ಮೆಗಾ ಜವಳಿ ಪಾಕ್೯ಗೆ ೩೦ ಕೋಟಿ ರೂ. ಬಿಡುಗಡೆ

ಮೆಗಾ ಜವಳಿ ಪಾಕ್೯ಗೆ ೩೦ ಕೋಟಿ ರೂ. ಬಿಡುಗಡೆ

ಮೆಗಾ ಜವಳಿ ಪಾಕ್೯ಗೆ ೩೦ ಕೋಟಿ ರೂ. ಬಿಡುಗಡೆ

ಕಲ್ಯಾಣ ಕಹಳೆ ಕಲಬುರಗಿ :ತಾಲ್ಲೂಕಿನ ಫಿರೋಜಾಬಾದ, ಹೊನ್ನಕಿರಣಗಿ ಮತ್ತು ನದಿಸಿಣ್ಣೂರ ಗ್ರಾಮದಲ್ಲಿ ಉದ್ದೇಶಿತ ಮೆಗಾ ಜವಳಿ ಪಾಕ್೯ಗೆ ರಾಜ್ಯ ಸರ್ಕಾರದಿಂದ ೩೦ ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ ಎಂದು ಕ್ಷೇತ್ರದ ಶಾಸಕ ಎಂ. ವೈ ಪಾಟೀಲ್ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಸಂಜೆ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನೂ ಫರಹತಾಬಾದ ಸುತ್ತಲಿನ ಹಳ್ಳಿಗಳಲ್ಲಿ ಎಂಟು ಸಾವಿರ ಎಕರೆ ಭೂಪ್ರದೇಶದಲ್ಲಿ ಆರುಕ್ಕಿಂತ‌ ಹೆಚ್ಚು ಕಾರ್ಖಾನೆ ಮಂಜೂರಾಗಿವೆ. ಗುಲಬರ್ಗಾ ಸಿಮೆಂಟ್ ಫ್ಯಾಕ್ಟರಿ ಯಿಂದ ರೈತರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

೧೪ ಕೆರೆ ಭರ್ತಿ ಅಫಜಲಪುರ ಕ್ಷೇತ್ರದಲ್ಲಿ ಈ ವರ್ಷ ಕೆರೆ ತುಂಬಿಸುವ ಯೋಜನೆ ಅಡಿ, ಮಣ್ಣೂರ, ಮಾಶಾಳ, ಕರಜಗಿ, ತೆಲ್ಲೂಣಿ, ಬಂದರವಾಡ ಸೇರಿ ೧೪ ಕೆರೆ ತುಂಬಿಸಲಾಗುತ್ತಿದೆ. ಇದಕ್ಕಾಗಿ ೩೫೦ ಕೋಟಿ ರೂ. ಅನುದಾನ ಮಂಜೂರಾಗಿದೆ. ಅಲ್ಲದೆ ಫಿರೋಜಾಬಾದ ಭೀಮಾ ಏತ ನೀರಾವರಿ ಯೋಜನೆ ಅಡಿ ಸುಮಾರು ೭೫ ಸಾವಿರ ಎಕರೆ ಭೂಪ್ರದೇಶ ನೀರಾವರಿ ವ್ಯಾಪ್ತಿ ಗೊಳ್ಳಪಡಲಿದೆ. ಸುಮಾರು ೪೦೦ ಕೋಟಿ ರೂ. ಅನುದಾನ ಬಿಡುಗಡೆ ಗೊಂಡಿದೆ ಎಂದು ಮಾಹಿತಿ ನೀಡಿದರು.

ಫರಹತಾಬಾದ ಪಿಎಚ್ ಸಿ ಮೇಲ್ದರ್ಜೆಗೆ

ತಾಲ್ಲೂಕಿನ ಫರಹತಾಬಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಅನುಮೋದನೆ ಸಿಕ್ಮಿದೆ ಎಂದ ಅವರು, ಫರಹತಾಬಾದ ಹೋಬಳಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಾಗಲಿ, ಮಲತಾಯಿ ‌ಧೋರಣೆ‌‌ ತಳಿದಿಲ್ಲ ಎಂದು‌ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಅಗತ್ಯ ಬಿದ್ದರೆ ಫರಹತಾಬಾದ ತಾಲ್ಲೂಕು ಕೇಂದ್ರವಾಗುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದರು. 

ಭೀಮಾ ನದಿ ತೀರದ ೧೬ ಹಳ್ಳಿ ಸ್ಥಳಾಂತರ

ಭೀಮಾ ನದಿ ತೀರದ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ, ನದಿಸಿಣ್ಣೂರ, ಭಾಗಶ: ಸರಡಗಿ(ಬಿ), ಭಾಗಶಃ ಹಾಗರಗುಂಡಗಿ ಮತ್ತು ಅಫಜಲಪುರ ತಾಲ್ಲೂಕಿನ ಕೆಲ ಹಳ್ಳಿಗಳು ಸೇರಿವೆ ಎಂದರು.

ಜಿಪಂ‌ ಮಾಜಿ ಅಧ್ಯಕ್ಷ ಸಾಯಬಣ್ಞ ನೀಲಪ್ಪಗೊಳ, ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಮಶಾಖ‌ ಪಟೇಲ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸುರೇಶ ತಿಬ್ಬಶೆಟ್ಟಿ ಜೊತೆಗಿದ್ದರು.

ಗುಲಬರ್ಗಾ ಸಿಮೆಂಟ್ ಫ್ಯಾಕ್ಟರಿ ಯಿಂದ ಭೂಸಂತ್ರಸ್ತರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ. ಮಾಚ್೯ ೬ ರೊಳಗೆ ಸಂಬಂಧಿಸಿದವರ ಜತೆ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಭೂಸಂತ್ರಸ್ತರ ನಿಯೋಗದೊಂದಿಗೆ ಸಿಎಂ ಬಳಿ‌ ಕರದೊಯ್ದು ಸರ್ಕಾರದ ಮೇಲೆ ಒತ್ತಡ ತರುವೆ

                                           -  ಎಂ.ವೈ ಪಾಟೀಲ್, ಶಾಸಕ