ಬಿ.ಎಸ್ .ಯಡಿಯೂರಪ್ಪ

ಬಿ.ಎಸ್ .ಯಡಿಯೂರಪ್ಪ

ಬಿ.ಎಸ್ .ಯಡಿಯೂರಪ್ಪ 

ಬೂಕನಕೆರೆ ಸಿದ್ದಲಿಂಗಪ್ಪನ ಮಗ ಯಡಿಯೂರಪ್ಪ ಇವರ ಜನನ ಫೆಬ್ರವರಿ 27, 1943 ಸಾಮಾನ್ಯವಾಗಿ ತಮ್ಮ ಮೊದಲಕ್ಷರಗಳಾದ ಬಿಎಸ್‌ವೈನಿಂದ ಕರೆಯಲ್ಪಡುವಇವರು ಇಂದು ಇವರ ೮೨ ಜನುಮದಿನ 

ಮಂಡ್ಯಾ ಜಿಲ್ಲೆಯ ಬೂಕನಕೆರೆಯವರಾದ ಬಿ.ಎಸ್ ಯಡಿಯೂರಪ್ಪನವರಿಗೆ ಆರ್‌ಎಸ್‌ಎಸ್‌ನ ಪ್ರಭಾವ ಅಗಾಧವಾದದ್ದು.1965 ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಆರ್‌ಎಸ್‌ಎಸ್‌ ಸಂಪರ್ಕಕ್ಕೆ ಬಂದ ಯಡಿಯೂರಪ್ಪನವರು, 1970 ರಿಂದ 72 ರವರೆಗಿನ ಸಂಘದ ತಳಮಟ್ಟದ ಪ್ರಮುಖ ಜವಾಬ್ದಾರಿಯಾದ ತಾಲೂಕು ಕಾರ್ಯವಾಹ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು.ದೀನ-ದಲಿತರಿಗೆ ಸಹಕಾರದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು, ಕಾರ್ಮಿಕ ವಲಯವನ್ನು ಉತ್ತೇಜಿಸಲು ಆರ್‌ಎಸ್ಎಸ್ ಒಡನಾಟವೇ ಕಾರಣ .

ಅವರು ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದೃಷ್ಟಿಕೋನಗಳನ್ನು ಹೊಂದಿದ್ದರಿಂದಲೇ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದಾಗ ಹಲವು ಮಹತ್ವದ ಉಪಕ್ರಮಗಳನ್ನು ಅವರು ಅನುಷ್ಠಾನಗೊಳಿಸಿದರು; ಮಾತ್ರವಲ್ಲ, ಪ್ರತಿಪಕ್ಷದಲ್ಲಿದ್ದಾಗಲೂ ತಮ್ಮ ಹೋರಾಟಗಳ ಮೂಲಕ ಹಾಗೂ ಸದನದಲ್ಲಿ ಧ್ವನಿ ಎತ್ತುವ ಹಲವಾರು ಜನಪರ ಕಾರ್ಯಗಳು ಜಾರಿಗೊಳ್ಳಲು ಪರೋಕ್ಷವಾಗಿ ಅಪಾರ ಕೊಡುಗೆ ನೀಡಿದ್ದಾರೆ.

ಅವರು - 2007, 2008, 2018 ಹಾಗೂ 2019 ರಲ್ಲಿ ಅವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದವರು ಅವರು. ಈ ಪೈಕಿ 2007 ಹಾಗೂ 2018ರಲ್ಲಿ ಅಲ್ಪಾವಧಿ ದಿನಗಳ ಅವಧಿಗೆ ಗಾದಿಯಲ್ಲಿದ್ದ ಅವರು, 2008ರಲ್ಲಿ ಮುಖ್ಯಮಂತ್ರಿ ಆದಾಗ ಮೂರು ವರ್ಷಕ್ಕೂ ಸ್ವಲ್ಪ ಹೆಚ್ಚು ಹಾಗೂ 2019ರ ಜುಲೈನಿಂದ ಎರಡು ವರ್ಷ ಆಡಳಿತದ ಚುಕ್ಕಾಣಿ ಹಿಡಿದು ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

