ಪಾರ್ವತಿ ಪರಮೇಶ್ವರರ ಜಗತ್ತಿನ ಮೊದಲ ಪ್ರೇಮ ವಿವಾಹವೆ ಇಂದಿನ ಮಾಹ ಶಿವರಾತ್ರಿ ಆಚರಣೆ

ಪಾರ್ವತಿ ಪರಮೇಶ್ವರರ ಜಗತ್ತಿನ ಮೊದಲ ಪ್ರೇಮ ವಿವಾಹವೆ ಇಂದಿನ ಮಾಹ ಶಿವರಾತ್ರಿ ಆಚರಣೆ
ಜಗತ್ತಿನ ಸೃಷ್ಟಿಕರ್ತನಾದ ಪರಮೇಶ್ವರ ಹಾಗೂ ಆದಿಪರಾಶಕ್ತಿ ಪಾರ್ವತಿ ದೇವಿಯವರ ಜಗತ್ತಿನ ಮೊದಲ ಪ್ರೇಮ ವಿವಾಹವೆ ಇಂದಿನ ಮಹಾಶಿವರಾತ್ರಿಯಾಗಿ ಆಚರಣೆಯಲ್ಲಿ ಬಂದಿದೆ ಎಂದು ಅಧ್ಯಾತ್ಮಿಕ ಚಿಂತಕರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರು ತಿಳಿಸಿದ್ದಾರೆ ಅದೇ ರೀತಿಯಾಗಿ ಸ್ಮಶಾನರಾಜನಿಗಾಗಿ ಅರಮನೆಯನ್ನು ಬಿಟ್ಟು ಬಂದು ಪಾರ್ವತಿ ದೇವಿಯು ಪರಮೇಶ್ವರನ ಮದುವೆಯಾದ ಪ್ರೇಮದ ಕಥೆ ಇದಾಗಿದ್ದು ಈ ವಿಷಯದ ಕುರಿತು ಶಿವ ಪುರಾಣದಲ್ಲಿ ಉಲ್ಲೇಖವಾಗಿದೆ ಇಂದಿನ ಶಿವರಾತ್ರಿಯ ಜಾಗರಣೆಯನ್ನು ಪ್ರತಿಯೊಬ್ಬರು ವಿಧಿ ಬದ್ಧವಾಗಿ ಆಚರಣೆ ಮಾಡಿ ಪರಮೇಶ್ವರನ ಮತ್ತು ಆದಿಶಕ್ತಿ ಪಾರ್ವತಿ ದೇವಿಯ ಅನುಗ್ರಹಕ್ಕೆ ಪ್ರತಿಯೊಬ್ಬರು ಪಾತ್ರರಾಗಬೇಕು ನಿಯಮ ಬದ್ಧವಾಗಿ ಶಿವರಾತ್ರಿ ಹಬ್ಬದ ಜಾಗರಣೆಯನ್ನು ಪ್ರತಿಯೊಬ್ಬ ದೇವತಾ ಉಪಾಸನೆಯ ಆರಾಧಕರು ಮಾಡಬೇಕು ಇದರಿಂದ ಜನ್ಮಜನ್ಮಾಂತರದ ಲೋಪ ದೋಷಗಳಿಂದ ಮುಕ್ತಿ ಹೊಂದಬಹುದು ಎಂದು ಶಿವ ಪುರಾಣದಲ್ಲಿ ಉಲ್ಲೇಖವಾಗಿದೆ ಎಂದು ಆಧ್ಯಾತ್ಮಿಕ ಚಿಂತಕರಾದ ಸಿದ್ದಲಿಂಗ್ ಹೆಚ್ ಪೂಜಾರಿ ಹಾಲಗಡ್ಲಾ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು