ಕುಡು ಒಕ್ಕಲಿಗ ಸಮಾಜದ ಸಭೆ ನಾಳೆ8

ಕುಡು ಒಕ್ಕಲಿಗ ಸಮಾಜದ ಸಭೆ ನಾಳೆ8

ಕುಡು ಒಕ್ಕಲಿಗ ಸಮಾಜದ ಸಭೆ ನಾಳೆ

ಕಲಬುರಗಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಮಗ್ರ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸೂಪರ್ ಮಾರ್ಕೆಟ್‌ನ ಜಿಲ್ಲಾ ಕುಡು ಒಕ್ಕಲಿಗರ ಅಭಿವೃದ್ಧಿ ಸೇವಾ ಸಂಘದ ಕಾರ್ಯಾಲಯದಲ್ಲಿ ದಿ. 24 ರಂದು ಬೆಳಗ್ಗೆ 11 ಗಂಟೆಗೆ ಕುಡು ಒಕ್ಕಲಿಗ ಸಮಾಜದ ಸ್ಥಿತಿಗತಿ ಕುರಿತ ಪದಾಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಣ್ಣಗೌಡ ಪಾಟೀಲ್ ತಿಳಿಸಿದ್ದಾರೆ. 

ಸಂಘದ ರಾಜ್ಯಾಧ್ಯಕ್ಷ ಶಿವರಾಜ ಪಾಟೀಲ್ ಕಲಗುರ್ತಿ, ಜಿಲ್ಲಾಧ್ಯಕ್ಷ ಶಿವಯೋಗಪ್ಪ ಚಿತ್ತಾಪುರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಕ್ರೋಢಿಕೃತ ಅಭಿಪ್ರಾಯ ಸಂಗ್ರಹಿಸಿ ಆಯೋಗದ ಮುಂದೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಪ್ರವರ್ಗ-3 ಎ ಅಡಿ ಕುಡು ಒಕ್ಕಲಿಗ ಸಮಾಜ ಸೇರಿಸಬೇಕು ಎಂಬ ನಮ್ಮ ಬೇಡಿಕೆಯಾಗಿದೆ. ಜಿಲ್ಲೆಯ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಪ್ಪದೆ ಸಲಹೆ ಸೂಚನೆ, ಅಭಿಪ್ರಾಯ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

.