ಯಡಿಯೂರಪ್ಪ ನವರ ಸಾಮಾಜಿಕ ಹೋರಾಟಗಳು

1974ರಲ್ಲಿ 'ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ' ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ಪ್ರಕರಣದಿಂದ ಸಾಗಿ, 1988 ರಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಬಸವ-ನಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ, ಕೂಲಿಗಾಗಿ ಕಾಳು ಯೋಜನೆಯ ಭ್ರಷ್ಟಾಚಾರ, ಸಿ ಮತ್ತು ಡಿ ವರ್ಗದ ರೈತರ ಜಮೀನಿನನ್ನು ಅರಣ್ಯ ಇಲಾಖೆಯು ಸ್ವಾಧೀನದ ಪಡಿಸಿಕೊಳ್ಳಲು ಮುಂದಾದಾಗ ಅದರ ವಿರುದ್ಧ ಹೋರಾಟ, ನಕಲಿ ಛಾಪಾ ಕಾಗದ ಹಗರಣ, ಸಿಇಟಿ ಗೊಂದಲಗಳಿಗೆ ಸಂಬಂಧಿಸಿದಂತೆ ಕೈಗೊಂಡ ಹೋರಾಟಗಳು, ರಾಜ್ಯ ವ್ಯಾಪಿಯಾಗಿ ಸ್ವೀಕೃತವಾದವು.

1998 ರಲ್ಲಿನ ಕಾವೇರಿ ಹೋರಾಟ ಅವರ ಸಾಮಾಜಿಕ ಮತ್ತು ರಾಜಕೀಯ ಬದುಕಿನ ವಿಶೇಷ ತಿರುವು ಪಡೆದುಕೊಂಡಿದೆ .

ಕೃಷ್ಣ ಮೇಲದಂಡ ಯೋಜನೆ ನೀರಾವರಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಿ ಭೂಸ್ವಾಧೀನ ಮತ್ತು ಮೂಲಸೌಕರ್ಯಕ್ಕಾಗಿ ಅನುದಾನ ನೀಡಿ ಬಾಗಲಕೋಟೆ ,ವಿಜಯಪುರ ,

ಮತ್ತು ಯಾದಗಿರಿ ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕೋವಿಡ ನಿರ್ವಹಣೆ 

ಕೋವಿಡ್ ಸಂಕಷ್ಟ ಕಾಲದಲ್ಲಿ ಅಮ್ಲಜನಕ ಪೂರೈಕೆ, ಅವುಗಳ ಸಮರ್ಪಕ ನಿರ್ವಹಣೆಗೆ ಆಸ್ಪತ್ರೆ-ಗಳಲ್ಲಿ ಸೂಕ್ತ ಪೈಪಿಂಗ್ ವ್ಯವಸ್ಥೆ, ಪಿಪಿಪಿ ಕಿಟ್‌ಗಳು, ಗುಳಿಗೆ-ಇಂಜೆಕ್ಷನ್‌ಗಳ ಲಭ್ಯತೆ ಖಾತರಿಗೊಳಿ. ಸುವುದು, ಲಸಿಕೆ, ಮುಂಚೂಣಿ ಕಾರ್ಯಕರ್ತರ ಸಜ್ಜುಗೊಳಿಸುವಿಕೆ, ಆರೋಗ್ಯ ಕಾರ್ಯಕರ್ತರ ನಿಯೋಜನೆ, ವಾರ್ ರೂಮ್ ಕಾರ್ಯಾಚರಣೆ, ದತ್ತಾಂಶ ಸಂಗ್ರಹ, ಸಂತ್ರಸ್ತರಿಗೆ ಪರಿಹಾರ ವಿತರಣೆ.

ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಹೀಗೆ ಹಲವಾರು ಏರ್ಪಾಡುಗಳನ್ನು ಮಾಡಿದರು.

ಸೋಂಕಿನಿಂದಾಗಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರವನ್ನು ಶೀಘ್ರ ಲಭ್ಯವಾಗುವಂತೆ ಮಾಡಲು ಕಾಳಜಿ ವಹಿಸಿದರು.

ಕೋವಿಡ್ ಪರೀಕ್ಷೆಯನ್ನು ಉಚಿತವಾಗಿ ಸಾರ್ವತ್ರಿಕವಾಗಿ ವಿಸ್ತರಿಸುವಂತೆ ಕ್ರಮ ಕೈಗೊಂಡಿದ್ದು, ಉಚಿತ ವ್ಯಾಕ್ಸಿನ್ ವ್ಯವಸ್ಥೆಯನ್ನೂ ಮಾಡಿ ಕೋವಿಡ್ ನಿಗ್ರಹದಲ್ಲಿ ಕರ್ನಾಟಕ ದೇಶದ ಗಮನವನ್ನೇ ಸೆಳೆಯಿತು. ಈ ಸಂದರ್ಭದಲ್ಲಿ ಪ್ರತಿ ಹೆಕ್ಟೇರ್‌ಗೆ ₹25,000 ಪರಿಹಾರ, ವ್ಯವಹಾರಿಕವಾಗಿ ಹೆಚ್ಚು ನಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿಯ 2,90,000 ಜನರಿಗೆ ₹5,000 ಪರಿಹಾರ ನೀಡಿದ್ದು 7,75,000 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನಿಯಮಿತವಾಗಿ ₹5000 ನೀಡಿದ್ದು, ಈ ವರ್ಗದ ಜನರ ಆರ್ಥಿಕ ಸಂಕಷ್ಟವನ್ನು ನಿವಾರಿಸುವಲ್ಲಿ ಗಮ್ಮ ಪರಿಣಾಮ ಬೀರಿತು.

