದಲಿತ ಸಂಘಟನೆಗಳ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು
ಸಂವಿಧಾನ ಅಂಗಿಕಾರ ದಿನಾಚರಣೆ ಇರುವ ಪ್ರಯುಕ್ತ ಈ ಪ್ರತಿಭಟನೆ ಮಹತ್ವ ಪಡೆದಿದ್ದು, ದೇಶಾದ್ಯಂತ ಎಲ್ಲ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ
ಬೀದರ ಜಿಲ್ಲೆಯಲ್ಲಿ
ಈ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ಅಲ್ಲದೇ ವಿಶೇಷವಾಗಿ ಬುದ್ದಗಯಾ ಬಿಹಾರದಲ್ಲಿರುವ ಕಾರಣ ಅಲ್ಲಿಯ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೂ ಸಹ ಮನವಿ ಪತ್ರ ಸಲ್ಲಿಸಲಾಯಿತು
ಇಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ರ್ಯಾಲಿಯು ಬೀದರ ನಗರದ ಜನವಾಡ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ತಹಶಿಲ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತ್ತು
ಬೃಹತ್ ಪ್ರತಿಭಟನೆ ಬೌಧ್ದ ಆಚರ್ಯ ಮಿಲಿಂದ ಗೂರುಜಿ, ಉಪಸಕರಾದ ಧರ್ಮರಾಯ ಘಾಂಗ್ರೆ, ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ, ಬಾಬು ಪಾಸ್ವಾನ್, ರಾಜಕುಮಾರ ಮೂಲಭಾರತಿ,ಶ್ರೀಪತರಾವ ದಿನೆ, ಶಿವಕುಮಾರ ನಿಲಿಕಟ್ಟಿ, ಮಹೇಶ ಗೋರನಾಳಕರ್, ಸುರೇಶ ಜೋಜನಾಕರ್, ಅಂಬಾದಾಸ ಚಕ್ರವರ್ತಿ, ಡಾ.ಕಾಶಿನಾಥ ಚೆಲ್ವಾ, ರಾಜಪ್ಪಾ ಗೂನಳ್ಳಿಕರ್, ಬಾಬುರಾವ ಮಿಠಾರೆ, ಚಂದ್ರಕಾಂತ ನಿರಾಟೆ,ಅರುಣ ಪಟೇಲ್, ಅವಿನಾಶ ದಿನೆ, ಭರತ ಕಾಂಬಳೆ, ರಾಜಕುಮಾರ ವಾಘಮಾರೆ, ಸಂದೀಪ ಕಾಂಟೆ, ಪ್ರಕಾಶ ರಾವಣ, ವಿನೋದಕುಮಾರ ಶಾಕ್ಯಪಾಲ್, ಪ್ರದೀಪ ನಾಟೆಕರ್ ಉಪಾಸಕಿಯರಾದ ಚಂದ್ರಕಲಾ ಬಡಿಗೇರ, ಮಂಜುಳಾ ಭಾವಿದೋಡ್ಡಿ ಪುನಿತಾ ಗಾಯಕವಾಡ, ಗಂಗಮ್ಮ ಫುಲೆ, ಲಕ್ಷ್ಮಿ ಹೊಸಮನಿ ಹಾಗೂ ಜಿಲ್ಲೆಯ ಬುದ್ಧಿಜೀವಿಗಳು, ಸಾಹಿತಿಗಳು ಚಿಂತಕರು ಯುವಕರು ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
-ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್