ಮಕ್ಕಳಿಗೆ ಪರೀಕ್ಷೆ ಭಯದಿಂದ ಮುಕ್ತರಾಗಬೇಕು :ಶ್ರೀ ಗುಂಡಪ್ಪ ಹುಡುಗೆ

ಮಕ್ಕಳಿಗೆ ಪರೀಕ್ಷೆ ಭಯದಿಂದ ಮುಕ್ತರಾಗಬೇಕು    :ಶ್ರೀ ಗುಂಡಪ್ಪ ಹುಡುಗೆ

ಮಕ್ಕಳಿಗೆ ಪರೀಕ್ಷೆ ಭಯದಿಂದ ಮುಕ್ತರಾಗಬೇಕು :ಶ್ರೀ ಗುಂಡಪ್ಪ ಹುಡುಗೆ              

 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೀದರ್ ಮತ್ತು ಗ್ರಾಮ ವಿಕಾಸ ಟ್ರಸ್ಟ್ (ರಿ) ಆಣದೂರ ಇವುಗಳ ಸಂಯುಕ್ತಾಶ್ರಯದಲ್ಲಿ ಆಣದೂರ ಗ್ರಾಮದ ಬಸವ ಮಂಟಪದಲ್ಲಿ SSLC ಫಲಿತಾಂಶ ಸುಧಾರಣೆಗಾಗಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಡಿಡಿಪಿಐ ಕಚೇರಿಯ APC ಶ್ರೀ ಗುಂಡಪ್ಪ ಹುಡುಗೆ ಅವರು ಮಾಡಿ ಬೀದರ್ ಜಿಲ್ಲೆಯಲ್ಲಿ SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಇಲಾಖೆಯಿಂದ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಭಯದಿಂದ ಮುಕ್ತರಾಗಬೇಕು. ಸಮಯ ಪಾಲನೆಗೆ ಮಕ್ಕಳು ಮಹತ್ವ ಕೊಡಬೇಕು. ಪಠ್ಯದ ವಿಷಯ ಮತ್ತೆ ಮತ್ತೆ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು ವಿದ್ಯಾರ್ಥಿ ಜೀವನದ ಭವಿಷ್ಯ ಬದಲಾಯಿಸುವ ಮತ್ತು ರೂಪಿಸುವ ಮೊದಲ ಹಂತ ಹತ್ತನೇ ತರಗತಿ ಆಗಿದೆ. ವಿಧ್ಯಾರ್ಥಿ ತನ್ನ ಕನಸಿನ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಲು ಈ ಹಂತ ಪ್ರಮುಖವಾಗಿದೆ. ಆದ್ದರಿಂದ ಮಕ್ಕಳು ಆಲಸ್ಯಕ್ಕೊಳಗಾಗದೆ ನಿರಂತರ ಅಧ್ಯಯನ ಮಾಡಬೇಕು.ಅಂಕ ಗಳಿಸಲು ಮಾತ್ರ ಪ್ರಯತ್ನಿಸದೇ ವಿಷಯ ಜ್ಞಾನ ಪಡೆಯಲು ಹಾತೊರೆಯಬೇಕು ಎಂದು ತಿಳಿಸಿದರು. ಹಾಗೂ ಬೀದರಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು SSLC ಫಲಿತಾಂಶ ಸುಧಾರಣೆಗಾಗಿ ಮಾಡುತ್ತಿರುವ ಪ್ರಯತ್ನ ಮೆಚ್ಚುವಂತಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇಂದಿನ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಗಣಿತ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶಿವಶರಣಪ್ಪ ಬಿರಾದರ್, ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಂಪೂರ್ಣಾನಂದ, ಇಂಗ್ಲೀಷ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪ್ರಶಾಂತ್ ಧಾಡೆ, ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪಾಂಡುರಂಗ ನೀಡವಂಚೆ ಅವರೆಲ್ಲ ಮಕ್ಕಳಿಗೆ ತಮ್ಮ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ರಾಮಶೆಟ್ಟಿ ಜಾಧವ್, ಅತಿಥಿಯಾಗಿ ಶ್ರೀ ದಿಗಂಬರ ಪಾಷಾಪೂರ್, ಶ್ರೀಮತಿ ಪಾರ್ವತಿ ಕಪಲಾಪುರ, ಶ್ರೀ ಅಶೋಕ್ ಗೊಂಡ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ರೇಣುಕಾ ಮಠಪತಿ, ಸ್ವಾಗತವನ್ನು ಕು. ದಿವ್ಯರಾಣಿ, ವಂದನಾರ್ಪಣೆಯನ್ನು ಶ್ರೀಮತಿ ಗೀತಾ ಶಂಕರ್ ನಡೆಸಿಕೊಟ್ಟರು. ವರದಿ ಮಛಂದ್ರನಾಥ ಕಾಂಬ್ಳೆ ಬೀದರ್