ಆರೋಗ್ಯ ದೃಷ್ಟಿಯಿಂದ ಗ್ರಾಮೀಣ ಭಾಗದ ಜನರು ಶೌಚಾಲಯ ಬಳಸಬೇಕು: ಪಿಡಿಓ
ಆರೋಗ್ಯ ದೃಷ್ಟಿಯಿಂದ ಗ್ರಾಮೀಣ ಭಾಗದ ಜನರು ಶೌಚಾಲಯ ಬಳಸಬೇಕು: ಪಿಡಿಓ
ಕಮಲನಗರ ನ 26 :ಗ್ರಾಮೀಣ ಭಾಗದ ಜನರು ಶೌಚಾಲಯಗಳನ್ನು ತಪ್ಪದೇ ಬಳಸಬೇಕು. ಹೊರಗಡೆ ಮಲಮೂತ್ರ ವಿಸರ್ಜನೆ ಮಾಡಬಾರದು. ಇದರಿಂದ ಅಲ್ಲಿ ಸೊಳ್ಳೆಗಳು ಸಂಚರಿಸುತ್ತವೆ ಅದೇ ಸೊಳ್ಳೆಗಳು ತಮಗೆ ಕಚ್ಚಿದ್ದರೆ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬಿರುತ್ತದೆ ಎಂದು ಹೇಳಿದರು.
ಅವರು ಮಂಗಳವಾರ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ರವರ ಆದೇಶದ ಮೇರೆಗೆ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಆಯೋಜಿಸಿದ *ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ* ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದರು.
ಜನರು ತಮ್ಮ ಆರೋಗ್ಯದ ಗಮನ ಹರಿಸಬೇಕು. ಯಾರ ಬಳಿ ಶೌಚಾಲಯ ವ್ಯವಸ್ಥೆ ಇಲ್ಲವೋ ಅವರು ಸರ್ಕಾರದ ಯೋಜನೆಗಳ ಲಾಭ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.
ಆಂದೋಲನದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಮನೆ ಮನೆಗೆ ತೆರಳಿ ಶೌಚಾಲಯ ಬಳಕೆ, ಸ್ವಚ್ಚತೆಯ ಕುರಿತು ಅರಿವು ಮೂಡಿಸಿದರು.
ಈ ಸಮಯದಲ್ಲಿ ಗ್ರಾ.ಪಂ. ಅಧ್ಯಕ್ಷರು, ಎಬಿಪಿ ಫೇಲೋ ಅಮರ ಕೋಟೆ, ರಾಜೀವಗಾಂಧಿ ಸಂಯೋಜಕರಾದ ಸಂಪತ್ತ, ತಾ.ಪಂ. ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ನಾಗರಾಜ, ಸಾಯಿ, ಉತ್ತಮ ಸೇರಿದಂತೆ ಇತರರು ಉಪಸ್ಥಿತರಿದ್ದರು.