ಎನ್‌ಪಿಎಸ್ ಪಿಯು ಕಾಲೇಜ್ ಪ್ರವೇಶ ಪರೀಕ್ಷೆಗೆ 4,780
ಎನ್‌ಪಿಎಸ್ ಪಿಯು ಕಾಲೇಜ್ ಪ್ರವೇಶ ಪರೀಕ್ಷೆಗೆ 4,780
ವಿದ್ಯಾರ್ಥಿಗಳು ಹಾಜರಿ ಕಲಬುರ್ಗಿ: ನಗರದ ಶಹಾಬಾದ್ ರಸ್ತೆಯ ಎನ್‌ಪಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ 28.12.2025 ರಂದು ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಹಾಗೂ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಒಟ್ಟು *4,780* ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರ ಮೂಲಕ ಅತ್ಯುತ್ತಮ ಸ್ಪಂದನೆ ವ್ಯಕ್ತವಾಯಿತು. ಕಾಲೇಜಿನ ಕ್ಯಾಂಪಸ್ ನಲ್ಲಿ ಬೆಳಗ್ಗೆ 7:45 ರಿಂದ 1:30 ಗಂಟೆ ರವರೆಗೆ ನಡೆದ ಪರೀಕ್ಷೆಯಲ್ಲಿ ಕಲಬುರ್ಗಿ ಜಿಲ್ಲೆಯ ಆಳಂದ್, ಅಬ್ಜಲ್ಪುರ್ ಚಿಂಚೋಳಿ,ಚಿತ್ತಾಪುರ, ಶಾಬಾದ್ ಸೇಡಂ, ಜೆವರ್ಗಿ, ಕಾಳಗಿ
ಗುರುಮಿಟ್ಕಲ್, ಹುಮ್ನಾಬಾದ್ ಇತರ ಶಾಲೆಗಳಿಂದ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಹರಿದು ಬಂದರು.
ಸ್ಟೇಟ್ ಬೋರ್ಡ್ ಐಸಿಎಸ್ಇ ಹಾಗೂ ಸಿಬಿಎಸ್‌ಸಿ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಭಾಗವಹಿಸಿದರು.
ಕಲ್ಬುರ್ಗಿ ಜಿಲ್ಲೆ ಅಲ್ಲದೆ ಬೀದರ್,ಯಾದಗಿರ್, ಶಾಹ ಪುರ,ಪರೀಕ್ಷಾ ಕೇಂದ್ರಗಳನ್ನು ಆಯೋಜಿಸಲಾಗಿತ್ತು. ಯಾದಗಿರಿನಲ್ಲಿ *732* ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಶಾಪುರ್ ನಲ್ಲಿ *330* ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬೀದರ್ ನಲ್ಲಿ *302* ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೆ ಸಂದರ್ಭದಲ್ಲಿ
ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಕಾಲೇಜು ಚಟುವಟಿಕೆ ಕುರಿತು ಪ್ರಾತ್ಯಕ್ಷಿತ ಸಹಿತ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ *ಡಾ. ಶಶೀಲ್ ಜೀ ನಮೋಶಿಯವರು* ಕಾರ್ಯದರ್ಶಿಗಳಾದ *ಸುರೇಶ್ ಕುಮಾರ್ ಬುಲ್ ಬುಲೆಯವರು* ಸಂಸ್ಥೆ ಇತರ ಸದಸ್ಯರು ಹಾಗೂ ಪ್ರಾಂಶುಪಾಲರು,ಆಡಳಿತ ಅಧಿಕಾರಿ,ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
