ಮಹಿಳೆಯರಲ್ಲಿ ಅಪಾರ ಜ್ಞಾನ, ಶಕ್ತಿ ಅಡಗಿದೆ.

ಮಹಿಳೆಯರಲ್ಲಿ ಅಪಾರ ಜ್ಞಾನ, ಶಕ್ತಿ ಅಡಗಿದೆ.

ಮಹಿಳೆಯರಲ್ಲಿ ಅಪಾರ ಜ್ಞಾನ, ಶಕ್ತಿ ಅಡಗಿದೆ.

ಚಿಟಗುಪ್ಪ: 21ನೆಯ ಶತಮಾನದ ಮಹಿಳೆಯರು ಸರ್ವ ರೀತಿಯಲ್ಲಿಯೂ ಪ್ರಬಲರಾಗಿ ಬೆಳೆದಿದ್ದಾರೆ. ಶೈಕ್ಷಣಿಕವಾಗಿ - ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದ್ದಾರೆ. ಮಹಿಳೆಯರಲ್ಲಿ ಅಪಾರ ಜ್ಞಾನ, ಶಕ್ತಿ ಮತ್ತು ತಾಳ್ಮೆ ಅಡಗಿದೆ ಎಂದು ತಾಲೂಕಿನ ದಂಡಾಧಿಕಾರಿಗಳಾದ ಮಂಜುನಾಥ ಪಂಚಾಳ ನುಡಿದರು

ನಗರದ ಮಡಿವಾಳೇಶ್ವರ ಗವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಎಲ್ಲಾ ಹಂತಗಳಲ್ಲಿ ಪುರುಷರನ್ನು ಹಿಂದಿಕ್ಕಿ ಬೆಳೆಯುತ್ತಿದ್ದಾರೆ. ಇದು ಸಂತೋಷಪಡುವ ಸಂಗತಿ. ವಿಧ್ಯಾರ್ಥಿನಿಗಳ ಫಲಿತಾಂಶದಿಂದ ಹಿಡಿದು ಬಾಹ್ಯಾಕಾಶಕ್ಕೆ ಹೋಗಿ ಬರುವಷ್ಟು ಮಹಿಳೆಯರು ಅಭಿವೃದ್ಧಿ ಹೊಂದಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸಿದ್ದಾರೆ. ಮತ್ತು ನಿರಂತರವಾಗಿ ಸಾಧಿಸುತ್ತಿದ್ದಾರೆ.

ಇವರ ಸಾಧನೆಗೆ ದೇಶ ಹೆಮ್ಮೆ ಪಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ 

ಪ್ರವೀಣಕುಮಾರ ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮವು ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಒಂದು ವಿಶಿಷ್ಟ ಮತ್ತು ವೈಜ್ಞಾನಿಕ ಮನೋಭಾವ ಬಿತ್ತುವ ಕಾರ್ಯಕ್ರಮವಾಗಿದೆ.ಈ ಕಾರ್ಯಕ್ರಮವು 

ಅನೇಕ ಮಹಿಳೆಯರಿಗೆ ಬದುಕನ್ನು ಕಟ್ಟಿ ಕೊಡುತ್ತಿದೆ. ನಿರ್ಗತಿಕರಿಗೆ ಮಾಶಾಸನ, ಮನೆ ಇಲ್ಲದ ಪಲಾನುಭವಿಗಳಿಗೆ ವಾತ್ಸಲ್ಯ ಮನೆ, ಅಂಗವಿಕಲರಿಗೆ ಪರಿಕರಣಗಳನ್ನು ಕೊಡುವಂತಹ ವ್ಯವಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಈ ಯೋಜನೆಯಿಂದ ಅನೇಕ ಮಹಿಳೆಯರು ಫಲಾನುಭವಿಗಳಾಗಿದ್ದಾರೆ.

ಈ ಯೋಜನೆಯಿಂದ ಮಹಿಳೆಯರ ಬದುಕು ನಂದನ ವನವಾಗಲೆಂದು ಶುಭ ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ 

ಜ್ಞಾನ ವಿಕಾಸ ಕಾರ್ಯಕ್ರಮವು ಹೆಣ್ಣು ಮಕ್ಕಳಿಗೆ ಇದೊಂದು ಕೌಶಲ್ಯವನ್ನು ನಿರೂಪಿಸುವ ಒಂದು ಒಳ್ಳೆಯ ವೇದಿಕೆ. ಈ ವೇದಿಕೆ ಉಪಯೋಗಿಸಿಕೊಂಡು ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಬೇಕು. ಸರ್ವರಿಗೂ ಮಾದರಿಯಾಗುವ ಕೆಲಸ ಮಾಡಬೇಕು ಎಂದರು.

ಚನ್ನಬಸವ ಪಟ್ಟದ್ದೇವರು ಗುರುಕುಲ ಕಂದಗೋಳ ಮುಖ್ಯೋಪಾಧ್ಯಾಯನಿ ರೇಖಾ ಮಂಜುನಾಥ್ ರವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ

ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅಸ್ಲಾಂಮೀಯಾ ಆಜಾಮ್ ಸ್ವಿಟ್ ಹೌಸ್, ಸಂಗಮೇಶ ಎನ್ ಜವಾದಿ, ಅನಿಲಕುಮಾರ ಸಿಂಧೆ ಕಾರ್ಯಕ್ರಮದ ಕುರಿತು ಮಾತನಾಡಿದರು.

ತಾಲೂಕಿನ ಯೋಜನಾಧಿಕಾರಿಗಳಾದ ಬಸುವರಾಜ ಕೆ ರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಸಂತೋಷ ಹಳ್ಳಿಖೇಡಕರ್, ರಾಜು ಹಡಪದ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕರು, ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳು ,ಕೃಷಿ ಮೇಲ್ವಿಚಾರಕರು, ತಾಲೂಕಿನ ಅಂತರಿಕ ಲೆಕ್ಕಪರಿಶೋಧಕರು ಯೋಜನಾ ಕಚೇರಿಯ ಸಿಬ್ಬಂದಿಗಳು, ತಾಲೂಕಿನ ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು, ಗಣ್ಯರು, ಮಾತೆಯರು ಹಾಜರಿದ್ದರು.

ವರದಿ - ಸಂಗಮೇಶ ಎನ್ ಜವಾದಿ.