ಸೇಡಂ ನಗರದಲ್ಲಿ ಶಿವರಾತ್ರಿ ಮಹಾತ್ಮೆ ಕಾರ್ಯಕ್ರಮ ಹಾಗೂ ಕುಂಭಮೇಳದಲ್ಲಿ ಭಾಗವಹಿಸಿದ ಗಣ್ಯ ಮಾನ್ಯರಿಗೆ ಸನ್ಮಾನ

ಸೇಡಂ ನಗರದಲ್ಲಿ ಶಿವರಾತ್ರಿ ಮಹಾತ್ಮೆ ಕಾರ್ಯಕ್ರಮ ಹಾಗೂ ಕುಂಭಮೇಳದಲ್ಲಿ ಭಾಗವಹಿಸಿದ ಗಣ್ಯ ಮಾನ್ಯರಿಗೆ ಸನ್ಮಾನ

ಸೇಡಂ ನಗರದಲ್ಲಿ ಶಿವರಾತ್ರಿ ಮಹಾತ್ಮೆ ಕಾರ್ಯಕ್ರಮ ಹಾಗೂ ಕುಂಭಮೇಳದಲ್ಲಿ ಭಾಗವಹಿಸಿದ ಗಣ್ಯ ಮಾನ್ಯರಿಗೆ ಸನ್ಮಾನ

ಸೇಡಂ ನಗರದ ಬಸವನಗರದಲ್ಲಿ ಶಿವರಾತ್ರಿ ನಿಮಿತ್ತವಾಗಿ ಮಂಗಳವಾರದಂದು ಮುಂಜಾನೆ ಶಿವಲಿಂಗ ಅಭಿಷೇಕ ಹಾಗೂ ಮಹಾ ಪ್ರಸಾದವನ್ನು ಆಯೋಜಿಸಲಾಗಿತ್ತು.

ಸಾಯಂಕಾಲ ಧಾರ್ಮಿಕ ಸತ್ಕಾರ ಹಾಗೂ ಶಿವರಾತ್ರಿ ಮಹಾತ್ಮೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಕಟ್ಟಿ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ಉದ್ಘಾಟಿಸಿ ಮಾತನಾಡಿ ದೇವರ ಭಕ್ತಿಯಿಂದ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಆದ್ದರಿಂದ ಶಿವರಾತ್ರಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಮಹಾಶಿವರಾತ್ರಿ ಪರ್ವದ ಲಾಭವನ್ನು ಎಲ್ಲರೂ ಪಡೆದುಕೊಳ್ಳುವಂತೆ ಹೇಳಿದರು. 

ಸೂರ್ಯನಾರಾಯಣ ಚಿಮ್ಮನಚೋಡಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿವರಾತ್ರಿಯೂ ಇಡೀ ವರ್ಷದಲ್ಲಿಯೇ ಪುಣ್ಯವನ್ನು ಗಳಿಸಲು ಅತಿ ಶ್ರೇಷ್ಠವಾದ ದಿನವಾಗಿದೆ. ಈ ದೃಷ್ಟಿಯಿಂದ ಶಿವರಾತ್ರಿಯ ಪುಣ್ಯ ಲಾಭ ಎಲ್ಲರಿಗೂ ಸಿಗಲಿ ಎನ್ನುವ ಉದ್ದೇಶದಿಂದ ಸಾಮೂಹಿಕ ಅಖಂಡ ಶಿವ ನಾಮ ಜಪ ಕಾರ್ಯಕ್ರಮವನ್ನು ಕಳೆದ ಹನ್ನೆರಡು ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಮಾಜದ ಹಿರಿಯ ಮುಖಂಡರಾದ ಶರಣಪ್ಪಾ ಕಣೇಕಲ ಹಾಗೂ ಶಂಭುಲಿಂಗ ನಾಟೀಕರ ಮಾತನಾಡಿದರು. ಶಿವಕಾಂತಮ್ಮ ಚಿಮ್ಮನಚೋಡಕರ್ ವೇದಿಕೆ ಮೇಲಿದ್ದರು. ಅದೇ ರಿತಿಯಾಗಿ ಸೇಡಂ ತಾಲೂಕಿನ ಜೆನ್ನ ಶಿಟೊರಿಯೊ ಕರಾಟೆ ಅಸೋಸಿಯೇಷನ್ ರಾಷ್ಟ್ರ ರಾಷ್ಟ್ರಮಟ್ಟದ ಕ್ಯಾತ

ಕರಾಟೆ ಶಿಕ್ಷಕರು ಸಾಬಣ್ಣ. ಸಿ ಅಳ್ಳೊಳ್ಳಿ ಅವ್ರು ಇ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾಗವಹಿಸಿದ್ದರು ಅದೇ ರಿತಿಯಾಗಿ 

 ಅನೇಕ ವರ್ಷಗಳಿಂದ ದೇವರ ಭಜನೆ ಮಾಡುವ ಮೂಲಕ ಸಮಾಜದಲ್ಲಿ ದೇವರ ಬಗ್ಗೆ ಭಕ್ತಿ ಭಾವ ಮೂಡಿಸುತ್ತಿರುವ ಸಮಾಜದ ಹಿರಿಯರಿಗೆ ಹಾಗೂ ಮಹಾ ಶಿವರಾತ್ರಿ ಕಾರ್ಯಕ್ರಮಕ್ಕೆ ಶಿವನ ಮೂರ್ತಿಯನ್ನು ನೀಡಿದವರನ್ನು ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಶತಮಾನದ ಕುಂಭಮೇಳದಲ್ಲಿ ಪಾಲ್ಗೊಂಡ ಬಸವನಗರದ ನಾಗರಿಕರನ್ನು ಸನ್ಮಾನಿಸಲಾಯಿತು.ಇ ಕಾರ್ಯಕ್ರಮದಲ್ಲಿ ಬಸವನಗರದ ಹಿರಿಯರು ಯುವಕರು ತಾಯಂದಿರು ಮಕ್ಕಳು ಭಾಗವಹಿಸಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ಸವಿತಾ ವಹಿಸಿಕೊಂಡಿದ್ದರು ಸ್ವಾಗತಿ ಭಾಷಣ ಮತ್ತು ವಂದನಾರ್ಪಣೆಯ ಕಾರ್ಯಕ್ರಮವನ್ನು. ಪಲ್ಲವಿ ಅವರು ವಹಿಸಿಕೊಂಡಿದ್ದರು

ವರದಿ ಜೆಟ್ಟಪ್ಪ ಎಸ್ ಪೂಜಾರಿ