ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಲಿಂಗರಾಜ ತಾರಫೈಲ್ ಅವರ ಜನ್ಮದಿನದ ಸರಳವಾಗಿ ಆಚರಣೆ

ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಲಿಂಗರಾಜ ತಾರಫೈಲ್ ಅವರ ಜನ್ಮದಿನದ ಸರಳವಾಗಿ ಆಚರಣೆ
ಕಲಬುರಗಿ: ಡಿ ಎಂ ಎಸ್ ಎಸ್ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ದಕ್ಷಿಣ ನಗರ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ಅವರ ಜನ್ಮದಿನದ ಪ್ರಯುಕ್ತ ದಲಿತ ಮಾದಿಗ ಸಮನ್ವಯ ರಾಜ್ಯ ಸಮಿತಿ ವತಿಯಿಂದ ನಗರದ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಇರುವ ನಿರಾಶ್ರಿತರಿಗೆ ಹಣ್ಣು ಹಂಪಲಗಳು ವಿತರಿಸಲಾಯಿತು.
ಹಣ್ಣು ಸ್ವೀಕರಿಸಿದ ಹಿರಿಯ ನಿರಾಶ್ರಿತ ತಾಯಂದಿರು ಮಾತನಾಡಿ ಸಮಾಜದಲ್ಲಿ ಜನುಮದಿನದಂದು ಡಿಜೆ ಹಚ್ಚಿ ಸರಾಯಿ ಕುಡಿದು ಪಟಾಕಿ ಸಿಡಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ದಿನಗಳಲ್ಲಿ ಯಾರು ಹಸಿವಿನಿಂದ ಬಳಲುತ್ತಿರುವವರೋ ಮತ್ತು ಪ್ರೀತಿ ಮಮತೆ ಕಳೆದುಕೊಂಡು ಸಾಕಷ್ಟು ಬಂಧುಗಳಿದ್ದು ಅನಾಥರಂತೆ ಆಶ್ರಮದಲ್ಲಿ ಕಾಲ ಕಳೆಯುತ್ತಿರುವವರ ನೆನೆದು ನಿರಾಶ್ರಿತ ತಾಯಂದಿರ ಮಧ್ಯೆ ಜನುಮದಿನ ಆಚರಣೆ ಮಾಡಿದ್ದೀರಿ ಲಿಂಗರಾಜ್ ತಾರಪೈಲ್ ಅವರು ನೂರು ಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿ ಎಂ ಎಸ್ ಎಸ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ, ಆಶ್ರಮದ ಮೇಲ್ವಿಚಾರಕಿ ಸಂಗೀತ, ಯುವ ಮುಖಂಡ ರವಿಚಂದ್ರ ವಗ್ಗೆ, ಹೊರಟಗಾರ್ತಿ ಸಂಜನಾ ಹೊಸಮನಿ, ಶರಣಮ್ಮ ಕೆ ವಗ್ಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.