ಜನಪರ ಕಾರ್ಯದ ಹಾದಿ 

೧) 2008-2011 ಅಧಿಕಾರಾವಧಿಯಲ್ಲಿ ಅನೇಕ ಸುಧಾರಣೆ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು

೨) 2008ರಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ. ರಾಜ್ಯದಲ್ಲಿ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ ರೈತರ ಕೃಷಿ ಸಾಲ ಯೋಜನೆ ಜಾರಿ

೩)ಸಾವಯವ ಕೃಷಿ ಯೋಜನೆ ₹10.05 ಕೋಟಿ ವಿನಿಯೋಗ 83 ಸಾವಿರ ರೈತರನ್ನು ಇದರಲ್ಲಿ ತೊಡಗುವಂತೆ ಮಾಡಿ 76 ಸಾವಿರ ಹೆಕ್ಟರ್ ಭೂಮಿಯಲ್ಲಿ ಇದನ್ನು ಜಾರಿಗೊಳಿಸಲಾಯಿತು

೪)ಸುವರ್ಣ ಭೂಮಿ ಯೋಜನೆಯಲ್ಲಿ ಹತ್ತು ಲಕ್ಷ ರೈತರ ಕುಟುಂಬಕ್ಕೆ ಅನುಕೂಲವಾಗುವಂತೆ ಅವರ ಜೀವನಮಟ್ಟ ಉತ್ತಮವಾಗುವಂತೆ ಮಾಡುವಲ್ಲಿ ಸಫಲವಾಯಿತು

೫)ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಕಡುಬಡರಿಗೆ ₹400 ಮಾಸಾಶನ

೬)ಸರ್ಕಾರಿ, ಸರ್ಕಾರೇತರ ಅನುದಾನಿತ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಸುಮಾರು ₹125 ಕೋಟಿ ವೆಚ್ಚದಲ್ಲಿ ಸೈಕಲ್‌ ವಿತರಣೆ

೭)ಆರೋಗ್ಯ ಕವಚ ಯೋಜನೆಯಡಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ತುರ್ತು ಸೇವೆಯ ವಾಹನಗಳನ್ನು ಜನರ ಬಳಕೆಗೆ ಬಿಡುಗಡೆ

೮) ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ₹1 ಲಕ್ಷ ರೂಪಾಯಿ ನೆರವು

೯)ನೇಕಾರರ ಒಂದು ಲಕ್ಷ ರೂವರೆಗಿನ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ, ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ವಿಮೆ ಪಾವತಿ, ಕೆರೆಗಳ ಪುನಶ್ಚತ-ನಕ್ಕೆ ಮಿಷನ್ ಕಲ್ಯಾಣಿ ಯೋಜನೆಗಳ ಜಾರಿ

೧೦)ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಶಿಕ್ಷಣ ಒದಗಿಸಲು ತಿಂಗಳಿಗೆ ₹3,500 ನೀಡುವಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಜಾರಿ 

೧೧)21 ವರ್ಷ ತುಂಬಿದ ಹೆಣ್ಣುಮಕ್ಕಳಿಗೆ ₹1 ಲಕ್ಷ ನೆರವು ಘೋಷಣೆ

೧೨)ಹಾಲಿನ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಿದ್ದ ಯಡಿಯೂರಪ್ಪ ಅವರು 8.8 ಲಕ್ಷ ಹಾಲು ಉತ್ಪಾದಕರ ಖಾತೆಗೆ 2,446.68 ಕೋಟಿ ಜಮೆ ಮಾಡಿದ್ದರು. ಇದರಿಂದ ಪ್ರತಿ ನಿತ್ಯ 45 ಲಕ್ಷ ಲೀಟ‌ರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಕ್ರಮೇಣ 85 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು

೧೩) 91.19 ಲಕ್ಷ ರೈತರ ಖಾತೆಗೆ ಎರಡು ಕಂತುಗಳಲ್ಲಿ ನೇರವಾಗಿ ₹4 ಸಾವಿರ ಜಮೆ. ಅದಕ್ಕಾಗಿ ಮೊದಲ ಕಂತಿನಲ್ಲೇ 9,862.21 ಕೋಟಿ ನೀಡಿದ್ದರು

೧೪)ಸಾರಾಯಿ ನಿಷೇಧಿಸುವ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತು, ಜಾರಿಗೊಳಿಸುವಲ್ಲಿ ಯಶಸ್ವಿ