HKE ,ಎಂ ಎಸ್ ಇರಾಣಿ ಪದವಿ ವಿದ್ಯಾರ್ಥಿಗಳ ಒಕ್ಕೂಟದ ಸಭೆ

HKE ,ಎಂ ಎಸ್ ಇರಾಣಿ ಪದವಿ ವಿದ್ಯಾರ್ಥಿಗಳ ಒಕ್ಕೂಟದ ಸಭೆ

HKE ಎಂ ಎಸ್ ಇರಾಣಿ ಪದವಿ ವಿದ್ಯಾರ್ಥಿಗಳ ಒಕ್ಕೂಟದ ಸಭೆ 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಇಂದು 2024 ವರ್ಷದ ಸಭೆ ನಡೆಸಿದರು ಇಂದು ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿದ್ದರು.

ಇಂದಿನ ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೋ ರೋಹಿಣಿ ಕುಮಾರ್ ಹಿಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಡಾ ಇಂದಿರಾ ಶಕ್ತಿ ತಮ್ಮ ಕಾಲೇಜಿನ ಹಳೆಯ ದಿನದ ನೆನಪು ಮೆಲುಕು ಹಾಕಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ ರಾಜಕುಮಾರ್ ಮಲಕಪ್ಪಗೋಳ ತಮ್ಮ ವಿದ್ಯಾರ್ಥಿಗಳ ಜೀವನದಲ್ಲಿ ತಾವು ಅನುಸರಿಸುತ್ತಿದ್ದ ಶಿಸ್ತು ಸಮಯ ಪರಿಪಾಲನೆಯ ಮೆಲುಕು ಹಾಕಿದರು.

ಸಂಘದ ಕಾರ್ಯದರ್ಶಿ ಶ್ರೀ ಶಿವರುದ್ರ ಗುಡ್ಡಾ ಸಂಘದ ಸಂಯೋಜಕರಾದ ಡಾ ರೇಣುಕಾದೇವಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕ ಹಳೆಯ ವಿದ್ಯಾರ್ಥಿಗಳ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶ್ರೀ ಅಜೀತ್ ಪಾಟೀಲ್ , ಶ್ರೀ ಬಿ ಓಂ ಬೋಮ್ಮಪ್ಪ, ಶ್ರೀ ವಿನೋದ್ ಕುಮಾರ್, ಶ್ರೀಮತಿ ವಿಜಯಲಕ್ಷ್ಮೀ ವಾರದ, ಶ್ರೀ ವಿವೇಕ, ಐಕ್ಯೂಎಸಿ ಸಂಯೋಜಕರಾದ ಡಾ ಜಯಶ್ರೀ ಬಡಿಗೇರ, ನ್ಯಾಕ್ ಸಂಯೋಜಕರಾದ ಡಾ ಪ್ರಾಣೇಶ್ ಎಸ್, ಉಪಸ್ಥಿತರಿದ್ದರು ಸಭೆಯ ನಿರೂಪಣೆಯನ್ನು ಶ್ರೀಮತಿ ಸುಮಂಗಲಾ ಆರ್ ಪಾಟೀಲ್ ಮಾಡಿದರು ಶ್ರೀಮತಿ ವಿಜಯಲಕ್ಷ್ಮೀ ನಂದ್ಯಾಳ ವಂದಿಸಿದರು ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಶ್ರೀ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.