ಪೂರ್ವಜ್ಜರ ಬಲಿದಾನದಿಂದ ಸ್ವತಂತ್ರ ಸಿಕ್ಕಿದೆ. ಜಗದೀಶ ಚೌರ್
ಪೂರ್ವಜ್ಜರ ಬಲಿದಾನದಿಂದ ಸ್ವತಂತ್ರ ಸಿಕ್ಕಿದೆ. ಜಗದೀಶ ಚೌರ್
ಶಹಾಬಾದ್: ಭಾರತ ದೇಶ ಸ್ವತಂತ್ರಗೊಂಡು 78 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಸಾಧನೆ ಮಾಡಿದೆ. ಕೃಷಿ ರೈತನಿಂದ ಹಿಡಿದು ಚಂದ್ರಯಾನ 3ರ ವರೆಗೆ ಸಾಧಿಸಿ, ಇಡಿ ವಿಶ್ವದಲ್ಲಿ ಮಾದರಿಯ ದೇಶವಾಗಿ ಬೆಳೆಯುತ್ತಿದೆ ಎಂದು ತಹಸಿಲ್ದಾರ ಜಗದೀಶ ಚೌರ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ದೇಶದ ಸ್ವಾತಂತ್ರಕ್ಕಾಗಿ ಚಂದ್ರಶೇಖರ್ ಆಜಾದ್ ಅಶ್ಫಾಖುಲ್ಲಾ ಖಾನ್ ಸುಭಾಷ್ ಚಂದ್ರ ಬೋಸ್ ಅನೇಕ ಮಹನೀಯರು ಜೀವ ಬಲಿದಾನ ಕೊಟ್ಟು ನಮಗೆ ಸ್ವತಂತ್ರ ಗಳಿಸಿ ಕೊಟ್ಟಿದ್ದಾರೆ. ಇವತ್ತಿನ ಯುವ ಪೀಳಿಗೆ ಇದರ ಸಂದೇಶವನ್ನು ಅರ್ಥ ಮಾಡಿಕೊಂಡು ನಮ್ಮ ಪೂರ್ವಜರ ಬಲಿದಾನವನ್ನು ಯಾವತ್ತು ಮರೆಯದೆ ಅವರ ಆದರ್ಶ ವಿಚಾರಗಳನ್ನು ಪಾಲಿಸಬೇಕು. ಮತ್ತು ದೇಶವು ಇಗ ಬಡತನ, ಅನಕ್ಷರಸ್ತೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದದ ಹಲವು ಸಮಸ್ಯೆಗಳು ಕೂಡ ಎದುರಿಸುತ್ತಿದೆ,
ಯಾವುದೇ ಅನ್ಯ ಮಾರ್ಗಕ್ಕೆ ಬಲಿಯಾಗದೆ, ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಅವರು ಹೇಳಿ, ಧ್ವಜಾರೋಹಣ ಸಂದೇಶವನ್ನು ನೀಡಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ ಮಾತನಾಡಿ ಸ್ವತಂತ್ರ ನಮಗೆ ಸರಳವಾಗಿ ಸಿಕ್ಕಿಲ್ಲ ತ್ಯಾಗ ಬಲಿದಾನದಿಂದ ಸಿಕ್ಕಿದೆ ಎಂದು ಹೇಳಿದರು. ವೇದಿಕೆಯ ಮೇಲೆ ತಾ.ಪಂ ಇಒ ಮಲ್ಲಿನಾಥ ರಾವೂರ, ನಗರಸಭೆ ಪೌರಾಯುಕ್ತ ಡಾ. ಕೆ. ಗುರುಲಿಂಗಪ್ಪ ಹಾಗೂ ಸಿಪಿಐ ನಟರಾಜ ಲಾಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ, ಮಾದರಿ ಕೃಷಿ ರೈತನಾದ ರವಿಕುಮಾರ್ ಟಿ ತಳವಾರ ಮರತೂರು ಇವರಿಗೆ ಗಣ್ಯರು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಾಡ ಅಧ್ಯಕ್ಷ ಎಮ್ ಎ ರಶೀದ್, ಗ್ರೇಡ 2 ತಹಸಿಲ್ದಾರ ಗುರುರಾಜ ಸಂಗಾವಿ, ಪಿಎಸ್ಐ ಚಂದ್ರಕಾಂತ್ ಮೆಕಾಲೆ, ಜೆಸ್ಕಾಂ ಅಧಿಕಾರಿ ಸೈಯದ್ ಯುನುಸ್, ಕೃಷಿ ಅಧಿಕಾರಿ ಶಶಿಕಾಂತ್ ಭರಣಿ, ಸಿಡಿಪಿಓ ಅಧಿಕಾರಿ ಡಾ. ವಿಜಯಲಕ್ಷ್ಮಿ ಹೇರೂರು, ಡಾ. ಅಹಮದ್ ಪಟೇಲ್, ನಗರಸಭೆ ಸದಸ್ಯೆ ಪಾರ್ವತಿ ಪವರ ಹಾಗೂ ಪದವಿಪೂರ್ವ ಕಾಲೇಜಿನ ಸಿಬ್ಬಂದಿ ವರ್ಗ, ಸರ್ಕಾರಿ ಬಾಲಕರ ಪ್ರೌಢಶಾಲೆ ಹಾಗೂ ಉರ್ದು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಬನ್ನಪ್ಪ ಸೈದಾಪುರ್ ನಿರೂಪಿಸಿ ವಂದಿಸಿದರು. ವರದಿ ನಾಗರಾಜ್ ದಂಡವತಿ